Computer Teacher Training Course: ಕಂಪ್ಯೂಟರ್ ಭೋದನಾ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಮಾಡಲು ಬಯಸುವವರಿಗೆ ಒಂದು ಸುವರ್ಣಾವಕಾಶ . 2010 ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಸಂಸ್ಥೆಯಲ್ಲಿ 2025-26 ನೇ ಸಾಲಿನ ಒಂದು ವರುಷದ ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು, ಒಂದು ವರುಷದ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಸರ್ಕಾರೀ ಕಾಪಿ ರೈಟೆಡ್ ಸರ್ಟಿಫಿಕೇಟ್ ನೀಡಲಾಗುವುದು. ಈ ಪ್ರಮಾಣ ಪತ್ರವನ್ನು ಪಡೆದ ವಿದ್ಯಾರ್ಥಿಗಳು ಯಾವುದೇ ಸರ್ಕಾರೀ ಮತ್ತು ಖಾಸಗಿ ಉದ್ಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ. ಗುಣಮಟ್ಟದ ತರಬೇತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ IRCMD ಶಿಕ್ಷಣ ಸಂಸ್ಥೆಯು ಈ ಉಚಿತ ತರಬೇತಿಯನ್ನು ಆಯ್ದ ಅರ್ಹ ಅಭ್ಯರ್ಥಿಗಳಿಗೆ ನೀಡುತ್ತಾ ಬಂದಿರುತ್ತದೆ. ಪ್ರಸಕ್ತ 2025-26 ನೇ ಸಾಲಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಗೆ ಅರ್ಹತೆಗಳು :-
1) ಯಾವುದೇ ಪದವಿಯನ್ನು ಕಡ್ಡಾಯವಾಗಿ ಪಡೆದಿರಬೇಕು.
2) ವಯಸ್ಸಿನ ಗರಿಷ್ಠ ಮಿತಿ – 24 ವರ್ಷ.
3) ಮಹಿಳಾ ಅಭ್ಯರ್ಥಿಗಳು ಮಾತ್ರ.
Note:
ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿ ಶುಲ್ಕವು Rs.35,000/- ಆಗಿದ್ದು , ಸದ್ಯ ಈ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಸೀಮಿತ ಸೀಟುಗಳು ಮಾತ್ರ ಇರುವುದರಿಂದ, ಆಸಕ್ತಿ ಇರುವ ಅಭ್ಯರ್ಥಿಗಳು ದಿನಾಂಕ 25-09-2025 ರ ಮೊದಲು ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಅರ್ಜಿಯನ್ನು ಮುಖತಃವಾಗಿ ಸಲ್ಲಿಸಬೇಕು. (Address: IRCMD Education Centre, Ground Floor, Swagath building, Near Aruna Kala Mandira, Main Road, Puttur-574201).ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ಭೇಟಿ ಕೊಡಬಹುದು ಎಂದು ಸಂಸ್ಥೆಯು ಪ್ರಕಟಣೆ ನೀಡಿದೆ.