Free Training: ಉಚಿತ..ಉಚಿತ.. ಊಟ ವಸತಿ ಜೊತೆಗೆ ಈ ತರಬೇತಿಯೂ ಉಚಿತ

By SVR Creations

Free bike repair training:-ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರದಲ್ಲಿ 18-35 ವಯಸ್ಸಿನ ನಿರುದ್ಯೋಗಿ ಪುರುಷರಿಗೆ ಉಚಿತ ಬೈಕ್ ಸ್ಕೂಟಿ ರಿಪೇರಿ ತರಬೇತಿ ನವೆಂಬರ್ 20 ರಿಂದ.

ಬೈಕ್ ಗ್ಯಾರೇಜ್ ಅಲ್ಲಿ ಕೆಲಸ ಕಲಿತು ಸ್ವಂತ ಉದ್ಯೋಗ (Own Business) ಮಾಡಬೇಕು ಅನ್ನೋರಿಗೆ ಅಥವಾ ಉಚಿತವಾಗಿ (Free) ನಾವು ಕೂಡ ಬೈಕ್, ಸ್ಕೂಟಿ ರಿಪೇರಿ ಮಾಡೋದು ಕಲಿಬೇಕು ಅನ್ನೋರಿಗೆ ಇದು ಸುವರ್ಣ ಅವಕಾಶ. ನಿಮಗೆ ಉಚಿತವಾಗಿ ದ್ವಿಚಕ್ರ ವಾಹನಗಳ ರಿಪೇರಿ ತರಬೇತಿಯನ್ನ ಹೇಳಿಕೊಡಲಿದ್ದಾರೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ (Hoskote) ತಾಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನವೆಂಬರ್ 20 ರಿಂದ 30 ದಿನಗಳ ಕಾಲ ನಿರುದ್ಯೋಗಿ ಪುರುಷರಿಗೆ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವೀಸಿಂಗ್ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಿದೆ.

ಬೈಕ್ ರಿಪೇರಿ ತರಬೇತಿ

ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 35 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳನ್ನು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು.

ಆಸಕ್ತರು ನವೆಂಬರ್ 20 ರಂದು ಬೆಳಗ್ಗೆ 10 ಗಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ (ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ವಿದ್ಯಾರ್ಹತೆಗಳೊಂದಿಗೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬೇಕಾಗಿ ಸೂಚಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ನವೆಂಬರ್ 20 ರೊಳಗೆ ಸಂಸ್ಥೆಯನ್ನು (ದೂರವಾಣಿ 8970476050, 9591514154, 9686248369) ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.