Fact Check: HDFC ಬ್ಯಾಂಕ್‌ನಲ್ಲಿ ನಿಮ್ಮ ಅಕೌಂಟ್ ಇದ್ಯಾ? ಹಾಗಾದ್ರೆ, ನೀವು ಈ ಸುದ್ದಿ ಓದಲೇಬೇಕು | HDFC Bank clarifies minimum bank balance Issue

By SVR Creations

ನವದೆಹಲಿ: ಮಾರುಕಟ್ಟೆ ಬಂಡವಾಳೀಕರಣದ ಪ್ರಕಾರ ದೇಶದ ಅತಿದೊಡ್ಡ ಬ್ಯಾಂಕುಳಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್(HDFC Bank) ಕೂಡ ಒಂದು. ಈ ಬ್ಯಾಂಕ್ ಇತ್ತೀಚೆಗೆ ತನ್ನ ಮಿನಿಮಮ್ ಬ್ಯಾಲೆನ್ಸ್ ಮಿತಿಯನ್ನು (Minimum Balance) ಹೆಚ್ಚಿಸಿಕೊಂಡಿದೆ ಎಂಬ ಊಹಾಪೋಹಗಳು ಹಬ್ಬಿಕೊಂಡಿವೆ. ಅದಕ್ಕೆ ಸಂಬಧಿಸಿದಂತೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಸ್ಪಷ್ಟನೆಯನ್ನು ನೀಡಿದೆ. ಹಾಗಿದ್ರೆ ಹೆಚ್‌ಡಿಎಫ್‌ಸಿ ಏನು ಹೇಳಿದೆ ಎಂಬುದನ್ನು ಈ ಸುದ್ದಿಯಲ್ಲಿ ನೋಡೋಣ ಬನ್ನಿ.

ಹೆಚ್‌ಡಿಎಫ್‌ಸಿ ಇತ್ತೀಚಿನ ದಿನಗಳಲ್ಲಿ ಉಳಿತಾಯ ಖಾತೆಗಳ ಸರಾಸರಿ ಕನಿಷ್ಠ ಬ್ಯಾಲೆನ್ಸ್ (AMB) ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇತ್ತೀಚಿನ ಕೆಲವು ವರದಿಗಳು ನಗರ ಪ್ರದೇಶಗಳಲ್ಲಿ ಈ ಮಿತಿಯನ್ನು 25,000 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಹೇಳಿಕೊಂಡಿವೆ. ಆದರೆ ಬ್ಯಾಂಕ್ ಅದು ತಪ್ಪು ಎಂದು ಹೇಳಿದೆ.

ಬ್ಯಾಂಕಿನ ಪ್ರಕಾರ, ಸಾಮಾನ್ಯ ಉಳಿತಾಯ ಖಾತೆಯ ಸರಾಸರಿ ಕನಿಷ್ಠ ಬ್ಯಾಲೆನ್ಸ್ 10,000 ರೂಪಾಯಿಗಳಾಗಿವೆ. ಗ್ರಾಹಕರ ಅಗತ್ಯತೆಗಳು ಮತ್ತು ಪ್ರೊಫೈಲ್‌ಗೆ ಅನುಗುಣವಾಗಿ ಗ್ರಾಮೀಣ, ಅರೆ ನಗರ, ನಗರ ಮತ್ತು ಮೆಟ್ರೋ ಶಾಖೆಗಳಲ್ಲಿ ವಿವಿಧ ರೀತಿಯ ಉಳಿತಾಯ ಖಾತೆ ಆಯ್ಕೆಗಳು ಲಭ್ಯವಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ. ಮೆಟ್ರೋ ನಗರಗಳಲ್ಲಿ ಹೊಸ ಖಾತೆಗಳನ್ನು ತೆರೆಯುವವರಿಗೆ ಬ್ಯಾಂಕ್ ಉಳಿತಾಯ ಗರಿಷ್ಠ ಖಾತೆಗೆ ಆದ್ಯತೆ ನೀಡುತ್ತದೆ.