Driving License: ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಗುಡ್ ನ್ಯೂಸ್! ಕೇಂದ್ರದಿಂದ ಪ್ರಮುಖ ಘೋಷಣೆ

Driving License: ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಗುಡ್ ನ್ಯೂಸ್! ಕೇಂದ್ರದಿಂದ ಪ್ರಮುಖ ಘೋಷಣೆ

ಇತ್ತೀಚೆಗೆ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಇದಲ್ಲದೇ ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.



ಭಾರತದಲ್ಲಿ ಯಾವುದೇ ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿದೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಇದಲ್ಲದೇ ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಈ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ.

ಡ್ರೈವಿಂಗ್ ಲೈಸೆನ್ಸ್ ಪಡೆಯುವ ಹಳೆಯ ವಿಧಾನವೆಂದರೆ ಹತ್ತಿರದ ಪ್ರಾದೇಶಿಕ ಕಚೇರಿಗೆ ಭೇಟಿ ನೀಡುವುದು. ಅಲ್ಲಿ ಮೊದಲು ಕಲಿಕಾ ಪರವಾನಗಿ (LLR) ನೀಡಲಾಗುತ್ತದೆ. ಇದರ ಮಾನ್ಯತೆ ಅವಧಿ 6 ತಿಂಗಳುಗಳು ಮಾತ್ರ.

ನಂತರ ಚಾಲನಾ ಪರೀಕ್ಷೆಗೆ ಆರ್‌ಟಿಒ ಕಚೇರಿಗೆ ಹೋಗಬೇಕು. ಅಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಅದೇ ದಿನ ಸಂಜೆ ಆ ಕಚೇರಿಯಲ್ಲಿ ಮೂಲ ಚಾಲನಾ ಪರವಾನಗಿ ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳಲ್ಲಿ ಬದಲಾವಣೆ ತಂತ್ತು. ಹೊಸ ನಿಯಮಗಳ ಪ್ರಕಾರ, ಆರ್ಟಿಒ ಕಚೇರಿಗಳಿಗಿಂತ ಖಾಸಗಿ ಏಜೆನ್ಸಿಗಳಿಗೆ ಡ್ರೈವಿಂಗ್ ಪರೀಕ್ಷೆಗಳನ್ನು ನಡೆಸಲು ಮತ್ತು ಡ್ರೈವಿಂಗ್ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ನೀಡಲಾಗಿದೆ.

ಸಂಸ್ಥೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಪರವಾನಗಿ ಲಭ್ಯವಿದೆ. ಇದರಿಂದ ಆರ್‌ಟಿಒ ಕಚೇರಿ ಸುತ್ತಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಇಲಾಖೆಗಳು ಚಾಲನಾ ಸಂಸ್ಥೆಗಳನ್ನು ಆರಂಭಿಸುತ್ತಿವೆ. ಚಾಲನಾ ಪರವಾನಗಿಗಾಗಿ ಅರ್ಜಿದಾರರು ಮಾನ್ಯತೆ ಪಡೆದ ಡ್ರೈವಿಂಗ್ ಸಂಸ್ಥೆಗಳ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.

ಇದೀಗ ಭಾರತೀಯ ಚಾಲನಾ ಪರವಾನಗಿ ಹೊಂದಿರುವವರು ಇತರ ದೇಶಗಳಲ್ಲಿ ಚಾಲನೆ ಮಾಡಲು ಹೆಚ್ಚುವರಿ ಪರವಾನಗಿಯನ್ನು ಪಡೆಯುವ ಅಗತ್ಯವಿಲ್ಲ. ಭಾರತೀಯ ಡ್ರೈವಿಂಗ್ ಲೈಸೆನ್ಸ್ ಮಾನ್ಯತೆ ಪಡೆದ ದೇಶಗಳಲ್ಲಿ ನಮ್ಮದೆ ಪರವಾನಗಿ ಬಳಸಿ ವಾಹನ ಚಾಲನೆ ಮಾಡಬಹುದು.

ಮಾರಿಷಸ್ ನಲ್ಲಿ ನಾಲ್ಕು ವಾರಗಳವರೆಗೆ ನಮ್ಮ ಚಾಲನಾ ಪರವಾನಗಿ ಮಾನ್ಯತೆ ಹೊಂದಿದೆ. ಈ ಡ್ರೈವಿಂಗ್ ಲೈಸೆನ್ಸ್‌ನೊಂದಿಗೆ ನೀವು ಇಲ್ಲಿನ ಬೀಚ್‌ಗಳಲ್ಲಿ ಚಾಲನೆ ಮಾಡಬಹುದು. ಸ್ಪೇನ್‌ನಲ್ಲಿಯೂ ಸಹ ಭಾರತೀಯ ಡ್ರೈವಿಂಗ್ ಲೈಸೆನ್ಸ್ಗಳನ್ನು ಸ್ವೀಕರಿಸಲಾಗುತ್ತದೆ.

ಸ್ವೀಡನ್, ಸಿಂಗಾಪುರ, ಸ್ವಿಟ್ಜರ್ಲೆಂಡ್, ಅಮೇರಿಕಾದಲ್ಲೂ ವಾಹನ ಚಲಾಯಿಸಬಹುದು. USA ನಲ್ಲಿ ಫಾರ್ಮ್ 1-94 ಅನ್ನು ಸಲ್ಲಿಸಬೇಕು. ಈ ಮೂಲಕ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ವಿದೇಶದಲ್ಲಿ ಚಾಲನೆ ಮಾಡಲು ಕೇಂದ್ರವು ಅನುಕೂಲ ಕಲ್ಪಿಸಿದೆ.


Post a Comment

Previous Post Next Post
CLOSE ADS
CLOSE ADS
×