BPL Card: 1.17 ಕೋಟಿ ಬಿಪಿಎಲ್ ಕಾರ್ಡ್ ರದ್ದತಿಗೆ ಕೇಂದ್ರ ಸರ್ಕಾರ ನಿರ್ಧಾರ! ಈ ಲಿಸ್ಟ್‌ನಲ್ಲಿ ನಿಮ್ಮ ಪಡಿತರ ಚೀಟಿ ಇದ್ಯಾ ಚೆಕ್ ಮಾಡ್ಕೊಳ್ಳಿ

By SVR Creations

BPL Card: ಬಹು ಉಪಯೋಗಿ ಪಡಿತರ ಚೀಟಿ ಅರ್ಥಾತ್ BPL ಕಾರ್ಡ್ವೊಂದಿರುವ ಬಡವರಿಗೆ ಸರ್ಕಾರದಿಂದ ಶಾಕ್ ಎದುರಾಗಿದೆ. ಹೌದು, ಸರ್ಕಾರ ಒಟ್ಟು 1.17 ಕೋಟಿ ಜನರ ಕಾರ್ಡ್ ರದ್ದು ಮಾಡಲು ಮುಂದಾಗಿದೆ. ಹಾಗಾದ್ರೆ ಈ 1.17 ಕೋಟಿ BPL ಕಾರ್ಡ್ ಯಾರದ್ದು? ಅವರ ಕಾರ್ಡ್ ರದ್ದತಿಗೆ ಕಾರಣವೇನು ಗೊತ್ತಾ..? ನಿಮ್ಮ ಕಾರ್ಡ್ ರದ್ದಾಗುತ್ತಾ ಎಂದು ಒಮ್ಮೆ ನೋಡಿ.

ಅದೆಷ್ಟೋ ಬಡ ಕುಟುಂಬಗಳಿಗೆ ಪಡಿತರ ಚೀಟಿ (Ration card) ಅರ್ಥಾತ್ BPL ಕಾರ್ಡ್ ನಂಬಿ ಬದುಕುತ್ತಿದ್ದಾರೆ. ಯಾಕಂದ್ರೆ ಈ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಅಕ್ಕಿ, ರಾಗಿ ಸೇರಿದಂತೆ ಹಲವಾರು ಪಡಿತರ ಸಿಗುತ್ತಿದ್ದರೆ. ಜೊತೆಗೆ ಆರೋಗ್ಯ ಸೇವೆಗಳು, ಆರ್ಥಿಕ ನೆರವು, ಗ್ರಾಮೀಣಾಭಿವೃದ್ಧಿ ಯೋಜನೆ ಸೇರಿದಂತೆ ಹಲವಾರು ಉಪಯೋಗಗಳಿವೆ. ಆದ್ರೆ ಇಂತಹ ಬಹು ಉಪಯೋಗಿ ಕಾರ್ಡ್ವೊಂದಿರುವ ಬಡವರಿಗೆ ಸರ್ಕಾರದಿಂದ ಶಾಕ್ ಎದುರಾಗಿದೆ. ಹೌದು, ಸರ್ಕಾರ ಒಟ್ಟು 1.17 ಕೋಟಿ ಜನರ BPL ಕಾರ್ಡ್ ರದ್ದು (Cancellation of BPL card) ಮಾಡಲು ಮುಂದಾಗಿದೆ. ಹಾಗಾದ್ರೆ ಈ 1.17 ಕೋಟಿ BPL ಕಾರ್ಡ್ ಯಾರದ್ದು? ಅವರ ಕಾರ್ಡ್ ರದ್ದತಿಗೆ ಕಾರಣವೇನು ಗೊತ್ತಾ..? ನಿಮ್ಮ ಕಾರ್ಡ್ ರದ್ದಾಗುತ್ತಾ ಎಂದು ಒಮ್ಮೆ ನೋಡಿ.

ಭಾರತದಲ್ಲಿ ಒಟ್ಟು 76.10 ಕೋಟಿ ಜನರು ಪಡಿತರ ಚೀಟಿ ಅರ್ಥಾತ್ BPL ಕಾರ್ಡ್ ಪಡಿದ್ದಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಎನ್ನಬಹುದು. ಹಾಗಾಗಿ, 1.17 ಕೋಟಿ ಜನರ BPL ಕಾರ್ಡ್ ರದ್ದಾದರೆ ಹೇಗೆ ಹೇಳಿ. ಆದ್ರೆ ಈ ಕಾರ್ಡ್ ರದ್ದು ಮಾಡಲಾಗುತ್ತಿರುವುದು ಸಾಮನ್ಯ ನಾಗರೀಕನದಲ್ಲ; ಬದಲಾಗಿ ಅಕ್ರಮವಾಗಿ ಈ ಕಾರ್ಡ್ ಪಡೆದಿರುವಂತಹವರದ್ದು; ಹಾಗಾಗಿ, ಯಾರು ಆ ಜನರು? ರದ್ದು ಮಾಡಲು ಮುಂದಾಗಿರುವದರ ಹಿಂದಿನ ಕಾರಣವೇನು ಗೊತ್ತಾ..?

ಯಾರನ್ನ ಈ ಪಟ್ಟಿಯಿಂದ ಹೊರಗಿಡಲಾಗುತ್ತಿದೆ…?

ಕೇಂದ್ರ ಸರ್ಕಾರವು ಪಡಿತರ ಚೀಟಿ ಹೊಂದಿರುವವರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ವಿಂಗಡಣೆಯನ್ನು ಪ್ರಾರಂಭಿಸಿದ್ದು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಉಚಿತ ಧಾನ್ಯಗಳಂತಹ ಪ್ರಯೋಜನಗಳಿಗೆ ಅರ್ಹರಲ್ಲದ ಪಡಿತರ ಚೀಟಿ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆ, ಈ ಪಟ್ಟಿಯಲ್ಲಿ ಸುಮಾರು 1.17 ಕೋಟಿ ಜನರು ಸೇರಿದ್ದಾರೆ.

ಇನ್ನು ಈ 1.17 ಕೋಟಿ ಜನರು ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವವರು ಅಥವಾ ಆದಾಯ ತೆರಿಗೆ ಪಾವತಿಸುವವರು ಅಥವಾ ಖಾಸಗಿ ಕಂಪನಿಗಳಲ್ಲಿ ನಿರ್ದೇಶಕರಾಗಿರುವ ಜನರಾಗಿದ್ದಾರೆ. ಹಾಗಾಗಿ, ಸೆಪ್ಟೆಂಬರ್ 30 ರೊಳಗೆ ಈ ಅನರ್ಹ ಕಾರ್ಡ್ ಹೊಂದಿರುವವರನ್ನು ತೆಗೆದುಹಾಕಲು ಅಗತ್ಯ ಪರಿಶೀಲನೆಯನ್ನು ಮಾಡುವಂತೆ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಮುಂದುವರೆದು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಡಿತರ ಚೀಟಿದಾರರ ವಿವರಗಳನ್ನು ವಿವಿಧ ಸರ್ಕಾರಿ ದತ್ತಾಂಶ ಮೂಲಗಳೊಂದಿಗೆ ಹೊಂದಿಸುವ ಮೂಲಕ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಆದಾಯ ತೆರಿಗೆ ಇಲಾಖೆ (ತೆರಿಗೆ ಪಾವತಿದಾರರು), ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ನಿರ್ದೇಶಕರು) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ನಾಲ್ಕು ಚಕ್ರದ ವಾಹನ ಮಾಲೀಕರು) ಮುಂತಾದ ಇಲಾಖೆಗಳ ದತ್ತಾಂಶಗಳು ಸೇರಿವೆ. ಅದರಂತೆ, ಈ 1.17 ಕೋಟಿ ಜನರಲ್ಲಿ 94.71 ಲಕ್ಷ ಪಡಿತರ ಚೀಟಿದಾರರು ಆದಾಯ ತೆರಿಗೆ ಪಾವತಿದಾರರು, 17.51 ಲಕ್ಷ ಸ್ವಂತ ನಾಲ್ಕು ಚಕ್ರದ ವಾಹನಗಳು ಮತ್ತು 5.31 ಲಕ್ಷ ಜನರು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಈ ಡೇಟಾವನ್ನು ಆಧರಿಸಿ, ರಾಜ್ಯಗಳು ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ, ಇದರಿಂದಾಗಿ BPL ಕಾರ್ಡ್ಗಾಗಿ ಕಾಯುತ್ತಿರವ ನಿಜವಾದ ಬಡವರ್ಗದ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದಲ್ಲಿ 19.17 ಕೋಟಿ ಪಡಿತರ ಚೀಟಿ..ಹಾಗಾದ್ರೆ ರದ್ದು ಎಷ್ಟು..?

ಏತನ್ಮಧ್ಯೆ, ಎನ್‌ಎಫ್‌ಎಸ್‌ಎ ಡ್ಯಾಶ್‌ಬೋರ್ಡ್ ಪ್ರಕಾರ, ಆಗಸ್ಟ್ 19 ರವರೆಗೆ 19.17 ಕೋಟಿ ಪಡಿತರ ಚೀಟಿಗಳನ್ನು ನೀಡಲಾಗಿದೆ, ಇದು 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 76.10 ಕೋಟಿ ಫಲಾನುಭವಿಗಳನ್ನು ಒಳಗೊಂಡಿದೆ. ಅದರಂತೆ, ನಿಯಮಗಳ ಪ್ರಕಾರ, ಸರ್ಕಾರಿ ನೌಕರರು, ವಾರ್ಷಿಕ 1 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು, ನಾಲ್ಕು ಚಕ್ರದ ವಾಹನ ಮಾಲೀಕರು ಮತ್ತು ತೆರಿಗೆದಾರರು ಉಚಿತ ಆಹಾರ ಧಾನ್ಯಗಳಿಗೆ ಅರ್ಹರಲ್ಲ. ಹಾಗಾಗಿ, ಈ ವಿಷಯದ ಬಗ್ಗೆ ಒತ್ತು ನೀಡಿ ಕೇಂದ್ರವು ಜುಲೈ 8 ರಂದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಲಹೆಗಾರರಿಗೆ ಪತ್ರ ಬರೆದಿದೆ.

ಈ ಕುರಿತು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು, ಪಡಿತರ ಚೀಟಿ ನಿರ್ವಹಣಾ ವ್ಯವಸ್ಥೆ (RCMS) ಮೂಲಕ ಈಗಾಗಲೇ ನಕಲಿ, ಸತ್ತವರು ಹಾಗೂ ನಿಷ್ಕ್ರಿಯ ಫಲಾನುಭವಿಗಳನ್ನು ಗುರುತಿಸಲಾಗಿದೆ. ಇದಕ್ಕೆ ಸೇರ್ಪಡೆಯಾಗಿ ಇತರ ಸಚಿವಾಲಯಗಳ ಡೇಟಾವನ್ನು ಹೊಂದಿಸುವ ಮೂಲಕ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ರಾಜ್ಯಗಳಿಗೆ API ಆಧಾರಿತ ಏಕೀಕರಣದ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತಿದ್ದು, ಇದನ್ನು ‘ರೈಟ್‌ಫುಲ್ ಟಾರ್ಗೆಟಿಂಗ್ ಡ್ಯಾಶ್‌ಬೋರ್ಡ್ ನಲ್ಲಿ ವೀಕ್ಷಿಸಬಹುದು.

ಹಾಗಾಗಿ, ರಾಜ್ಯಗಳು ಈ ಪ್ರಕರಣಗಳನ್ನು ಪರಿಶೀಲಿಸಿ, ಅನರ್ಹ ಫಲಾನುಭವಿಗಳನ್ನು ವ್ಯವಸ್ಥೆಯಿಂದ ತೆಗೆದುಹಾಕಿ, ಡೇಟಾವನ್ನು ಶುದ್ಧೀಕರಿಸಬೇಕು ಎಂದು ಚೋಪ್ರಾ ಒತ್ತಿ ಹೇಳಿದ್ದಾರೆ. ಈ ಪ್ರಕ್ರಿಯೆ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (TPDS) ಯ ನ್ಯಾಯಸಮ್ಮತತೆ ಹಾಗೂ ಸಮಗ್ರತೆಯನ್ನು ಬಲಪಡಿಸುವುದರ ಜೊತೆಗೆ, ಇನ್ನೂ ಪಡಿತರದಿಂದ ವಂಚಿತರಾಗಿರುವ ನಿರ್ಗತಿಕ ಜನರನ್ನು ಒಳಗೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.