Jeevan Pramaan: ಪಿಂಚಣಿದಾರರಿಗೆ ಸಿಹಿ ಸುದ್ದಿ: ಜೀವನ್ ಪ್ರಮಾಣ ಸೌಲಭ್ಯ ಸರಳೀಕರಣ, ಡೌನ್‌ಲೋಡ್ ವಿಧಾನ

Jeevan Pramaan Fecility: ಭಾರತ ಸರ್ಕಾರವು ತನ್ನ ವಿವಿಧ ಇಲಾಖೆಗಳ ಸಹಕಾರದಲ್ಲಿ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರಿಗೆ ಅನುಕೂಲವಾಗಲೆಂದು "ಜೀವನ್ ಪ್ರಮಾಣ' (Jeevan Pramaan) ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದನ್ನು ಮತ್ತಷ್ಟು ಸುಲಭಗೊಳಿಸಿದೆ. ನೈಋತ್ಯ ರೈಲ್ವೆಯು ಮುಖ ಗುರುತಿಸುವಿಕೆ (Face Authentication) ಆಧಾರಿತ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಪಿಂಚಣಿದಾರರು ಯಾವ ತೊಂದರೆ ಇಲ್ಲದೇ ಇದರ ಸೇವೆ ಪಡೆಯಬಹುದು. ಬೇಕಾಗುವ ದಾಖಲೆಗಳು, ಸಲ್ಲಿಕೆಗೆ ಹೇಗೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ಪಿಂಚಣಿ ಪಡೆಯುವ ಅರ್ಹರು ಮನೆಬಾಗಿಲಲ್ಲಿಯೇ ಯಾವುದೇ ತೊಂದರೆ ಇಲ್ಲದೆ ತಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದಾಗಿದೆ. ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ನೀಡಲ್ಪಟ್ಟಿರುವ ಈ ಸೌಲಭ್ಯ, ಮೊಬೈಲ್‌ ಮೂಲಕ ಕೆಲವೊಂದನ್ನು ಕಾರ್ಯಗತ ಮಾಡಿಕೊಳ್ಳಬಹುದಾಗಿದೆ. ವಿಶೇಷವಾಗಿ ವಯೋವೃದ್ಧರಿಗೆ ಪಿಂಚಣಿ ದೃಢೀಕರಣಕ್ಕಾಗಿ ಬ್ಯಾಂಕ್ ಅಥವಾ ಕಚೇರಿಗಳಿಗೆ ಹೋಗುವ ಅನಿವಾರ್ಯತೆ, ಸಮಯ ಉಳಿತಾಯ ಮಾಡುವ ಉದ್ದೇಶ ಈ ವ್ಯವಸ್ಥೆ ಹೊಂದಿದೆ.

ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ವಿಧಾನಗಳು

* ಆಧಾರ್ ಫೇಸ್ ಐಡಿ (AadhaarFaceRD) ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು.

* ಗೂಗಲ್ ಪ್ಲೇಸ್ಟೋರ್‌ನಿಂದ AadhaarFaceRD ಅಪ್ಲಿಕೇಶನ್‌ ಆಪ್ ಇನ್‌ಸ್ಟಾಲ್ ಮಾಡಬೇಕು.

* ಬಳಿಕ Jeevan Pramaan Face ಆಪ್‌ ಇನ್‌ಸ್ಟಾಲ್ ಮಾಡಿಕೊಳ್ಳಬೇಕು.

* Jeevan Pramaan ಅಧಿಕೃತ ಫೇಸ್ ದೃಢೀಕರಣ ಆಪ್ ಅನ್ನು ಮೊಬೈಲ್‌ನಲ್ಲಿ ಹಾಕಿಕೊಳ್ಳಬೇಕು.

* ಒಮ್ಮ ಮಾತ್ರ ನಡೆಯುವ ಪ್ರಕ್ರಿಯೆಯಲ್ಲಿ ಪಿಂಚಣಿದಾರರೇ ಆಪರೇಟರ್ ಆಗಿ ಕಾರ್ಯ ನಿರ್ವಹಿಸಬಹುದಾಗಿದೆ.

ಪಿಂಚಣಿದಾರರ ಸ್ವಯಂ ದೃಢೀಕರಣ ಹೇಗೆ?

* ಜೀವನ್ ಪ್ರಮಾಣ್ (Jeevan Pramaan) ಆಪ್ ತೆರೆಯಬೇಕು.

* ವೈಯಕ್ತಿಕ ಗುರುತಿಸುವಿಕೆ (Personal Identification) ಆಯ್ಕೆ ಮಾಡಿ

* ನಂತರ ಆಧಾರ್ ಕಾರ್ಡ್‌ ಹಾಗೂ ಸಂಬಂಧಿತ ಮಾಹಿತಿ ನಮೂದಿಸಬೇಕು

* ಮೊಬೈಲ್ ನಂಬರ್ ಹಾಕಬೇಕು. ಬಳಿಕ ಬರುವ ಒಟಿಪಿ ಅನ್ನು ನಮೂದಿಸಬೇಕು.

* ಬಳಿಕ ಐರಿಸ್ ಮತ್ತು ಮುಖ ಗುರುತಿಸುವಿಕೆ (Iris Scan / Face Authentication) ಮೂಲಕ ಪರಿಶೀಲಿಸಬೇಕು.

ಇದೆಲ್ಲ ಯಶಸ್ವಿ ಆದ ನಂತರ ಪಿಂಚಣಿದಾರರ ಮೊಬೈಲ್‌ಗೆ ಪ್ರಮಾಣ್ ಐಟಿ ಒಳಗೊಂಡ SMS ಬರುತ್ತದೆ. ಇದರಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬೇಕಾಗುವ ಅಗತ್ಯ ಮಾಹಿತಿ

* ಆಧಾರ್ ನಲ್ಲಿರುವಂತೆ ಪಿಂಚಣಿದಾರರ ಪೂರ್ಣ ಹೆಸರು

* ಪಿಂಚಣಿಯು ಯಾವ ಪ್ರಕಾರ

* ಮಂಜೂರು ಮಾಡಿದ ಪ್ರಾಧಿಕಾರ (Sanctioning Authority)

* ಪಿಂಚಣಿ ವಿತರಣೆ ಏಜೆನ್ಸಿ (Disbursing Agency)

* PPO ಸಂಖ್ಯೆ

* ಪಿಂಚಣಿ ಖಾತೆ ಸಂಖ್ಯೆ

* ಅಗತ್ಯ ಘೋಷಣೆಗಳಿಗೆ ಒಪ್ಪಿಗೆ ಮಾಹಿತಿ ಬೇಕು

"ಜೀವನ್ ಪ್ರಮಾಣ' ಇದು ನಿವೃತ್ತರಿಗಾಗಿ ಇರುವ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ವ್ಯವಸ್ಥೆ ಯಾಗಿದೆ. Face Authentication ಆಧಾರದಲ್ಲಿ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಇದರಿಂದ ಸೌಲಭ್ಯ ಪಡೆಯುವುದು ಸರಳವಾಗುತ್ತದೆ.

ಬ್ಯಾಂಕ್/ಕಚೇರಿಗಳಿಗೆ ತೆರಳುವ ಪ್ರಮೇಯವೇ ಬರುವುದಿಲ್ಲ. ನಿವೃತ್ತರಿಗೆ ಸಮಯ ಉಳಿತಾಯವಾಗಲಿದೆ. ಮನೆಯಲ್ಲೇ ಕೂತಲ್ಲೆ ಸೌಲಭ್ಯ ಸಿಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.




Previous Post Next Post