Subsidy for South India tour by Government : ದಕ್ಷಿಣ ಭಾರತದ ವಿವಿಧ ಕ್ಷೇತ್ರಗಳ ಪ್ರವಾಸ ಮಾಡುವಂತವರಿಗೆ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
“ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ” – ಎಂಬ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಮುಂದಾಗಿದ್ದು, ಇದರ ಅಡಿಯಲ್ಲಿ ದಕ್ಷಿಣ ಭಾರತದ ವಿವಿಧ ಪ್ರವಾಸಿ ಸ್ಥಳಗಳನ್ನು ನೋಡಲು ಬಯಸುವ ಪ್ರವಾಸಿಗರಿಗೆ ಸಹಾಯಧನ ನೀಡಲು ಹಾಗೂ ಸಬ್ಸಿಡಿ ದರದಲ್ಲಿ ಟಿಕೆಟ್ ಬುಕ್ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಧನ ಎಷ್ಟು ಸಿಗಲಿದೆ?
ಈ ಒಂದು ಪ್ರವಾಸಕ್ಕಾಗಿ ಒಟ್ಟು 15000 ಖರ್ಚು ಬರಲಿದ್ದು, ಇದರಲ್ಲಿ 5,000 ಯನ್ನು ಸರ್ಕಾರವು ಬರಿಸಲಿದ್ದು ಉಳಿದ 10,000 ರೂಪಾಯಿಯನ್ನು ಪ್ರವಾಸಿಗರು ಪಾವತಿಸಿ ಬುಕಿಂಗ್ ಮಾಡಬೇಕು.
ಈ ಪ್ರವಾಸದಲ್ಲಿ ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯ ಸಿಗಲಿದೆ?
ಈ ಪ್ರವಾಸವು 6 ದಿನಗಳದ್ದಾಗಿದ್ದು, ಎಸಿ ಕೋಚ್ ನಲ್ಲಿ ಊಟ ವಸತಿ ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಹಾಗೂ ರೈಲಿನಲ್ಲಿ ಭದ್ರತಾ ವ್ಯವಸ್ಥೆ ಕೂಡ ಕೊಡಲಾಗುವುದು.
ಈ ಪ್ರವಾಸದಲ್ಲಿ ಇರುವ ಪ್ರಮುಖ ಸ್ಥಳಗಳು:
• ರಾಮೇಶ್ವರ
• ಕನ್ಯಾಕುಮಾರಿ
• ಮಧುರೈ
• ತಿರುವನಂತಪುರಂ
ಪ್ರವಾಸ ಆರಂಭವಾಗುವ ದಿನಾಂಕಗಳು – 25 ಜೂನ್ 2025 ರಿಂದ ಆರಂಭವಾಗಿ 30 ಜೂನ್ 2025 ಕ್ಕೆ ಮುಕ್ತಾಯಗೊಳ್ಳಲಿದೆ.
ಬುಕಿಂಗ್ ಮಾಡುವ ವಿಧಾನ ಹೇಗೆ?
ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಅನ್ನು ಬಳಸಿ ಆನ್ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು ಅಥವಾ ಹತ್ತಿರದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬುಕಿಂಗ್ ಮಾಡಬಹುದು.
ಬುಕ್ ಮಾಡುವ ಲಿಂಕ್ –
https://www.irctctourism.com/pacakage_description?packageCode=SZKBG35
