PMEGP Application-ಸ್ವಂತ ಉದ್ದಿಮೆಗೆ ಈ ಯೋಜನೆಯಡಿ ಸಿಗುತ್ತದೆ 35% ಸಬ್ಸಿಡಿ! ಇಲ್ಲಿದೆ ಸಂಪೂರ್ಣ ವಿವರ

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಯೋಜನೆಯಡಿ ತಮ್ಮದೇ ಆದ ಸ್ವಂತ ಉದ್ದಿಮೆ/ಉದ್ಯೋಗ/ಬುಸಿನೆಸ್ ಅನ್ನು ಪ್ರಾರಂಭಿಸುವವರು ಒಟ್ಟು ಸಾಲದ ಮೇಲೆ ಶೇ 35% ರಷ್ಟು ಸಹಾಯಧನವನ್ನು ಪಡೆಯಲು ಅವಕಾಶವಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ನಮ್ಮ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ(PMEGP Application) ಹಲವಾರು ಸಹಾಯಧನ ಆಧಾರಿತ ಯೋಜನೆಗಳು ಲಭ್ಯವಿದ್ದು ಈ ಅಂಕಣದಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಯೋಜನೆಯ ಕುರಿತು ಅಗತ್ಯ ಮಾಹಿತಿಯನ್ನು ವಿವರಿಸಲಾಗಿದೆ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ(PMEGP Subsidy Amount) ಯಾವೆಲ್ಲ ಉದ್ದಿಮೆಗೆ ಸಬ್ಸಿಡಿ ಪಡೆಯಬಹುದು? ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತ ಮಾನದಂಡಗಳು ಯಾವುವು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅಗತ್ಯ ದಾಖಲೆಗಳು ಯಾವುವು? ಇನ್ನಿತರೆ ಅವಶ್ಯಕ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

PMEGP Loan-ಯಾವೆಲ್ಲ ಉದ್ದಿಮೆ ಸಿಗಲಿದೆ ಸಹಾಯಧನ?

ಸಿದ್ಧ ಉಡುಪು ತಯಾರಿಕೆ/ಟೈಲರಿಂಗ್,ಬ್ಯೂಟಿ ಪಾರ್ಲರ್,ಪೇಪರ್ ಪ್ಲೇಟ್ ತಯಾರಿಕೆ,ಇಲೆಕ್ಟಿಕಲ್ ಸರ್ವಿಸ್, ಸೈಬರ್ ಸೆಂಟರ್, ಟೂ ವೀಲರ್ ಸರ್ವಿಸ್, ಸೌಂಡ್ಸ್ & ಲೈಟಿಂಗ್ಸ್, ಶಾಮಿಯಾನ ಸರ್ವಿಸ್, ಮರದ ಕೆಲಸ, ಆಹಾರ ಉತ್ಪನ್ನ ತಯಾರಿಕೆ, ಅಡಿಕೆ ಹಾಳೆ ತಟ್ಟೆ ತಯಾರಿಕೆ, ಸೆಂಟ್ರಿಂಗ್ ಶೀಟ್ ಸರ್ವಿಸ್, ಮೊಬೈಲ್ ಶಾಪ್, ಹೋಟೇಲ್/ಕ್ಯಾಂಟೀನ್ (ಸಸ್ಯಹಾರಿ), ಅಕ್ಕಿ ಹಿಟ್ಟಿನ ಗಿರಣಿ, ಎಣ್ಣೆ ಮಿಲ್, ಬೇಕರಿ ವಸ್ತು ತಯಾರಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಹೊಗೆ ಚೆಕ್ ತಪಾಸಣಾ ಕೇಂದ್ರ, ಸ್ಟೀಲ್ ಪರ್ನಿಚರ್/ವೆಲ್ಡಿಂಗ್ ವರ್ಕ್ಸ್, ಕ್ಯಾಟರಿಂಗ್ ಸರ್ವಿಸ್, ಗೇರು ಬೀಜ ಪರಿಷ್ಕರಣೆ,

ದೀಪದ ಬತ್ತಿ ತಯಾರಿಕೆ, ತಂಪು ಪಾನೀಯ ತಯಾರಿಕೆ.

PMEGP Scheme-ಅರ್ಜಿ ಸಲ್ಲಿಸಲು ಅರ್ಹರು:

ಅಭ್ಯರ್ಥಿಯು ಭಾರತೀಯ ನಿವಾಸಿಯಾಗಿರುವುದು ಕಡ್ಡಾಯ.

ಎಲ್ಲಾ ವರ್ಗ/ಜಾತಿಯ ಅಭ್ಯರ್ಥಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದು.

ಈಗಾಗಲೇ ಈ ಯೋಜನೆಯಡಿ ಒಂದು ಬಾರಿ ಸಹಾಯಧನವನ್ನು ಪಡೆದಿರುವವರು ಮತ್ತೊಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಗ್ರಾಮೀಣ ಮತ್ತು ನಗರ ಭಾಗದ ಅರ್ಜಿದಾರರು ಅರ್ಜಿ ಸಲ್ಲಿಸಲು ಅರ್ಹರು.

PMEGP Loan details in kannada-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಅವಶ್ಯವಿರುವ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕ ಕೇಂದ್ರವನ್ನು(DIC) ನೇರವಾಗಿ ಭೇಟಿ ಮಾಡಿ ಅಗತ್ಯ ವಿವರ ಸಲ್ಲಿಸಿ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು, ಸ್ವಂತ ನಿಮ್ಮ ಮೊಬೈಲ್ ಮೂಲಕ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕವು ಸಹ ಅರ್ಜಿ ಸಲ್ಲಿಸಬಹುದು.

PMEGP Documents required-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಯೋಜನೆಯ ಪ್ರಯೋಜನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಹೊಂದಿರಬೇಕಾದ ಅಗತ್ಯ ದಾಖಲೆಗಳ ಪಟ್ಟಿ ಹೀಗಿದೆ:

ಅರ್ಜಿದಾರರ ಆಧಾರ್ ಕಾರ್ಡ.

ಜಾತಿ ಪ್ರಮಾಣ ಪತ್ರ.

ಜನ ಸಂಖ್ಯೆ ಪ್ರಮಾಣ ಪತ್ರ ಮತ್ತು ವಾಸ್ತವ್ಯ ದೃಡೀಕರಣ ಪತ್ರ(ಸ್ಥಳೀಯ ಪಂಚಾಯತ್ ಅಥವಾ ಮುನ್ಸಿಪಾಲಿಟಿಯಲ್ಲಿ ದೊರೆಯುತ್ತದೆ).

ಪಾನ್ ಕಾರ್ಡ್.

ಪೋಟೋ.

ಬ್ಯಾಂಕ್ ಪಾಸ್ ಬುಕ್.

ಯೋಜನಾ ವರದಿ.

ಅರ್ಜಿ ಸಲ್ಲಿಸುವ ಮುನ್ನ ತಪ್ಪದೇ ಈ ಕ್ರಮ ಅನುಸರಿಸಿ:

ನೇರವಾಗಿ ಅರ್ಜಿ ಸಲ್ಲಿಸುವ ಮುನ್ನ ಸಾರ್ವಜನಿಕರು ಒಮ್ಮೆ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ಭೇಟಿ ಮಾಡಿ ಯೋಜನೆ ಕುರಿತು ಯಾವೆಲ್ಲ ಅಗತ್ಯ ಉಪಕರಣಗಳು ಅವಶ್ಯವಿದೆ ಒಟ್ಟು ವೆಚ್ಚ ಎಷ್ಟು ಅಗುತ್ತದೆ? ಇದಕ್ಕಾಗಿ ಈ ಶಾಖೆಯಲ್ಲಿ ಸಾಲವನ್ನು ಪಡೆಯಲು CIBIL ರಿಪೋರ್ಟ್ ಅನ್ನು ತೆಗೆದುಕೊಂಡು 700 ಅಥವಾ -1 ಸ್ಕ್ರ‍ೋಲ್ ಮೇಲೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಿ.

PMEGP Subsidy details-ಸಬ್ಸಿಡಿ ಹೇಗೆ ಸಿಗುತ್ತದೆ?

ಒಮ್ಮೆ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ಜಿಲ್ಲಾ ಕೈಗಾರಿಕ ಕೇಂದ್ರದ ಕಚೇರಿಯಲ್ಲಿ ಅಗತ್ಯ ದಾಖಲೆಗಳನ್ನು ಪರೀಶಿಲನೆ ಮಾಡಿ ನೀವು ಅರ್ಜಿಯಲ್ಲಿ ನೀಡಿರುವ ಬ್ಯಾಂಕ್ ಶಾಖೆಗೆ ನಿಮ್ಮ ಅರ್ಜಿಯನ್ನು ವರ್ಗಾವಣೆ ಮಾಡಲಾಗುತ್ತದೆ. ಇದಾದ ಬಳಿಕ ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಅರ್ಜಿಯನ್ನು ಪರೀಶಿಲನೆ ಮಾಡಿ ಅಗತ್ಯವಿದ್ದರೆ ನೀವು ಉದ್ದಿಮೆಯನ್ನು ಪ್ರಾರಂಭಿಸಲು ಇಚ್ಚೆಯನ್ನು ಹೊಂದಿರುವ ಸ್ಥಳಕ್ಕೆ ಭೇಟಿ ಮಾಡಿ ನಂತರ ನೀವು ನೀಡಿರುವ ಮಶಿನ್ ಇನ್ನಿತರೆ ಕೋಟೇಶನ್ ಸಂಸ್ಥೆಗೆ ಲೋನ್ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಸಾಲ ಮಂಜೂರು ಅದ ಬಳಿಕ ಕೇಂದ್ರ ಸರಕಾರದಿಂದ 35/% ಸಬ್ಸಿಡಿಯನ್ನು ನಿಮ್ಮ ಶಾಖೆಗೆ ವರ್ಗಾವಣೆ ಮಾಡಲಾಗುತ್ತದೆ ಈ ಹಣವನ್ನು ನಿಮ್ಮ ಸಾಲದ ಮರುಪಾವತಿ ಪೂರ್ಣಗೊಳಿಸುವವರೆಗೆ ಅಂದರೆ 3 ವರ್ಷದ ವರೆಗೆ ನಿಮ್ಮ ಬ್ಯಾಂಖ್ ಶಾಖೆಯ ಮಿರರ್ ಖಾತೆಯಲ್ಲಿ FD ಮಾಡಲಾಗಿರುತ್ತದೆ. 3 ವರ್ಷ ಪೂರ್ಣಗೊಂಡ ಬಳಿಕ ನಿಮ್ಮ ಸಾಲಕ್ಕೆ ಜಮಾ ಮಾಡಲಾಗುತ್ತದೆ. ಒಂದೊಮ್ಮೆ ಎಲ್ಲಾ ಸಾಲವನ್ನು ನೀವು ಪಾವತಿ ಮಾಡಿದ್ದರೆ ನಿಮ್ಮ ಉಳಿತಾಯ ಖಾತೆಗೆ ಈ ಹಣವನ್ನು ಜಮಾ ಮಾಡಲಾಗುತ್ತದೆ.

PMEGP Online application-ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಇದೆ ಅವಕಾಶ:

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಪ್ರಥಮದಲ್ಲಿ ಈ ವೆಬ್ಸೈಟ್ ಲಿಂಕ್ "PMEGP Loan Apply Online" ಮೇಲೆ ಕ್ಲಿಕ್ ಮಾಡಿ ಅಧಿಕೃತ PMEGP ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ತದನಂತರ ಈ ಪೇಜ್ ನಲ್ಲಿ ಕಾಣಿಸುವ "Application For New Unit" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಇಲ್ಲಿ ಅರ್ಜಿ ನಮೂನೆ ಒಪನ್ ಅದ ನಂತರ ಇಲ್ಲಿ ಕೇಳುವ ಎಲ್ಲಾ ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Previous Post Next Post