ಕೇವಲ ಒಂದು ಬಾರಿ ಪ್ರೀಮಿಯಂ ಕಟ್ಟಿದರೆ ಸಾಕು.ಜೀವನಪೂರ್ತಿ ಖಚಿತ ಪಿಂಚಣಿ,ಸಿಂಗಲ್ ಅಥವಾ ಜಾಯಿಂಟ್ ಲೈಫ್ ಆಯ್ಕೆಗಳಲ್ಲಿ ಲಭ್ಯ
ಮರುಪಾವತಿ, ಲೋನ್ ಹಾಗೂ ತೆರಿಗೆ ರಿಯಾಯಿತಿ ಸೌಲಭ್ಯ
ನಿವೃತ್ತಿಯ ನಂತರದ ದಿನಗಳನ್ನು ಆರ್ಥಿಕವಾಗಿ ನಿಶ್ಚಿಂತರಾಗಿ ಕಳೆಯಬೇಕು ಅನ್ನೋದಾದರೆ ಸರಿಯಾದ ಯೋಜನೆಯ ಆಯ್ಕೆ ಮುಖ್ಯ. ಎಲ್‌ಐಸಿಯ ‘New Jeevan Shanti Plan’ ಈ ಸಂಕಷ್ಟಕ್ಕೆ ಉತ್ತರವಾಗಿದ್ದು, ಇದು Single Premium ರೂಪದಲ್ಲಿ ಲಭ್ಯವಿದ್ದು, ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ.ಆಸಕ್ತ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸಲು ತಪ್ಪದೇ ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ ಸಹಕರಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯಲ್ಲಿ ಅರ್ಜಿದಾರರು ತಮ್ಮ ಜೀವನ ಶೈಲಿಗೆ ಅನುಗುಣವಾಗಿ ಸಿಂಗಲ್ ಅಥವಾ ಜಾಯಿಂಟ್ ಲೈಫ್ ಆಯ್ಕೆ ಮಾಡಬಹುದು. ಒಂದು ಬಾರಿ ಮಾತ್ರ ಪ್ರೀಮಿಯಂ (premium investment) ಕಟ್ಟಿದರೆ ಸಾಕು, ನಿರ್ಧರಿತ ಅವಧಿ (1 ರಿಂದ 12 ವರ್ಷಗಳೊಳಗೆ) ನಂತರ ಜೀವನಪೂರ್ತಿ ಗ್ಯಾರಂಟೀ ಪಿಂಚಣಿ (Pension Plan) ಸಿಗುತ್ತದೆ.
9999
ಈ ಎಲ್ಐಸಿ ಯೋಜನೆಯಲ್ಲಿ ಒಮ್ಮೆ ಇನ್ವೆಸ್ಟ್ ಮಾಡಿದ್ರೆ ಜೀವನಪರ್ಯಂತ ಪಿಂಚಣಿ
ಈ ಯೋಜನೆಯನ್ನು 30 ರಿಂದ 79 ವರ್ಷ ವಯಸ್ಸಿನವರು ಖರೀದಿ ಮಾಡಬಹುದು. ಇದರಲ್ಲಿ ಲೈಫ್ ಇನ್ಸೂರೆನ್ಸ್ (Life Insurance) ಕವರ್ ಇಲ್ಲದಿದ್ದರೂ, ಆರ್ಥಿಕ ದೃಷ್ಟಿಯಿಂದ ನಿವೃತ್ತಿಯ ನಂತರದ ಬದುಕಿಗೆ ಇದು ಅತ್ಯುತ್ತಮ ಆಯ್ಕೆ.
ಈ ಯೋಜನೆಯಲ್ಲಿನ ವಿಶೇಷತೆ ಎಂದರೆ ಫ್ಲೆಕ್ಸಿಬಲ್ ಪಿಂಚಣಿ ಆಯ್ಕೆ. ತಿಂಗಳಿಗೊಮ್ಮೆ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಜೊತೆಗೆ ಈ ಯೋಜನೆಯಲ್ಲಿ ಸಂಪೂರ್ಣ ಮೌಲ್ಯದ 80% ವರೆಗೆ loan ಪಡೆಯಬಹುದಾದ ಸೌಲಭ್ಯವಿದೆ.
ಅಗತ್ಯವಿದ್ದರೆ, ನೀವು policy ರದ್ದು ಮಾಡಬಹುದಾದ Free-look period ಕೂಡ ಲಭ್ಯವಿದೆ. ಆನ್‌ಲೈನ್‌ನಲ್ಲಿ 30 ದಿನ, ಆಫ್‌ಲೈನ್‌ನಲ್ಲಿ 15 ದಿನ ಈ ಅವಧಿ ಇರುತ್ತದೆ. ಈ ಅವಧಿಯಲ್ಲಿ ತೃಪ್ತಿ ಇಲ್ಲದಿದ್ದರೆ ಪ್ರೀಮಿಯಂ ಮತ್ತೆ ಪಡೆಯಬಹುದಾಗಿದೆ (ಕಡಿತದ ನಂತರ).
ಪಾಲಿಸಿದಾರರು ಡಿಫರ್ಮೆಂಟ್ ಅವಧಿಯಲ್ಲಿ ಮೃತಪಟ್ಟರೆ, ನಾಮಿನಿಗೆ ಖರೀದಿ ಮೊತ್ತ ಅಥವಾ ಗ್ಯಾರಂಟೀಡ್ ಅಡಿಷನ್ಸ್ ಸೇರಿ ಮರುಪಾವತಿ ಲಭ್ಯವಿರುತ್ತದೆ. ಜೊತೆಗೆ ಐಟಿ ಆಕ್ಟ್ ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷವರೆಗೆ tax deduction ಸಿಗುತ್ತದೆ.
ಈ ಯೋಜನೆಯನ್ನು www.licindia.in ವೆಬ್‌ಸೈಟ್ ಅಥವಾ ಹತ್ತಿರದ LIC ಶಾಖೆಯಲ್ಲಿ ಸಂಪರ್ಕಿಸಿ ಖರೀದಿಸಬಹುದು. ಆನ್‌ಲೈನ್ ಖರೀದಿಗೆ ಹೆಚ್ಚಿನ ಸರಳತೆ ಇದೆ ಮತ್ತು ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ.