ಶೇ.50 ರಷ್ಟು ಸಹಾಯಧನ ಅಥವಾ ₹3 ಲಕ್ಷವರೆಗೆ ಲಾಭ,Swift Dzire, Dost, Auto ಖರೀದಿಗೆ ಅವಕಾಶ.ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30 ಜೂನ್ 2025
ನಿರುದ್ಯೋಗಿ ಯುವಕರಿಗೆ ತಾವು ಇಚ್ಛಿಸಿದ ಟ್ಯಾಕ್ಸಿ ಅಥವಾ ಸರಕು ಸಾಗಣೆ ವಾಹನ ಖರೀದಿಸಲು ಸರ್ಕಾರವು ಸಾಕಷ್ಟು ಬೃಹತ್ ನೆರವು ನೀಡುತ್ತಿದೆ. ದೇವರಾಜ ಅರಸು ನಿಗಮವು ಈ ವರ್ಷವೂ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಯನ್ನು ಮುಂದುವರೆಸಿದ್ದು, ಅರ್ಹ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಉದ್ಯೋಗವಕಾಶ ಕಲ್ಪಿಸಲು ಮುಂದಾಗಿದೆ.ಇದೆ ತರಹದ ನೇಮಕಾತಿ,ವಿದ್ಯಾರ್ಥಿವೇತನ,ಕೇಂದ್ರ/ರಾಜ್ಯ ಯೋಜನೆಗಳಿಗಾಗಿ ನಮ್ಮ ಟೆಲಿಗ್ರಾಮ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯಡಿ Swift Dzire, Tata Ace, Ashok Leyland Dost ಅಥವಾ Bajaj Auto ವಾಹನಗಳನ್ನು ಖರೀದಿಸಲು ಶೇ.50% ಅಥವಾ ಗರಿಷ್ಠ ₹3,00,000 ವರೆಗೆ ಸಹಾಯಧನ ಲಭಿಸುತ್ತದೆ.
ಉಳಿದ ಮೊತ್ತಕ್ಕೆ ಸಹಕಾರಿಯ ಬ್ಯಾಂಕ್‌ಗಳಿಂದ ಸಾಲ (bank loan for vehicle purchase) ದೊರೆಯುತ್ತದೆ.
ಅರ್ಜಿ ಸಲ್ಲಿಸಲು ಇಚ್ಛಿಸುವವರು ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು. ಮತ್ತು ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ ಮಿತಿ ₹98,000, ನಗರ ಪ್ರದೇಶದವರಿಗೆ ₹1.2 ಲಕ್ಷ ಎಂದು ನಿಗದಿಯಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಸಕ್ತರು ಸೇವಾ ಸಿಂಧು ಪೋರ್ಟಲ್ (Seva Sindhu portal) ಅಥವಾ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಸೇವಾ ಸಿಂಧು ಪೋರ್ಟಲ್ ಲಿಂಕ್:
https://sevasindhu.karnataka.gov.in/Sevasindhu/Kannada
ಅವಶ್ಯಕ ದಾಖಲೆಗಳು:
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್‌ಬುಕ್
ಡ್ರೈವಿಂಗ್ ಲೈಸೆನ್ಸ್
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
ಪೋಟೋ, ರೇಶನ್ ಕಾರ್ಡ್, ಮೊಬೈಲ್ ನಂಬರ್
ಹೆಚ್ಚಿನ ಮಾಹಿತಿಗೆ:
ವೆಬ್‌ಸೈಟ್: https://dbcdc.karnataka.gov.in/
ಸಹಾಯವಾಣಿ ಸಂಖ್ಯೆ: 080-22374832 / 8050770004
