ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್! ಬರೀ 7 ಸಾವಿರಕ್ಕೆ ಖರೀದಿಸಿ ಈ ಬ್ರಾಂಡೆಡ್ ಮೊಬೈಲ್

ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್! ಬರೀ 7 ಸಾವಿರಕ್ಕೆ ಖರೀದಿಸಿ ಈ ಬ್ರಾಂಡೆಡ್ ಮೊಬೈಲ್

Smartphone:- ಸ್ಮಾರ್ಟ್ಫೋನ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕೆಲ ಮೊಬೈಲ್ ಕಂಪನಿಗಳು ಟೆಕ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ.



ಇದು ಸ್ಮಾರ್ಟ್ ಯುಗ. ಜನ ಸ್ಮಾರ್ಟ್ ಆಗಿ ಯೋಚಿಸುತ್ತಿರುವ ಇಂದಿನ ದಿನದಲ್ಲಿ ದಿನಕ್ಕೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗುತ್ತಿದೆ. ಅನೇಕ ಕಂಪನಿಗಳು ಕಾಲಕಾಲಕ್ಕೆ ಹೊಸ ಸ್ಮಾರ್ಟ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. Xiaomi ಯ ಉಪ-ಬ್ರಾಂಡ್ ಆಗಿರುವ Redmi ಇತ್ತೀಚೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

Redmi ಬಿಡುಗಡೆ ಮಾಡಿದ ಈ ಹೊಸ ಸ್ಮಾರ್ಟ್‌ಫೋನ್ ಅನ್ನು REDMIA3x ಎಂದು ಹೆಸರಿಸಲಾಗಿದೆ. ಇನ್ನು ಈ ಫೋನ್ ಅದ್ಭುತ ಫೀಚರ್ಸ್ ಹೊಂದಿದ್ದು, ಭಾರೀ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. REDMIA3x ಫೋನ್ 3GB RAM+64GB ರೂಪಾಂತರಕ್ಕೆ ಕೇವಲ 6,999 ರೂಪಾಯಿ ಆಗಿದೆ, ಆದರೆ 4GB RAM + 128GB ರೂಪಾಂತರದ ಬೆಲೆ ಕೇವಲ 7,999 ರೂಪಾಯಿ ಆಗಿದೆ.

ಕಡಿಮೆ ಬಜೆಟ್ನಲ್ಲಿ ಸ್ಮಾರ್ಟ್ಫೋನ್ ಖರೀದಿಸಬೇಕು ಅಂದುಕೊಂಡವರಿಗೆ ಈ ಫೋನ್ ಅತ್ಯುತ್ತಮ ಆಯ್ಕೆಯಾಗಿದೆ. ರೆಡ್ಮಿ ಕಂಪನಿಯ ಫೋನ್ಗಳು ಸಾಮಾನ್ಯವಾಗಿ ಉತ್ತಮ ಗುಣಮಟ್ಟದಲ್ಲೆ ಇರುತ್ತವೆ. ಇನ್ನು ಈ ಹೊಸ ಫೋನ್ ಕೂಡಾ ಗ್ರಾಹಕರ ಬೆಸ್ಟ್ ಫೋನ್ ಆಗಲಿದೆ.

ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ ಸಾಫ್ಟ್‌ವೇರ್, ಗೊರಿಲ್ಲಾ ಗ್ಲಾಸ್ 3 ರಕ್ಷಣೆ, 5000mAh ಬ್ಯಾಟರಿ ಸಾಮರ್ಥ್ಯ, ಡ್ಯುಯಲ್ ಕ್ಯಾಮೆರಾ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಅದೇ ರೀತಿ Midnight Black, Ocean Green, Olive Green ಮತ್ತು Starry White ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಈ ಫೋನ್ 6.71-ಇಂಚಿನ IPS LCD ಡಿಸ್ಪ್ಲೇ, HD+ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್, Unisoc T603 ಪ್ರೊಸೆಸರ್ ಹೊಂದಿದೆ.

ಇನ್ನು ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಹೇಳುವುದಾದ್ರೆ ಈ ಫೋನ್ನ ಮೈಕ್ರೊ SD ಕಾರ್ಡ್ ಸಹಾಯದಿಂದ 1TB ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಸಬಹುದು. ಈ ಫೋನ್ ಅನ್ನು Amazon ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದಲೂ ಖರೀದಿಸಬಹುದು.

Post a Comment

Previous Post Next Post
CLOSE ADS
CLOSE ADS
×