ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಗಳು.. ಸ್ಯಾಲರಿ ಎಷ್ಟು, ಕೊನೆ ದಿನಾಂಕ

ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಗಳು.. ಸ್ಯಾಲರಿ ಎಷ್ಟು, ಕೊನೆ ದಿನಾಂಕ

ನೋಟು ಮುದ್ರಣ ಸಂಸ್ಥೆಯಲ್ಲಿನ ಜಾಬ್ಗಳಿಗೆ ಅರ್ಜಿ ಆಹ್ವಾನ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅಪ್ಲೇ ಮಾಡಿ, ಲಿಂಕ್ ಇಲ್ಲಿದೆ



ವಿದ್ಯಾರ್ಹತೆ, ವೇತನ ಶ್ರೇಣಿ, ಹುದ್ದೆಗಳ ಸಂಪೂರ್ಣ ವಿವರ ಇದೆ

ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆ (ಬಿಆರ್ಬಿಎನ್ಎಂಪಿಎಲ್)ಯಲ್ಲಿ ಖಾಲಿ ಇರುವಂತ ಸಹಾಯಕ ವ್ಯವಸ್ಥಾಪಕರು, ಭದ್ರತಾ ವ್ಯವಸ್ಥಾಪಕ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿದ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.

ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆಯಲ್ಲಿ ಮೂರು ಸಹಾಯಕ ವ್ಯವಸ್ಥಾಪಕರು (ಭದ್ರತೆ), ಭದ್ರತಾ ವ್ಯವಸ್ಥಾಪಕ ಒಂದು ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿ ಸೂಚಿಸಲಾಗಿದೆ.

RBI Recruitment 

ಈ ಹುದ್ದೆಗಳಿಗೆ ಬೇಕಾದ ವಯೋಮಿತಿ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವೇತನ ಶ್ರೇಣಿ, ಹುದ್ದೆಗಳ ವಿವರ ಸೇರಿದಂತೆ ಇತರೆ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿ ತಿಳಿದು ಅಭ್ಯರ್ಥಿಗಳು ಅಪ್ಲೇ ಮಾಡವುದು ಸೂಕ್ತ.

  • ಒಟ್ಟು ಹುದ್ದೆಗಳು- 4
  • ಸಹಾಯಕ ವ್ಯವಸ್ಥಾಪಕರು- (ಭದ್ರತೆ) 3
  • ಭದ್ರತಾ ವ್ಯವಸ್ಥಾಪಕ- 1

ವಿದ್ಯಾರ್ಹತೆ: 

ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ಇರುತ್ತದೆ.

ವಯೋಮಿತಿ: 

45 ರಿಂದ 52 ವರ್ಷಗಳು.

ಸಂಬಳ: 

  • ಸಹಾಯಕ ವ್ಯವಸ್ಥಾಪಕರು (ಭದ್ರತೆ) 56,100 ರೂ.
  • ಭದ್ರತಾ ವ್ಯವಸ್ಥಾಪಕ 69,700 ರೂ.
  • ಅರ್ಜಿಗಳನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: 

SC, ST, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳು 300 ರೂ. ಇದ್ದು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕ್ ಪೇ ಆರ್ಡರ್ ಮೂಲಕ ಹಣ ಪಾವತಿ ಮಾಡಬೇಕಾಗಿದೆ. ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್ಲೋಡ್ ಮಾಡಿ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಇಲಾಖೆಗೆ ಕಳುಹಿಸಿಕೊಡಬೇಕು. ಕಳುಹಿಸಿ ಕೊಡಬೇಕಾದ ವಿಳಾಸ ಇಲ್ಲಿದೆ.

  • ಚೀಫ್ ಜನೆರಲ್ ಮ್ಯಾನೇಜರ್,
  • ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಾಣ ಪ್ರವೈಟ್ ಲಿಮಿಟೆಡ್,
  • ನಂ. 3 & 4, 1 ಸ್ಟೇಜ್, 1ನೇ ಹಂತ, ಬಿಟಿಎಂ ಲೇಔಟ್, ಬನ್ನೇರುಘಟ್ಟ ರೋಡ್,
  • ಪೋಸ್ಟ್ ಬಾಕ್ಸ್ ನಂ. 2924, ಡಿ.ಆರ್ ಕಾಲೇಜ್ ಪಿ.ಓ., ಬೆಂಗಳೂರು-560029.

ಅರ್ಜಿಗಳನ್ನು ಸೆಪ್ಟೆಂಬರ್ 06 ರೊಳಗೆ ಇಲಾಖೆಗೆ ಕಳುಹಿಸಬೇಕು. ಕೆಲವು ಪ್ರದೇಶಗಳಿಗೆ ಸೆಪ್ಟೆಂಬರ್ 13ರವರೆಗೆ ವಿಸ್ತರಿಸಲಾಗಿದೆ.

ಅಪ್ಲಿಕೇಶನ್ ಫಾರ್ಮ್ ಲಿಂಕ್-

 https://www.brbnmpl.co.in/wp-content/uploads/2024/08/security-officers-application-form-12082024.pdf


Post a Comment

Previous Post Next Post
CLOSE ADS
CLOSE ADS
×