ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ ತಿದ್ದುಪಡಿಗೆ(Ration Correction) ಅರ್ಜಿ ಸಲ್ಲಿಸುವವರಿಗೆ ಸಿಹಿ ಸುದ್ದಿ ಪ್ರಕಟವಾಗಿದ್ದು, ಆನ್ಲೈನ್ ಮೂಲಕ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಕುರಿತು ಗ್ರಾಹಕರಲ್ಲಿ ಮೂಡಿರುವ ಗೊಂದಲಗಳಿಗೆ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ.
ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು 31 ಜನವರಿ 2025 ರವರಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ(Ration Correction Application) ಎಂದು ಸುದ್ದಿಗಳು ಪ್ರಸಾರವಾದ ಕಾರಣ ಹಲವು ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳ ಮುಂದೆ ಜನ ದಟ್ಟಣೆ ಏರಿಕೆಯಾಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಟೋಕನ್ ವಿತರಣೆ ಮಾಡಲಾಗುತ್ತಿದೆ ಈ ಕಾರಣದಿಂದ ಆಹಾರ ಇಲಾಖೆ ಅಧಿಕಾರಿಗಳು ಕೊನೆಯ ದಿನಾಂಕದ ಕುರಿತು ನೀಡಿರುವ ಸ್ಪಷ್ಟನೆ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ರೇಷನ್ ಕಾರ್ಡ ತಿದ್ದುಪಡಿಗೆ(Ration Card) ಅರ್ಜಿ ಸಲ್ಲಿಸಲು ಎಲ್ಲಿಯವರೆಗೆ ಅವಕಾಶ ನೀಡಲಾಗಿದೆ? ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ನೀಡಿರುವ ಅಧಿಕೃತ ಹೇಳಿಕೆಗಳೇನು? ಇದಲ್ಲದೇ ರೇಷನ್ ಕಾರ್ಡ ತಿದ್ದುಪಡಿ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದ್ದು ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.
Ahara Ilake News-ರೇಷನ್ ಕಾರ್ಡಗೆ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಪ್ರತಿ ತಿಂಗಳು ಅವಕಾಶ:
ಆಹಾರ ಇಲಾಖೆಯ ಅಧಿಕಾರಿಗಳ ಮಾಹಿತಿಯ ಪ್ರಕಾರ ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕುರಿತು ಹೆಚ್ಚು ಅತಂಕ ಪಡುವ ಅಗತ್ಯವಿಲ್ಲ 31 ಜನವರಿ 2025 ಕೊನೆಯ ದಿನಾಂಕವಾಲ್ಲ ಇದಲ್ಲದೇ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಸಿದ್ದಡಿಸಿಕೊಂಡು ಪ್ರತಿ ತಿಂಗಳ ಮೊದಲ ವಾರ ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಇಲಾಖೆ ಅಧಿಕಾರಿಗಳು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
Karnataka Food Department News-ಸರ್ವರ್ ಸಮಸ್ಯೆಗೆ ಬೇಸತ್ತ ಸಾರ್ವಜನಿಕರು:
ಪಡಿತರ ಚೀಟಿ ಹೊಂದಿರುವವರಲ್ಲಿ ಅನೇಕ ಜನರು ತಿದ್ದುಪಡಿಗೆ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸುವು ಇನ್ನು ಬಾಕಿಯಿರುವುದರಿಂದ ದೊಡ್ಡ ಸಂಖ್ಯೆಯ ಗ್ರಾಹಕರು ಒಂದೇ ಬಾರಿಗೆ ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರಗಳ ಬಳಿ ಬಂದಾಗ ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಸಾರ್ವಜನಿಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದ್ದರಿಂದ ಗ್ರಾಹಕರು ಇಲಾಖೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
Ahara Ilake Server-ಸರ್ವರ್ ಸಮಸ್ಯೆ ಬಗೆಹರಿಸಲು ಇಲಾಖೆಯಿಂದ ಕ್ರಮ:
ಆಹಾರ ಇಲಾಖೆಯ ತಂತ್ರಾಂಶದ ಸರ್ವರ್ ಸಮಸ್ಯೆಯನ್ನು ಶಾಶ್ಚತವಾಗಿ ಸರಿಪಡಿಸಿಸಲು ಇಲಾಖೆಯು ನೂತನ ಕ್ರಮಕ್ಕೆ ಮುಂದಾಗಿದ್ದು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ(NIC) ಮತ್ತು ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ(KSDC) ಆಹಾರ ತಂತ್ರಾಂಶವನ್ನು ಮೈಗ್ರೇಶನ್ ಮಾಡುವ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲೇ ಸರ್ವರ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
New Ration Card Application-ಸದ್ಯ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ:
ಇನ್ನು ಅನೇಕ ಜನರು ಹೊಸ ರೇಷನ್ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯಿಂದ ಅವಕಾಶ ನೀಡಲಾಗಿದೆ ಎಂದು ತಪ್ಪು ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಲು ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರದ ಬಳಿ ಹೋಗುತ್ತಿದ್ದು ಈ ಕುರಿತು ಇಲಾಖೆ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದು ಸದ್ಯ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.
Karnataka Food Department Website-ರೇಷನ್ ಕಾರ್ಡ ಕುರಿತು ಎಲ್ಲಾ ಬಗೆಯ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ಪಡೆಯಬಹುದು:
ಪಡಿತರ ಚೀಟಿ ಹೊಂದಿರುವ ಗ್ರಾಹಕರು ರೇಷನ್ ಕಾರ್ಡ ತಿದ್ದುಪಡಿ ಅರ್ಜಿ, ಹಾಲಿ ಪಡಿತರ ಚೀಟಿ ಸ್ಥಿತಿ, ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ವರ್ಗಾವಣೆ ಸ್ಥಿತಿ ಮತ್ತು ರೇಷನ್ ಕಾರ್ಡ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಸಹ ಈ ಕೆಳಗೆ ನೀಡಿರುವ ಆಹಾರ ಇಲಾಖೆಯ ahara ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.
Ahara website-ಅಧಿಕೃತ ವೆಬ್ಸೈಟ್ ಲಿಂಕ್- CLICK HERE