Crop Insurance-2025: ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನ

By SVR Creations

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ(Fasal Bhima Yojane) ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ರಾಜ್ಯ ಮತ್ತು ಕೇಂದ್ರ ಸಹಯೋಗದಲ್ಲಿ ರೈತರಿಗೆ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು(Crop Insurance-2025) ಒದಗಿಸಲು ಫಸಲ್ ಬೀಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು ಪ್ರತಿ ವರ್ಷದಂತೆ ಈ ವರ್ಷವು ಸಹ ಬೆಳೆ ವಿಮೆಯನ್ನು ಮಾಡಿಸಲು ರೈತರಿಗೆ ಅವಕಾಶವನ್ನು ನೀಡಲಾಗಿದೆ.

Cashewnut farming subsidy-ಗೇರು ಕೃಷಿ ಮಾಡಲು ₹1.20 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ(Crop Insurance Application)ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಪ್ರಮುಖವಾಗಿ ಯಾವೆಲ್ಲೆ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಅವಕಾಶ ನೀಡಲಾಗಿದೆ? ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ, ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Crop Insurance Crop list-ಪ್ರಮುಖ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅವಕಾಶವಿದೆ:

1) ಸೂರ್ಯಕಾಂತಿ/Sunflower

2) ಮುಸುಕಿನ ಜೋಳ/Maize

3) ಭತ್ತ/Paddy

4) ಜೋಳ/Sorghum

5) ನೆಲಗಡಲೆ/Groundnut

6) ನವಣೆ/Navane

7) ಸಜ್ಜೆ/Bajra

8) ತೂಗರಿ/Redgram

9) ರಾಗಿ/Ragi

10) ಈರುಳ್ಳಿ/Onion

11) ಹತ್ತಿ/Cotton

12) ಟೊಮ್ಯಾಟೊ/Tomato

13) ಎಳ್ಳು/Sesame

Crop You Can Insure-ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿದೆ? ಎಂದು ತಿಳಿಯುವ ವಿಧಾನ:

ರೈತರು ತಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬಹುದು ಎನ್ನುವ ಅಧಿಕೃತ ಮಾಹಿತಿಯನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Click Here ಮಾಡಿ ಅಧಿಕೃತ ಬೆಳೆ ವಿಮೆ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಈ ಪೇಜ್ ನಲ್ಲಿ ವರ್ಷ ಆಯ್ಕೆ- "2025-26" ಮತ್ತು ಋತು ಆಯ್ಕೆ ವಿಭಾಗದಲ್ಲಿ- "Kharif" ಎಂದು ಸೆಲೆಕ್ಟ್ ಮಾಡಿಕೊಂಡು ಮುಂದೆ/Go ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಗೆ ಪ್ರವೇಶ ಪಡೆಯಬೇಕು.

Step-3: ಬಳಿಕ ಈ ಪೇಜ್ ನಲ್ಲಿ ಕೆಳಗೆ "Farmers" ಕಾಲಂ ನಲ್ಲಿ ಕಾಣುವ "Crop You Can Insure" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಗ್ರಾಮವನ್ನು ಆಯ್ಕೆ ಮಾಡಿಕೊಂಡು "Display" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬಹುದು ಎನ್ನುವ ವಿವರವನ್ನು ಪಡೆಯಬಹುದು.

Last Date For Crop Insurance- ಪ್ರಮುಖ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

1) ಸೂರ್ಯಕಾಂತಿ- 16 ಆಗಸ್ಟ್ 2025

2) ಮುಸುಕಿನ ಜೋಳ- 31 ಜುಲೈ 2025

3) ಭತ್ತ- 31 ಜುಲೈ 2025

4) ಜೋಳ- 31 ಜುಲೈ 2025

5) ನೆಲಗಡಲೆ- 31 ಜುಲೈ 2025

6) ನವಣೆ- 31 ಜುಲೈ 2025

7) ಸಜ್ಜೆ- 31 ಜುಲೈ 2025

8) ತೂಗರಿ-31 ಜುಲೈ 2025

9) ರಾಗಿ- 31 ಜುಲೈ 2025

10) ಈರುಳ್ಳಿ- 15 ಜುಲೈ 2025

11) ಹತ್ತಿ-15 ಜುಲೈ 2025

12) ಟೊಮ್ಯಾಟೊ- 30 ಜೂನ್ 2025

13) ಎಳ್ಳು- 30 ಜೂನ್ 2025

Crop Insurance Premium-ಬೆಳೆವಾರು ಬೆಳೆ ವಿಮೆ ಪ್ರಿಮಿಯಂ ಮೊತ್ತವನ್ನು ತಿಳಿಯುವ ವಿಧಾನ:

ರೈತರು ತಾವು ಬೆಳೆ ವಿಮೆ ಮಾಡಿಸಲು ಇಚ್ಚಿಸುವ ಬೆಳೆಗೆ ಎಷ್ಟು ಮೊತ್ತದ ಬೆಳೆ ವಿಮೆ ಪ್ರಿಮಿಯಂ ಮೊತ್ತವನ್ನು ಪಾವತಿ ಮಾಡಬೇಕು ಎನ್ನುವ ಮಾಹಿತಿಯನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮನೆಯಲ್ಲೇ ಇದ್ದು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Click Here ಮಾಡಿ ಅಧಿಕೃತ ಬೆಳೆ ವಿಮೆ ತಂತ್ರಾಂಶವನ್ನು ಭೇಟಿ ಮಾಡಬೇಕು ಬಳಿಕ ಇಲ್ಲಿ ಬಲಬದಿಯಲ್ಲಿ ಮೇಲೆ ಕಾಣುವ "ಕನ್ನಡ" ಬಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬೇಕು.

Step-2: ಇದಾದ ನಂತರ ಇಲ್ಲಿ ಕಾಲಂ ನಲ್ಲಿ ಕೆಳಗೆ ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ಬಳಿಕ ಇಲ್ಲಿ ಜಿಲ್ಲೆ,ತಾಲ್ಲೂಕು,ಹೋಬಳಿ,ಗ್ರಾಮ,ಬೆಳೆಯನ್ನು ಆಯ್ಕೆ ಮಾಡಿಕೊಂಡು ಬಳಿಕ ಬೆಳೆ ವಿಸ್ತೀರ್ಣ ಮತ್ತು ಗುಂಟೆ ಅನ್ನು ಆಯ್ಕೆ ಮಾಡಿ "ಪ್ರಿಮಿಯಂ ವಿವರ" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಹಾಕಿರುವ ಬೆಳೆ ವಿಸ್ತೀರ್ಣಕ್ಕೆ ಎಷ್ಟು ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿಸಬೇಕು ಎಷ್ಟು ಬೆಳೆ ವಿಮೆ ದೊರೆಯುತ್ತದೆ ಎನ್ನುವ ವಿವರ ತೋರಿಸುತ್ತದೆ.

Bele Vime Application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಪ್ರಿಮಿಯಂ ಅನ್ನು ಪಾವತಿ ಮಾಡಿ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬಹುದು.

Required Documents-ಅರ್ಜಿ ಸಲ್ಲಿಸಲು ದಾಖಲೆಗಳು:

ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು.

ರೈತರ ಆಧಾರ್ ಕಾರ್ಡ/Adhar card

ಬ್ಯಾಂಕ್ ಪಾಸ್ ಬುಕ್/Bank Pass Book

ಜಮೀನಿನ ಪಹಣಿ/ಊತಾರ್/RTC

ಪೋಟೋ/Photo

ಮೊಬೈಲ್ ನಂಬರ್/Mobile Number

Crop Insurance Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಅಧಿಕೃತ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ- Click Here

For More Information-ಹೆಚ್ಚಿನ ಮಾಹಿತಿಯನ್ನ ಪಡೆಯಲು ಉಪಯುಕ್ತ ಲಿಂಕ್ ಗಳು:

Bele Vime Website-ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ ಪೋರ್ಟಲ್- Click Here

Bele Vime Notification-ಅಧಿಕೃತ ಬೆಳೆ ವಿಮೆ ಅರ್ಜಿಯ ಕುರಿತು ಪ್ರಕಟಣೆ- Download Now

Bele Vime Helpline-ಸಹಾಯವಾಣಿ:

Agriculture Insurance Company(AIC) 1800-425-0505

Universal Sompo GIC 1800-200-5142

SBI GIC 1800-180-1551/ 1800-209-1111

HDFC Ergo 1800-266-0700

Future Generali 1800-266-4141

ICICI LOMBARD 1800-103-7712

Bajaj Allianz GIC 1800-209-5959

Reliance General Insurance Co. Ltd., 1800-102-4088

Oriental General insurance Company 1800-425-6678

TATA Aig General Insurance Company 1800-209-3536

IFFCO Tokio General Insurance Company 1800-103-5490