PM Kisan 20th installment-ಪಿಎಂ ಕಿಸಾನ್ 20ನೇ ಕಂತು ಈ ಅವಧಿಯಲ್ಲಿ ಬಿಡುಗಡೆ ಸಾಧ್ಯತೆ

By SVR Creations

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈಗಾಗಲೇ ರೈತರ ಖಾತೆಗೆ 19ನೇ ಕಂತಿನ ಹಣವನ್ನು ಕಳೆದ ಫೆಬ್ರವರಿ-2025 ತಿಂಗಳಲ್ಲಿ ವರ್ಗಾವಣೆ ಮಾಡಲಾಗಿದ್ದು ಪ್ರಸ್ತುತ 20ನೇ ಕಂತಿನ(PM-Kisan 20th installment) ಹಣ ಜಮಾ ಮಾಡುವುದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ರೈತರಿಗೆ ಈ ಯೋಜನೆಯ ಮೂಲಕ ಒಂದು ವರ್ಷಕ್ಕೆ ರೂ 6,000/- ಆರ್ಥಿಕ ನೆರವನ್ನು ತಲಾ 2,000/- ದಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ.

ಪ್ರಸ್ತುತ ರೈತರ ಖಾತೆಗೆ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು(GOI) ಸಕಲ ಸಿದ್ದತೆಯನ್ನು ನಡೆಸಿದ್ದು ಇದಕ್ಕೆ ಸಂಬಂಧಪಟ್ಟ ಕೆಲವು ಅಗತ್ಯ ಮಾಹಿತಿ ಮತ್ತು ಈ ಯೋಜನೆಯಡಿ(PM Kisan Amount)ರೈತರು 20ನೇ ಕಂತಿನ ಹಣವನ್ನು ಪಡೆಯಲು ಅನುಸರಿಸಬೇಕಾದ ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

PM-Kisan installment-ಪ್ರತಿ ವರ್ಷ ಮೂರು ಹಂತದಲ್ಲಿ ಹಣ ವರ್ಗಾವಣೆ:

ಪಿ ಎಂ ಕಿಸಾನ್ ಯೋಜನೆಯಡಿ ಒಟ್ಟು ಮೂರು ಹಂತದಲ್ಲಿ ರೈತರ ಖಾತೆಗೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೂ 2,000/- ಆರ್ಥಿಕ ನೆರವನ್ನು ವರ್ಗಾವಣೆ ಮಾಡಲಾಗುತ್ತದೆ.

1) ಮೊದಲ ಕಂತಿನ ಹಣವನ್ನು ಏಪ್ರಿಲ್-ಜುಲೈ ತಿಂಗಳ ಮಧ್ಯದಲ್ಲಿ ವರ್ಗಾವಣೆ ಮಾಡಲಾಗುತ್ತದೆ.

2) ಎರಡನೇ ಕಂತಿನ ಹಣವನ್ನು ಆಗಸ್ಟ್-ನವೆಂಬರ್ ತಿಂಗಳ ಮಧ್ಯದಲ್ಲಿ ವರ್ಗಾವಣೆ ಮಾಡಲಾಗುತ್ತದೆ.

3) ಮೂರನೇ ಕಂತಿನ ಹಣವನ್ನು ಏಪ್ರಿಲ್-ಜುಲೈ ತಿಂಗಳ ಮಧ್ಯದಲ್ಲಿ ವರ್ಗಾವಣೆ ಮಾಡಲಾಗುತ್ತದೆ.

PM-Kisan 20th installment date-ಜೂನ್ ಕೊನೆ ಅಥವಾ ಜುಲೈನಲ್ಲಿ 20ನೇ ಕಂತಿನ ಹಣ ರೈತರ ಖಾತೆಗೆ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 20 ನೇ ಕಂತಿನ ರೂ 2,000/- ಹಣವನ್ನು ಯೋಜನೆಯ ಮಾರ್ಗಸೂಚಿಯ ಪ್ರಕಾರ ಜುಲೈ-2025ರ ಒಳಗಾಗಿ ರೈತರ ಖಾತೆಗೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡಬೇಕಾಗಿರುತ್ತದೆ.

ಇದರನ್ವಯ ಜೂನ್-2025 ರ ಕೊನೆಯಲ್ಲಿ ಅಥವಾ ಜುಲೈ-2025 ಮೊದಲ ಅಥವಾ ಎರಡನೇ ವಾರದಲ್ಲಿ ರೈತರ ಖಾತೆಗೆ ಹಣ ಜಮಾ ಅಗುವ ಸಾಧ್ಯತೆ ಇರುತ್ತದೆ.

PM Kisan- 20ನೇ ಕಂತಿನ ಹಣ ಪಡೆಯಲು ಈ ಮಾಹಿತಿ ಚೆಕ್ ಮಾಡಿಕೊಳ್ಳಿ:

ಪಿಎಂ ಕಿಸಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸದ ರೈತರು ಕೃಷಿ ಇಲಾಕೆಯನ್ನು ಭೇಟಿ ಮಾಡಿ ಅಗತ್ಯ ದಾಖಲಾತಿ ಸಲ್ಲಿಸಿ ಕೆವೈಸಿ ಮಾಡಿಸಿಕೊಳ್ಳಿ.

ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್/ಆಧಾರ್ ಕಾರ್ಡ ಲಿಂಕ್ ಮಾಡಿಸದ ಫಲಾನುಭವಿಗಳು ಕೂಡಲೇ ಈ ಕೆಲಸವನ್ನು ಮಾಡಿ.

ಅರ್ಜಿಯಲ್ಲಿ ದಾಖಲಾದ ಜಮೀನಿನ ವಿವರವನ್ನು ಸರಿಯಾಗಿರುವುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.

19ನೇ ಕಂತಿನ ಹಣವನ್ನು ಪಡೆದಿರುವ ಎಲ್ಲಾ ರೈತರಿಗೆ 20ನೇ ಕಂತಿನ ಹಣ ಜಮಾ ಅಗಲಿದ್ದು ಇಂತಹ ರೈತರ ಅರ್ಜಿಯು ಸಮರ್ಪಕವಾಗಿರುತ್ತದೆ ಈ ರೈತರು ಯಾವುದೇ ಕಚೇರಿಯನ್ನು ಭೇಟಿ ಮಾಡುವ ಅವಶ್ಯಕತೆಯಿರುವುದಿಲ್ಲ.

PM Kisan beneficiary list-2025: ಪಿಎಂ ಕಿಸಾನ್ ಅರ್ಹ ರೈತರ ಪಟ್ಟಿ ಬಿಡುಗಡೆ:

ಪಿಎಂ ಕಿಸಾನ್ ಯೋಜನೆಯಡಿ 20ನೇ ಕಂತಿನ ಹಣವನ್ನು ಪಡೆಯಲು ಅರ್ಜಿ ಸಲ್ಲಿಸಿದ ಅರ್ಹ ರೈತರ ಹಳ್ಳಿವಾರು ಪಟ್ಟಿಯನ್ನು ಕೇಂದ್ರದ ಪಿ ಎಂ ಕಿಸಾನ್ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಗೊಳಿಸಲಾಗಿದ್ದು ಈ ಕೆಳಗಿನ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Step-1: ಪ್ರಥಮದಲ್ಲಿ ಇಲ್ಲಿ Pmkisan Farmers list ಒತ್ತಿ ಅಧಿಕೃತ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯ ತಂತ್ರಾಂಶವನ್ನು ಭೇಟಿ ಮಾಡಬೇಕು.

Step-2: ತದನಂತರ ಈ ಪೇಜ್ ನಲ್ಲಿ ರೈತರು ತಮ್ಮ State , District , Sub-District , Block , Village ಹೆಸರನ್ನು ಆಯ್ಕೆ ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಈ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ಪಟ್ಟಿ ತೋರಿಸುತ್ತದೆ.

How To Check PM Kisan Status-ಪಿ ಎಂ ಕಿಸಾನ್ ಹಣ ಜಮಾ ವಿವರವನ್ನು ಚೆಕ್ ಮಾಡುವ ವಿಧಾನ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮಾ ಅಗಿದೆ ಎನ್ನುವ ವಿವರವನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ PM-Kisan Status-2025 ಅಧಿಕೃತ ಪಿ ಎಂ ಕಿಸಾನ್ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಬಳಿಕ ಇಲ್ಲಿ ನಿಮ್ಮ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Get OTP" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ನಿಮ್ಮ ಮೊಬೈಲ್ ನಂಬರ್ ಗೆ ಬರುವ ಒಟಿಪಿ/OTP ಅನ್ನು "Enter OTP" ಕಾಲಂ ನಲ್ಲಿ ಹಾಕಿ "Get Data" ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಈ ನಂತರದ ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ ಕೆಳಗೆ ಸ್ಕ್ರೋರ್ ಮಾಡಿದಾಗ "Latest Installments Details" ವಿಭಾಗದಲ್ಲಿ ಕಂತಿನವಾರು ಈ ಯೋಜನೆಯ ಹಣ ಜಮಾ ವಿವರ ತೋರಿಸುತ್ತದೆ.

Kisan samman new application-ಹೊಸದಾಗಿ ಅರ್ಜಿ ಸಲ್ಲಿಸಲು ಇದೆ ಅವಕಾಶ:

ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಹರಿದ್ದು ಇಲ್ಲಿಯವರೆಗೆ ಅರ್ಜಿ ಸಲ್ಲಿಸದ ರೈತರ ಕೂಡಲೇ ಅಗತ್ಯ ದಾಖಲಾತಿಗಳಾದ ಆಧಾರ್ ಕಾರ್ಡ, ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

PM Kisan Scheme eligibility criteria-ಅರ್ಜಿ ಸಲ್ಲಿಸಲು ಅರ್ಹತೆಯ ಮಾನದಂಡಗಳು:

ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು, ರೈತರು ಈ ಕೆಳಗಿನ ಮಾನದಂಡಗಳನ್ನು ಕೇಂದ್ರ ಸರ್ಕಾರದಿಂದ ನಿಗದಿಪಡಿಸಲಾಗಿದೆ.

ರೈತ ಕುಟುಂಬಗಳು (ಪತಿ, ಪತ್ನಿ ಮತ್ತು ಅಪ್ರಾಪ್ತ ಮಕ್ಕಳು) ಮಾತ್ರ ಅರ್ಹರು.

ಭೂಮಿ ಮಾಲೀಕತ್ವ ಹೊಂದಿರುವವರು ಕೃಷಿ ಭೂಮಿಯನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಬಹುದು.

ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು, ಪಿಂಚಣಿದಾರರು (ತಿಂಗಳಿಗೆ ರೂ. 10,000 ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವವರು) ಮತ್ತು ವೃತ್ತಿಪರರು (ವೈದ್ಯರು, ಇಂಜಿನಿಯರ್‌ಗಳು, ವಕೀಲರು ಇತ್ಯಾದಿ) ಈ ಯೋಜನೆಗೆ ಅರ್ಹರಲ್ಲ.

2019 ರ ನಂತರ ಕೃಷಿ ಜಮೀನನ್ನು ಖರೀದಿ ಮಾಡಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

PM Kisan Helpline-ಹೆಚ್ಚಿನ ಮಾಹಿತಿಗಾಗಿ:

ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್‌ಸೈಟ್ ಲಿಂಕ್- Click Here ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 

155261 ಅಥವಾ 1800-115-526 ಗೆ ಕರೆ ಮಾಡಬಹುದು.