ನಮ್ಮ ಮೆಟ್ರೋದಿಂದ ಭರ್ಜರಿ ಗುಡ್ನ್ಯೂಸ್.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ನಮ್ಮ ಮೆಟ್ರೋದಿಂದ ಭರ್ಜರಿ ಗುಡ್ನ್ಯೂಸ್.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರಲ್ಲಿ ಉದ್ಯೋಗ ಹುಡುಕುತ್ತಿರುವರಿಗೆ ಇದು ಅವಕಾಶ ಮೆಟ್ರೋದಲ್ಲಿ ಜಾಬ್ ಬೇಕೆಂದವರು ಒಮ್ಮೆ ಟ್ರೈ ಮಾಡಿ ನೋಡಿ ಈ ಹುದ್ದೆಗಳಿಗೆ ಅಪ್ಲೇ ಮಾಡುವುದೇಗೆ, ಒಟ್ಟು ಪೋಸ್ಟ್ಗಳು.



ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್)ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಈ ಹುದ್ದೆಗೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ.

ಸದ್ಯ ಮೆಟ್ರೋ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸಾರಿಗೆ ಸಂಸ್ಥೆಯಾಗಿದೆ. ಹೀಗಾಗಿ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವವರು ಇದನ್ನು ಸದುಪಯೋಗ ಮಾಡಿಕೊಳ್ಳಬಹುದು. ಈ ಹುದ್ದೆಗಳಿಗೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಉತ್ತಮವಾದ ಸಂಬಳ ಕೂಡ ಇರುತ್ತದೆ. ಆಸಕ್ತರು ಒಮ್ಮೆ ಟ್ರೈ ಮಾಡಿ ನೋಡಿ.

ಬಿಎಂಆರ್ಸಿಎಲ್ನಲ್ಲಿ ಖಾಲಿ ಇರುವ ಹುದ್ದೆಗಳು

ಒಟ್ಟು ಪೋಸ್ಟ್ಗಳು- 58

ಹುದ್ದೆಯ ಸ್ಥಳ- 

ಬೆಂಗಳೂರು

ಹುದ್ದೆಯ ಹೆಸರು- 

ಸಹಾಯಕ ಭದ್ರತಾ ಅಧಿಕಾರಿ ಹುದ್ದೆ

ತಿಂಗಳ ಸಂಬಳ- 

30,000 ದಿಂದ 32,950 ರೂ.ಗಳು

ವಯೋಮಿತಿ ಸಡಿಲಿಕೆ: 

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಯಮಗಳ ಪ್ರಕಾರ ಇರುತ್ತದೆ

ವಿದ್ಯಾರ್ಹತೆ: 

BMRCL ನಿಯಮಗಳ ಪ್ರಕಾರ ಕೇಳಿದಂತೆ ಇರುತ್ತದೆ.

ವಯೋಮಿತಿ: 

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿ ಗರಿಷ್ಠ ವಯಸ್ಸು 2024 ಆಗಸ್ಟ್ 13ರಂತೆ 62 ವರ್ಷಗಳು.

ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ..?

ದೈಹಿಕ ಪರೀಕ್ಷೆ, ಹುದ್ದೆಗೆ ಬೇಕಾದ ಅರ್ಹತೆ, ಅನುಭವ ಮತ್ತು ಸಂದರ್ಶನ

ಅಪ್ಲೇ ಮಾಡುವುದು ಹೇಗೆ..?

english.bmrc.co.in ವೆಬ್ಸೈಟ್ಗೆ ಭೇಟಿ ನೀಡಬೇಕು. ಬಳಿಕ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬಹುದು. ನಂತರ ಆನ್ಲೈನ್ನಲ್ಲಿ ಹಾಕಿದ ಪ್ರತಿ ಹಾಗೂ ಸಂಬಂಧಿತ ದಾಖಲೆಗಳಿಗೆ ಸೆಲ್ಫ್ ಅಟೆಸ್ಟೆಡ್ ಮಾಡಿ ಕಾಪಿಗಳನ್ನು ಕಚೇರಿಗೆ ಕಳುಹಿಸಬೇಕು.

ನೀವು ಕಳುಹಿಸಬೇಕಾದ ವಿಳಾಸ

ಜನರಲ್ ಮ್ಯಾನೇಜರ್ (ಹೆಚ್ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು- 560027

ಪ್ರಮುಖವಾದ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಸೆಪ್ಟೆಂಬರ್ 09

ಆನ್ಲೈನ್ನಲ್ಲಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ-

 https://projectrecruit.bmrc.co.in/frmApplFillTab.aspx?ND=82



Post a Comment

Previous Post Next Post
CLOSE ADS
CLOSE ADS
×