When will the Gruhalakshmi scheme money arrive What does Minister Lakshmi Hebbalkar say:-ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ದುಡ್ಡು ಮೂರ್ನಾಲ್ಕು ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಪ್ರತಿ ಬಾರಿ ಕೂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದೇ ಉತ್ತರ ಕೊಡ್ತಾರೆ ಎಂದು ಫಲಾನುಭವಿಗಳು ಅಸಮಾಧಾನ ಹೊರಹಾಕಿದ್ದಾರೆ. ಆಷಾಢ ಮುಗೀತು, ಶ್ರಾವಣ ಬಂತು ವರಮಹಾಲಕ್ಷ್ಮಿ ಹಬ್ಬನು ಆಯ್ತು ಇನ್ನು ಜನರ ಕೈ ಸೇರಿಲ್ಲ ಗೃಹಲಕ್ಷ್ಮಿ ಹಣ. ತಡ ಆಗ್ತಿರೋದು ಯಾಕೆ? ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದೇನು?
ಗೃಹಲಕ್ಷ್ಮಿ ಹಣ ಮತ್ತೆ ವಿಳಂಬ
ಭರಪೂರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಸರ್ಕಾರ ಉಚಿತ ಸೇವೆಗೆಲ್ಲಾ ಹಣ ಒದಗಿಸಲು ಪರದಾಡ್ತಿದೆ. ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ ಸ್ಕೀಮ್ ಕೂಡ ಒಂದಾಗಿದೆ. ಈ ಸ್ಕೀಮ್ ಜಾರಿಯಾದಾಗಿನಿಂದಲೂ ಹಣ ಖಾತೆ ಸೇರೋದು ತಡವಾಗ್ತಾನೆ ಇದೆ. ಮೂರು ತಿಂಗಳಿಂದ ಹಣವೇ ಬಂದಿಲ್ಲ ಎಂದು ಮಹಿಳೆಯರು ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ.
ಮೂರು ತಿಂಗಳ ಹಣ ಬರೋದ್ಯಾವಾಗ?
ಮಾರ್ಚ್ ತಿಂಗಳ ಹಣ ಇನ್ನೂ ಅಕೌಂಟ್ ಗೆ ಬಂದಿಲ್ಲ. ಜೂನ್, ಜುಲೈ ತಿಂಗಳ ಹಣ ಬಾರದ ಹಿನ್ನೆಲೆ 'ಗೃಹಲಕ್ಷ್ಮಿ' ಯರು ಮುನಿಸಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಭೇಟಿ ನೀಡ್ತಿರು ಮಹಿಳೆಯರು ಹಣ ಯಾವಾಗ ಬರುತ್ತೆ ಅಂತ ವಿಚಾರಿಸ್ತಿದ್ದಾರೆ.
ಗೃಹಲಕ್ಷ್ಮಿ ಹಣ ಎಲ್ಲಿ ಮೇಡಂ?
ಪ್ರತಿ ತಿಂಗಳು ಎರಡು ಸಾವಿರ ಹಣವನ್ನ ಗೃಹಲಕ್ಷ್ಮಿಯರಿಗೆ ವಿತರಣೆ ಮಾಡುವ ಭರವಸೆಯನ್ನ ಸರ್ಕಾರ ನೀಡಿದೆ. ಆದ್ರೆ ಕಳೆದ ಎಂಟು ತಿಂಗಳಿನಿಂದಲೇ ನಿಯಮಿತವಾಗಿ ಗೃಹಲಕ್ಷ್ಮಿ ಹಣ ಬಂದಿಲ್ಲ. ಪ್ರತಿ ಬಾರಿ ಕೂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಟೆಕ್ನಿಕಲ್ ತೊಂದರೆ ಅಂತ ಪದೇ ಪದೇ ಅದೇ ಉತ್ತರ ಕೊಡ್ತಿದ್ದಾರೆ ಎಂದು ಫಲಾನುಭವಿಗಳು ಕಿಡಿಕಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳೋದೇನು?
ಜೂನ್ ತಿಂಗಳ ಹಣ ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿಯರ ಅಕೌಂಟ್ಗೆ ಜಮೆ ಆಗಲಿದೆ. ಜುಲೈ ತಿಂಗಳ ಹಣ ಬಾಕಿಯಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳ್ತಿದ್ದಾರೆ. ಮಾರ್ಚ್ ತಿಂಗಳ ಕಂತಿನ ಹಣ ಇನ್ನೂ ಬಂದೇ ಇಲ್ಲ. ತಾಂತ್ರಿಕ ಕಾರಣದಿಂದ ಇನ್ನೂ ಹಣ ಅಕೌಂಟ್ ಗೆ ವರ್ಗಾವಣೆ ಆಗಿಲ್ಲ ಎಂದು ಇಲಾಖೆ ಸಬೂಬು ಹೇಳ್ತಿದೆ.
ಗೃಹಲಕ್ಷ್ಮಿ ಹಣ ತಡವಾಗಿ ಬರ್ತಿರೋದೇಕೆ?
ಈ ಮೊದಲು 3 ತಿಂಗಳಿಗೊಮ್ಮೆ ಮುಂಚಿತವಾಗಿ ಹಣ ಬಿಡುಗಡೆ ಆಗ್ತಿತ್ತು. ನೇರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪ್ರತಿ ತಿಂಗಳು ಅನುದಾನಕ್ಕೆ ಆರ್ಥಿಕ ಇಲಾಖೆ ಹಣ ರಿಲೀಸ್ ಮಾಡಬೇಕು. ಹಣ ಬಿಡುಗಡೆ ಬಳಿಕ ಮಹಿಳಾ ಇಲಾಖೆಯಿಂದ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತೆ. ಇದರ ಜೊತೆಗೆ ಇದೀಗ ಕೇಂದ್ರ ಸರ್ಕಾರ ನಿಯಮದಂತೆ ತಾ.ಪಂ, ಜಿಪಂ ಮೂಲಕ ಹಣ ವರ್ಗಾವಣೆ ಆಗಬೇಕು. ಇದರಿಂದ ಎರಡು ವಾರ ತಡವಾಗುತ್ತೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ.