ಭಾರತದಲ್ಲಿ Realme ಕಂಪೆನಿಯ ಹೊಸ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ 'Realme C85 5G' ಬಿಡುಗಡೆ ದಿನಾಂಕವು ಹೊರಬಿದ್ದಿದೆ. ದೇಶದಲ್ಲಿ ಇದೇ ವಾರ Realme C85 5G ಫೋನ್ ಬಿಡುಗಡೆಯಾಗುವುದು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಕಟವಾದ ಟೀಸರ್ನಿಂದ ಪ್ರಕಟವಾಗಿದ್ದು, ನಿಖರವಾದ ಬಿಡುಗಡೆ ದಿನಾಂಕದ ಜೊತೆಗೆ, ಮುಂಬರುವ ಈ Realme C ಸರಣಿಯ ಫೋನಿನ ಪ್ರಮುಖ ಫೀಚರ್ಸ್‌ಗಳನ್ನು ಸಹ ಬಹಿರಂಗಪಡಿಸಲಾಗಿದೆ. ಹಾಗಾದರೆ, ಭಾರತಕ್ಕೆ ಬರುತ್ತಿರುವ ಹೊಸ Realme C85 5G ಫೋನ್ ಫೀಚರ್ಸ್ ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Realme C85 5G: ನವೆಂಬರ್ 28ರಂದು ಅನಾವರಣ!
ಫ್ಲಿಪ್‌ಕಾರ್ಟ್‌ನಲ್ಲಿ Realme C85 5G ಫೋನಿಗಾಗಿ ಮೀಸಲಾದ ಮೈಕ್ರೋಸೈಟ್ ಪ್ರಕಾರ, ಮುಂಬರುವ Realme C85 5G ಫೋನ್ ದೇಶದಲ್ಲಿ ಇದೇ ನವೆಂಬರ್ 28 ರಂದು ಬಿಡುಗಡೆಯಾಗಲಿದೆ. ಮತ್ತು ಈ ಫೋನ್ ದೇಶದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ಲಭ್ಯವಿರುವುದು ಖಚಿತವಾಗಿದೆ. ಪ್ರಸ್ತುತ ಈ Realme C85 5G ಫೋನ್ ಬೆಲೆ ವಿವರಗಳನ್ನು ಪ್ರಕಟಿಸಲಾಗಿಲ್ಲ. ಆದರೆ, ಈ ಫೋನ್ ಬೃಹತ್ 7,000mAh ಸಾಮರ್ಥ್ಯದ ಬ್ಯಾಟರಿ ಮತ್ತು ಶಕ್ತಿಯುತ IP69 ರೇಟಿಂಗ್‌ನೊಂದಿಗೆ ಬರುವುದು ದೃಢಪಟ್ಟಿದೆ.
Realme C85 5G: ಪ್ರಮುಖ ವೈಶಿಷ್ಟ್ಯಗಳು.
ಮೊದಲೇ ಹೇಳಿದಂತೆ, ಈ ಹೊಸ Realme C85 5G ಫೋನಿನಲ್ಲಿ 7,000mAh ಸಾಮರ್ಥ್ಯದ ಬ್ಯಾಟರಿ ಇರಲಿದೆ. ರಿಯಲ್‌ಮಿ ಕಂಪೆನಿಯ ಪ್ರಕಾರ, ಈ ಬ್ಯಾಟರಿಯು 22 ಗಂಟೆಗಳ ವೀಡಿಯೊ ವೀಕ್ಷಣೆ, 50 ಗಂಟೆಗಳ ಕಾಲ್ ಸಮಯ ಮತ್ತು 145 ಗಂಟೆಗಳ ಸಂಗೀತ ಪ್ಲೇಬ್ಯಾಕ್ ನೀಡಲಿದೆ. ಜೊತೆಗೆ, 1% ಬ್ಯಾಟರಿಯಲ್ಲಿ 9 ಗಂಟೆಗಳ ಸ್ಟ್ಯಾಂಡ್‌ಬೈ ಮತ್ತು 40 ನಿಮಿಷಗಳ ಕಾಲ್ ಸಮಯ ಸಿಗುತ್ತದೆ. ಇನ್ನು ಈ ಫೋನ್ 45W ವೇಗದ ಚಾರ್ಜಿಂಗ್ ಸೌಲಭ್ಯವಿದ್ದು, 5 ನಿಮಿಷ ಚಾರ್ಜ್ ಮಾಡಿದರೆ 1.5 ಗಂಟೆಗಳ ಬಳಕೆ ಸಾಧ್ಯ. ಅಲ್ಲದೆ, 6.5W ರಿವರ್ಸ್ ಚಾರ್ಜಿಂಗ್ ಬೆಂಬಲವೂ ದೊರೆಯುತ್ತದೆ ಎಂದು ಹೇಳಲಾಗಿದೆ.
Realme C85 5G India Launch on November 28 Key Details Revealed
ಈ Realme C85 5G ಡಿಸ್‌ಪ್ಲೇ ಗಾತ್ರವನ್ನು ಕಂಪನಿ ಇನ್ನೂ ಬಹಿರಂಗಪಡಿಸದಿದ್ದರೂ, ಈ ಫೋನಿನಲ್ಲಿ 1,200 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಇರುವುದನ್ನು ದೃಢಪಡಿಸಲಾಗಿದೆ. ಜೊತೆಗೆ ಈ ಫೋನ್ ಕ್ಕೆ IP69 ರೇಟಿಂಗ್ ಧೂಳು ಮತ್ತು ನೀರಿನ ರಕ್ಷಣೆಯನ್ನು ಹೊಂದಿರುವುದನ್ನು ಹಾಗೂ MIL-STD 810H ದರ್ಜೆಯ ಆಘಾತ ಪ್ರತಿರೋಧವನ್ನು ಹೊಂದಿರುವುದನ್ನು ಖಚಿತಪಡಿಸಲಾಗಿದೆ. ಇಷ್ಟು ಅಧಿಕೃತ ಮಾಹಿತಿಗಳು ಈಗ ಲಭ್ಯವಿವೆ. ಗಮನಿಸುವುದಾದರೆ, ಇದೇ ಫೀಚರ್ಸ್ ಒಳಗೊಂಡಿರುವ Realme C85 5G ಫೋನ್ ಕಳೆದ ಮೂರು ವಾರಗಳ ಹಿಂದೆಯಷ್ಟೇ ವಿಯೆಟ್ನಾಂನಲ್ಲಿ ಬಿಡುಗಡೆಗೊಂಡಿತ್ತು. ಇದನ್ನು ಗಮನಿಸಿದರೆ,
Realme C85 5G ಫೋನ್‌ನಲ್ಲಿ 6.8 ಇಂಚಿನ HD+ LCD ಡಿಸ್‌ಪ್ಲೇ ಮತ್ತು 144Hz ರಿಫ್ರೆಶ್ ದರ ಇರಬಹುದೆಂದು ನಿರೀಕ್ಷಿಸಬಹುದು. ಕ್ಯಾಮೆರಾ ವಿಭಾಗದಲ್ಲಿ, ಫೋನ್‌ನಲ್ಲಿ 50MP "Sony AI" ಮುಖ್ಯ ಕ್ಯಾಮೆರಾ ಲಭ್ಯವಾಗಬಹುದು ಜೊತೆಗೆ, AI Edit Genie ಎಂಬ AI ಆಧಾರಿತ ಫೋಟೋ ಎಡಿಟರ್ ಸೌಲಭ್ಯವೂ ನೀಡಲಾಗುತ್ತದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇರುವ ಸಾಧ್ಯತೆ ಹೆಚ್ಚಾಗಿದೆ. ಕಾರ್ಯಕ್ಮತೆಗಾಗಿ, ಈ ಫೋನಿನಲ್ಲಿ 8GB RAM ಮತ್ತು 256GB ಆಂತರಿಕ ಮೆಮೊರಿಯೊಂದಿಗೆ ಸಂಯೋಜಿಸಲಾದ MediaTek Dimensity 6300 5G ಚಿಪ್‌ಸೆಟ್ ಬಳಸಲಾಗುವ ಸಾಧ್ಯತೆ ಇದೆ.
Realme C85 5G: ಬೆಲೆ ಎಷ್ಟಿರಬಹುದು?
ವಿಯೆಟ್ನಾಂನಲ್ಲಿ, ಈ Realme C85 5G ಫೋನಿನ 8GB RAM ಮತ್ತು 256GB ಮಾದರಿಯು VND 7,690,000 (ಸರಿಸುಮಾರು ₹25,999) ಬೆಲೆಯಲ್ಲಿ ಪರಿಚಯಗೊಂಡಿತ್ತು. ಕೆಲವು ಸೋರಿಕೆಗಳು, ಭಾರತದಲ್ಲಿ ಬೇಸ್ ರೂಪಾಂತರದ ಈ ಫೋನಿನ ನಿರೀಕ್ಷಿತ ಆರಂಭಿಕ ಬೆಲೆ ₹15,499 ಎಂದು ಸೂಚಿಸಿವೆ. ಫೋನಿನ ಅಧಿಕೃತ ಬೆಲೆ ಸೇರಿದಂತೆ ಉಳಿದ ವಿವರಗಳು ನವೆಂಬರ್ 28ರ ಲಾಂಚ್ ಕಾರ್ಯಕ್ರಮದಲ್ಲಿ ಬಹಿರಂಗಗೊಳ್ಳಲಿವೆ. ಆದರೆ, ಫೀಚರ್ಸ್ ನೋಡಿದಾಗ, ಈ ಫೋನ್ ತನ್ನ ವಿಭಾಗದಲ್ಲಿ ಆಕರ್ಷಕ ಬ್ಯಾಟರಿ ಸಾಮರ್ಥ್ಯ, ಸುಧಾರಿತ AI ವೈಶಿಷ್ಟ್ಯಗಳೊಂದಿಗೆ ಆಕರ್ಷಕವಾಗಿ ಎಂಟ್ರಿ ನೀಡುವ ಸಾಧ್ಯತೆ ಇದೆ.