Pension: ಮಕ್ಕಳ ಭವಿಷ್ಯಕ್ಕೆ, ನಿಮ್ಮ ನಿವೃತ್ತಿಗೆ ಬೆಸ್ಟ್ ಪ್ಲಾನ್: ತಿಂಗಳಿಗೆ ₹24,000 ಪಿಂಚಣಿ ಗ್ಯಾರಂಟಿ

By SVR Creations

PPF Scheme: ನಿಮಗಾಗಿ ಇಲ್ಲೊಂದು ಬೆಸ್ಟ್ (Saving Scheme) ಇದೆ. ಅದೇ (Public Provident Fund - PPF). ಇದ್ರಲ್ಲಿ ಹಣ ಹಾಕಿದ್ರೆ ನಿಮ್ಮ ದುಡ್ಡು ಸೇಫ್, ಜೊತೆಗೆ ಲಾಭ ಕೂಡ ಜೋರಾಗಿರುತ್ತೆ. ಇದು ಲಾಂಗ್ ಟರ್ಮ್‌ಗೆ ಬೆಸ್ಟ್ ಆಪ್ಷನ್.

ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಕ್ಕಳ (Education) ಅಂದ್ರೆ ವಿದ್ಯಾಭ್ಯಾಸ, (Marriage) ಮದುವೆ ಬಗ್ಗೆ ಚಿಂತೆ ಇದ್ದೇ ಇರುತ್ತೆ. ಅದಕ್ಕಾಗಿ ಸ್ವಲ್ಪ ಹಣ ಕೂಡಿಡಬೇಕು ಅಂತ (Invest) ಹೂಡಿಕೆ ಮಾಡೋಕೆ ಹೋದ್ರೆ, ಎಲ್ಲಿ ಹಾಕೋದು ಅನ್ನೋ ಗೊಂದಲ ಶುರುವಾಗುತ್ತೆ. ನಿಮಗೂ ಈ ತರಹದ ಯೋಚನೆ ಇದ್ರೆ, ನಿಮಗಾಗಿ ಇಲ್ಲೊಂದು ಬೆಸ್ಟ್ (Saving Scheme) ಇದೆ. ಅದೇ (Public Provident Fund - PPF). ಇದ್ರಲ್ಲಿ ಹಣ ಹಾಕಿದ್ರೆ ನಿಮ್ಮ ದುಡ್ಡು ಸೇಫ್, ಜೊತೆಗೆ ಲಾಭ ಕೂಡ ಜೋರಾಗಿರುತ್ತೆ. ಇದು ಲಾಂಗ್ ಟರ್ಮ್‌ಗೆ ಬೆಸ್ಟ್ ಆಪ್ಷನ್.

ಇದು ಕೇಂದ್ರ ಸರ್ಕಾರದ ಬೆಂಬಲ ಇರೋ ಸ್ಕೀಮ್ ಆಗಿರೋದ್ರಿಂದ, ನಿಮ್ಮ ಹಣಕ್ಕೆ ಮೋಸ ಆಗೋ ಚಾನ್ಸೇ ಇಲ್ಲ. ಇಲ್ಲಿ ನಿಮ್ಮ ಬಂಡವಾಳಕ್ಕೆ ಶೇಕಡಾ 100 ರಷ್ಟು ಸುರಕ್ಷತೆ ಇರುತ್ತೆ. ಇದನ್ನ ನೀವು ಸರಿಯಾಗಿ ಪ್ಲಾನ್ ಮಾಡಿದ್ರೆ, ನಿಮ್ಮ ನಿವೃತ್ತಿ ಜೀವನಕ್ಕೆ ಇದೊಂದು ಅದ್ಭುತ ಆಸರೆಯಾಗುತ್ತೆ. ಇನ್ನೊಂದು ವಿಶೇಷ ಏನಂದ್ರೆ, ಈ ಸ್ಕೀಮ್ ಮೂಲಕ ಬರೋ ಹಣಕ್ಕೆ ಅಥವಾ ಬಡ್ಡಿಗೆ ನೀವು ಒಂದು ರೂಪಾಯಿ ಕೂಡ ಟ್ಯಾಕ್ಸ್ ಕಟ್ಟಂಗಿಲ್ಲ.

ಸದ್ಯಕ್ಕೆ ಪಿಪಿಎಫ್ ಖಾತೆಗೆ ಸರ್ಕಾರ ವಾರ್ಷಿಕ ಶೇಕಡಾ 7.1 ರಷ್ಟು ಬಡ್ಡಿ ಕೊಡ್ತಿದೆ. ಇದು ಎಷ್ಟೋ ಬ್ಯಾಂಕುಗಳ ಫಿಕ್ಸೆಡ್ ಡೆಪಾಸಿಟ್ ಅಥವಾ ಎಫ್‌ಡಿ ಬಡ್ಡಿಗಿಂತ ಜಾಸ್ತಿನೇ ಇದೆ. ಷೇರು ಮಾರುಕಟ್ಟೆಯ ಏರಿಳಿತದ ರಿಸ್ಕ್ ಇಲ್ಲಿಲ್ಲ. ವರ್ಷಕ್ಕೆ ಒಮ್ಮೆ ಅಥವಾ ಕಂತುಗಳಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣ ಕಟ್ಟಬಹುದು. ನಿವೃತ್ತಿ ನಂತರ ತಿಂಗಳು ತಿಂಗಳು ಕೈತುಂಬಾ ಕಾಸು ಬೇಕು ಅನ್ನೋರಿಗೆ ಇದು ಹೇಳಿ ಮಾಡಿಸಿದ ಪ್ಲಾನ್.

ಈ ಯೋಜನೆಯ ಅವಧಿ ಬರೋಬ್ಬರಿ 15 ವರ್ಷಗಳು. ಬೇಕಿದ್ರೆ ಆಮೇಲೂ ನೀವು ಇದನ್ನ ಮುಂದುವರಿಸಬಹುದು. ಮಜಾ ಏನಂದ್ರೆ, 15 ವರ್ಷ ಆದ್ಮೇಲೆ ನೀವು ಹೊಸದಾಗಿ ನಯಾಪೈಸೆ ಕಟ್ಟಿಲ್ಲ ಅಂದ್ರೂ, ನಿಮ್ಮ ಖಾತೆಯಲ್ಲಿರೋ ಹಳೆ ದುಡ್ಡಿಗೆ ಬಡ್ಡಿ ಜಮೆ ಆಗ್ತಾನೇ ಇರುತ್ತೆ. ಹೀಗಾಗಿ ನಿಮ್ಮ ಹಣ ಸುಮ್ಮನೆ ಮಲಗಿರಲ್ಲ, ಕಾಂಪೌಂಡಿಂಗ್ ಎಫೆಕ್ಟ್‌ನಿಂದ ಅದು ಬೆಳೆಯುತ್ತಲೇ ಇರುತ್ತೆ.

ಒಂದು ಲೆಕ್ಕಾಚಾರ ನೋಡೋದಾದ್ರೆ, ನೀವು ಪ್ರತಿ ತಿಂಗಳು ₹5,000 ಈ ಖಾತೆಗೆ ಹಾಕ್ತಾ ಬಂದ್ರಿ ಅಂತ ಇಟ್ಕೊಳ್ಳಿ. 15 ವರ್ಷಕ್ಕೆ ನೀವು ಕಟ್ಟಿರೋದು ಬರೀ 9 ಲಕ್ಷ ಆಗಿರುತ್ತೆ. ಆದ್ರೆ ಬಡ್ಡಿ ಸೇರಿ ಮೆಚ್ಯೂರಿಟಿ ಟೈಮಲ್ಲಿ ನಿಮ್ಮ ಕೈಗೆ ಸಿಗೋದು ಬರೋಬ್ಬರಿ ₹16,27,284! ಈ ಹಣವನ್ನ ಹಾಗೇ ಇಟ್ಟರೆ, 15 ವರ್ಷದ ನಂತರ ಅದ್ರಿಂದ ಬರೋ ಬಡ್ಡಿಯೇ ನಿಮಗೆ ತಿಂಗಳಿಗೆ ಸುಮಾರು ₹9,628 ರಷ್ಟು ಪಿಂಚಣಿ ರೂಪದಲ್ಲಿ ಸಿಗುತ್ತೆ.

ಇನ್ನು ನೀವು ಸ್ವಲ್ಪ ಜಾಸ್ತಿ, ಅಂದ್ರೆ ತಿಂಗಳಿಗೆ ₹12,500 ಉಳಿತಾಯ ಮಾಡ್ತೀನಿ ಅನ್ನೋದಾದ್ರೆ, 15 ವರ್ಷ ಕಳೆಯೋ ಹೊತ್ತಿಗೆ ನಿಮ್ಮ ಅಕೌಂಟ್‌ನಲ್ಲಿ ಬರೋಬ್ಬರಿ ₹40.68 ಲಕ್ಷ ಜಮೆ ಆಗಿರುತ್ತೆ! ಆಮೇಲೆ ನೀವು ನಿವೃತ್ತರಾಗಿ ಹಣ ಕಟ್ಟೋದು ನಿಲ್ಲಿಸಿದ್ರೂ, ಆ ದುಡ್ಡಿನ ಮೇಲೆ ಬರೋ ಬಡ್ಡಿಯೇ ವರ್ಷಕ್ಕೆ 2.88 ಲಕ್ಷ ಆಗುತ್ತೆ. ಅಂದ್ರೆ ತಿಂಗಳಿಗೆ ಆರಾಮಾಗಿ ₹24,000 ಖರ್ಚಿಗೆ ಸಿಕ್ಕಂಗೆ ಆಯ್ತು ಅಲ್ವಾ?

ಮೇಲೆ ಹೇಳಿದ ಹಾಗೆ ಬಡ್ಡಿಯನ್ನ ತಿಂಗಳಿಗೆ ಪಡ್ಕೊಳ್ತಾ, ಅಸಲು ಹಣವನ್ನ ಹಾಗೇ ಸೇಫ್ ಆಗಿ ಇಡಬಹುದು. ನಿಮಗೆ ಯಾವಾಗಾದ್ರೂ ಅರ್ಜೆಂಟ್ ಹಣ ಬೇಕು ಅನ್ನಿಸಿದ್ರೆ, ವರ್ಷಕ್ಕೆ ಒಮ್ಮೆ ಇದ್ರಲ್ಲಿರೋ ಸ್ವಲ್ಪ ಹಣವನ್ನ ವಿತ್‌ಡ್ರಾ ಮಾಡಿಕೊಳ್ಳೋ ಆಯ್ಕೆ ಕೂಡ ಇದೆ. ಒಟ್ಟಿನಲ್ಲಿ ನಿಮ್ಮ ಹಣವನ್ನ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಪಿಪಿಎಫ್‌ನಲ್ಲಿ ಅವಕಾಶವಿದೆ.

ಇಷ್ಟೆಲ್ಲಾ ಲಾಭ ಇರೋ ಈ ಸ್ಕೀಮ್‌ಗೆ ಸೇರೋದು ತುಂಬಾನೇ ಸುಲಭ. ನಿಮ್ಮ ಹತ್ತಿರದ ಯಾವುದೇ ಪೋಸ್ಟ್ ಆಫೀಸ್ ಅಥವಾ ಸರ್ಕಾರಿ (ರಾಷ್ಟ್ರೀಕೃತ) ಬ್ಯಾಂಕ್‌ಗೆ ಹೋಗಿ ಇಂದೇ ಖಾತೆ ತೆರೆಯಬಹುದು. ವರ್ಷಕ್ಕೆ ಕನಿಷ್ಠ ₹500 ರೂಪಾಯಿ ಕಟ್ಟಿದ್ರೂ ಸಾಕು, ನಿಮ್ಮ ಖಾತೆ ಚಾಲ್ತಿಯಲ್ಲಿ ಇರುತ್ತೆ. ತಡ ಮಾಡ್ಬೇಡಿ, ಇಂದೇ ಉಳಿತಾಯ ಶುರು ಮಾಡಿ ನಿಮ್ಮ ಮಕ್ಕಳ ಭವಿಷ್ಯವನ್ನ ಸೇಫ್ ಮಾಡಿ.