ದೇವರಾಜ ಅರಸು ನಿಗಮ(Devaraj arasu nigama)ದಿಂದ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್(taxi/swift dzire/ashok leyland dost/bajaj auto) ವಾಹನಗಳನ್ನು ಖರೀದಿ ಮಾಡಲು ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇದರ ಕುರಿತು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ದೇವರಾಜ ಅರಸು ನಿಗಮದಿಂದ 2025-26 ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆಯಡಿ (swavalambi sarati application) ಅರ್ಹ ಫಲಾನುಭವಿಗಳಿಗೆ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನವನ್ನು ಖರೀದಿ ಮಾಡಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಸಬ್ಸಿಡಿಯಲ್ಲಿ ವಾಹನವನ್ನು ಖರೀದಿ ಮಾಡಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರಸ್ತುತ ಈ ಲೇಖನದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿ(Karnataka taxi subsidy)ವಾಹನ ಖರೀದಿಗೆ ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಮಾನದಂಡಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಇನ್ನಿತರೆ ಅವಶ್ಯಕ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
Last Date for Online Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ದೇವರಾಜ ಅರಸು ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್(Car Subsidy Scheme) ವಾಹನಗಳನ್ನು ಖರೀದಿ ಮಾಡಲು ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳ ವಿವರ ಹೀಗಿದೆ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಈಗಾಗಲೇ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸ್ವೀಕಾರ ಆರಂಭಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30 ಜೂನ್ 2025
Taxi subsidy-ಸಹಾಯಧನ ಮೊತ್ತ ಎಷ್ಟು?
ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅರ್ಹ ಫಲಾನುಭವಿಗಳಿಗೆ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನಗಳನ್ನು ಖರೀದಿ ಮಾಡಲು ಶೇ.50 ರಷ್ಟು ಅಥವಾ ಗರಿಷ್ಟ ರೂ ₹3.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಅಭ್ಯರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ.
Car subsidy-ಈ ಯೋಜನೆಯಡಿ ಯಾವೆಲ್ಲ ವಾಹನಗಳನ್ನು ಖರೀದಿ ಮಾಡಬಹುದು?
ಟ್ಯಾಕ್ಸಿ/Swift dzire
ಸರಕು ಸಾಗಣಿಕೆ ವಾಹನ//Tata ace
ನಾಲ್ಕು ಚಕ್ರಗಳ ವಾಹನ/Ashok leyland dost
ಆಟೋ/Bajaj auto
Four wheeler subsidy scheme in karnataka- ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಸಬ್ಸಿಡಿಯಲ್ಲಿ ವಾಹನವನ್ನು ಖರೀದಿ ಮಾಡಲು ನಿಗಮದಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ವಿವರ ಈ ಕೆಳಗಿನಂತಿದೆ.
1) ಅಭ್ಯರ್ಥಿಗಳು ಪ್ರವರ್ಗ-1, 2ಎ, 3ಎ, ಮತ್ತು 3ಬಿ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
2) ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
3) ಅರ್ಜಿದಾರರು ವಯಸ್ಸು 21 ವರ್ಷದಿಂದ 45 ವರ್ಷದ ಮಿತಿಯೊಳಗಿರಬೇಕು.
4) ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದಲ್ಲಿ ರೂ 98,000/- ಹಾಗೂ ನಗರ ಪ್ರದೇಶದಲ್ಲಿ ರೂ 1,20,000/- ಮಿತಿಯೊಳಗಿರಬೇಕು.
6) ಲಘು ವಾಹನದ ಡ್ರೈವಿಂಗ್ ಲೆಸೈನ್ಸ್ ಅನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
7) ಅರ್ಜಿದಾರರ ಕುಟುಂಬದ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರಕಾರಿದ ನೌಕರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
Swavalambi sarati online application-ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅರ್ಹ ಅಭ್ಯರ್ಥಿಗಳು ಅಗತ್ಯ ಡಾಕುಮೆಂಟ್ಸ್ ಗಳನ್ನು ತೆಗೆದುಕೊಂಡು ನೇರವಾಗಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್- Apply Now
Swavalambi sarati documents- ಅರ್ಜಿ ಸಲ್ಲಿಸಲು ಅಗತ್ಯ ಡಾಕುಮೆಂಟ್ಸ್ ಗಳು:
1) ಅರ್ಜಿದಾರರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4) ಪೋಟೋ
5) ಡ್ರೈವಿಂಗ್ ಲೈಸೆನ್ಸ್
6) ರೇಶನ್ ಕಾರ್ಡ ಪ್ರತಿ.
7) ಮೊಬೈಲ್ ನಂಬರ್
ಸ್ವಾವಲಂಬಿ ಸಾರಥಿ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಸಹಾಯವಾಣಿ ಸಂಖ್ಯೆ- 80-22374832, 8050770004, 805077000
ಅಧಿಕೃತ ಜಾಲತಾಣ- Click Here
