Railway Jobs: ರೈಲ್ವೆ ಇಲಾಖೆಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ- ಬಂಪರ್ ಸ್ಯಾಲರಿ

Railway Jobs: ರೈಲ್ವೆ ಇಲಾಖೆಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ- ಬಂಪರ್ ಸ್ಯಾಲರಿ

ಜೂನ್ 27, 2024 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.



KRCL Recruitment 2024: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(Konkan Railway Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 11 ಪ್ರಾಜೆಕ್ಟ್ ಎಂಜಿನಿಯರ್, ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ. ರೈಲ್ವೆ ಇಲಾಖೆಯಲ್ಲಿ (Railway Department) ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಜೂನ್ 27, 2024 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:

  • ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-1
  • ಪ್ರಾಜೆಕ್ಟ್ ಎಂಜಿನಿಯರ್-7
  • ಪ್ರಾಜೆಕ್ಟ್ ಎಂಜಿನಿಯರ್(ಟೆಂಡರ್ಸ್ & ಪ್ರೊಪೋಸಲ್)-1
  • CAD/ಡ್ರಾಫ್ಟ್ಸ್ಮ್ಯಾನ್-1
  • ಅಸಿಸ್ಟೆಂಟ್ ಎಂಜಿನಿಯರ್-1

ವಿದ್ಯಾರ್ಹತೆ:

  • ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
  • ಪ್ರಾಜೆಕ್ಟ್ ಎಂಜಿನಿಯರ್- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
  • ಪ್ರಾಜೆಕ್ಟ್ ಎಂಜಿನಿಯರ್(ಟೆಂಡರ್ಸ್ & ಪ್ರೊಪೋಸಲ್)-ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
  • CAD/ಡ್ರಾಫ್ಟ್ಸ್ಮ್ಯಾನ್- ಐಟಿಐ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ
  • ಅಸಿಸ್ಟೆಂಟ್ ಎಂಜಿನಿಯರ್-ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ

ವಯೋಮಿತಿ:

  • ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- 35 ವರ್ಷ
  • ಪ್ರಾಜೆಕ್ಟ್ ಎಂಜಿನಿಯರ್- 40 ವರ್ಷ
  • ಪ್ರಾಜೆಕ್ಟ್ ಎಂಜಿನಿಯರ್(ಟೆಂಡರ್ಸ್ & ಪ್ರೊಪೋಸಲ್)- 40 ವರ್ಷ
  • CAD/ಡ್ರಾಫ್ಟ್ಸ್ಮ್ಯಾನ್-45 ವರ್ಷ
  • ಅಸಿಸ್ಟೆಂಟ್ ಎಂಜಿನಿಯರ್- 45 ವರ್ಷ

ವೇತನ:

  • ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಮಾಸಿಕ ₹ 44,900
  • ಪ್ರಾಜೆಕ್ಟ್ ಎಂಜಿನಿಯರ್-ಮಾಸಿಕ ₹ 44,900
  • ಪ್ರಾಜೆಕ್ಟ್ ಎಂಜಿನಿಯರ್(ಟೆಂಡರ್ಸ್ & ಪ್ರೊಪೋಸಲ್)-ಮಾಸಿಕ ₹ 44,900
  • CAD/ಡ್ರಾಫ್ಟ್ಸ್ಮ್ಯಾನ್-ಮಾಸಿಕ ₹ 35,400
  • ಅಸಿಸ್ಟೆಂಟ್ ಎಂಜಿನಿಯರ್-ಮಾಸಿಕ ₹ 56,100

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:

  • ಗುಂಪು ಚರ್ಚೆ
  • ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

ಎಕ್ಸಿಕ್ಯೂಟಿವ್ ಕ್ಲಬ್

ಕೊಂಕಣ ರೈಲ್ ವಿಹಾರ್

ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್

ಸೀವುಡ್ಸ್ ರೈಲು ನಿಲ್ದಾಣದ ಹತ್ತಿರ

ಸೆಕ್ಟರ್-40

ಸೀವುಡ್ಸ್ (ಪಶ್ಚಿಮ)

ನವಿ ಮುಂಬೈ

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 31/05/2024

ಸಂದರ್ಶನ ನಡೆಯುವ ದಿನಗಳು ಈ ಕೆಳಕಂಡಂತಿವೆ.

  • ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಜೂನ್ 25, 2024
  • ಪ್ರಾಜೆಕ್ಟ್ ಎಂಜಿನಿಯರ್- ಜೂನ್ 27, 2024
  • ಪ್ರಾಜೆಕ್ಟ್ ಎಂಜಿನಿಯರ್(ಟೆಂಡರ್ಸ್ & ಪ್ರೊಪೋಸಲ್)-ಜೂನ್ 10, 2024
  • CAD/ಡ್ರಾಫ್ಟ್ಸ್ಮ್ಯಾನ್- ಜೂನ್ 15, 2024
  • ಅಸಿಸ್ಟೆಂಟ್ ಎಂಜಿನಿಯರ್- ಜೂನ್ 24, 2024


Post a Comment

Previous Post Next Post
CLOSE ADS
CLOSE ADS
×