Constable Job application-SSLC ಪಾಸಾದವರಿಗೆ 39,481 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

Constable Job application-SSLC ಪಾಸಾದವರಿಗೆ 39,481 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

Constable Job application-SSLC:-ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿ(SSC GD Constable Jobs) ಆಯೋಗವಾಗಿರುವಂತಹ " ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ" ಪ್ರತಿ ವರ್ಷದಂತೆ ಈ ವರ್ಷವೂ ಬೃಹತ್ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ.




ಕೇಂದ್ರ ಸರ್ಕಾರದ ವಿವಿಧ ರಕ್ಷಣಾ ಪಡೆಗಳಾದ ಅಸ್ಸಾಂ ರೈಫಲ್ಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಒಟ್ಟು 39,481 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. 

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ, ಅರ್ಜಿ ಸಲ್ಲಿಕೆಗೆ ನಿಗದಿಸಿದ ಪ್ರಮುಖ ದಿನಾಂಕಗಳು ಹಾಗೂ ಅರ್ಜಿ ಸಲ್ಲಿಕೆಯ ಲಿಂಕ್ ವಿವರವು ಇಲ್ಲಿದೆ.

Constable Job details-ಒಟ್ಟು ಹುದ್ದೆಗಳ ವಿವರ ಮತ್ತು ವಿಂಗಡಣೆ: 

ಒಟ್ಟು 38,481 ಜಿಡಿ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮಿಸಲಿಟ್ಟ ಹುದ್ದೆಗಳ ವಿವರ ಕೆಳಗಿದೆ.

• ಪುರುಷರಿಗೆ - 35,612 ಹುದ್ದೆಗಳು 

• ಮಹಿಳೆಯರಿಗೆ - 3,869 ಹುದ್ದೆಗಳು 

SSC GD Constable Job qualification-ಶೈಕ್ಷಣಿಕ ವಿದ್ಯಾರ್ಹತೆ:  

ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ನೀವು ಅರ್ಜಿ ಸಲ್ಲಿಸಬಹುದು. 

Age limit-ವಯೋಮಿತಿ ಅರ್ಹತೆಗಳು: 

ಅರ್ಜಿ ಸಲ್ಲಿಸುವವರು 18ರಿಂದ 23 ವರ್ಷದ ವಯೋಮಿತಿಯಲ್ಲಿರಬೇಕು. ಒಂದು ವೇಳೆ ನೀವು ಮೀಸಲಾತಿ ವರ್ಗಗಳ ಅಡಿಯಲ್ಲಿ ಬರುವುದಾದರೆ ನಿಮಗೆ ಗರಿಷ್ಠ ವಯೋಮಿತಿಯಲ್ಲಿ ವಯೋಮಿತಿ ಸಡಲಿಕೆ ನೀಡಲಾಗುವುದು.

SSC GD Constable Salary- ವೇತನ:

ಕಾನ್ಸ್ಟೇಬಲ್ ಆಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ ವೇತನವು 21,700ರೂ. ನಿಂದ 69,100ರೂ. ವರೆಗೆ ಇರಲಿದೆ.

Application fee-ಅರ್ಜಿ ಶುಲ್ಕ: 

• General, OBC ಅಭ್ಯರ್ಥಿಗಳು - 100ರೂ. ಅರ್ಜಿ ಶುಲ್ಕ ಪಾವತಿಸಬೇಕು 

• ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Important dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು: 

• ನೇಮಕಾತಿ ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ - 05 ಸೆಪ್ಟೆಂಬರ್ 2024

• ನೇಮಕಾತಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ - 14 ಅಕ್ಟೋಬರ್ 2024

useful website links-ಪ್ರಮುಖ ಲಿಂಕುಗಳು: 

Official website:-https://ssc.gov.in/login

Notification:-https://drive.google.com/file/d/1FHL9MuDyvDxNosJ9oSbd1DmKrh_FBNss/view?usp=sharing

1 Comments

Previous Post Next Post
CLOSE ADS
CLOSE ADS
×