ದ್ವಿತೀಯ ಪಿಯುಸಿ ಪಾಸಾದವರಿಗೆ ವಾಯುಪಡೆಯಲ್ಲಿವೆ ಏರ್‌ಮೆನ್ ಉದ್ಯೋಗಗಳು: ಅರ್ಜಿ ಆಹ್ವಾನ

ದ್ವಿತೀಯ ಪಿಯುಸಿ ಪಾಸಾದವರಿಗೆ ವಾಯುಪಡೆಯಲ್ಲಿವೆ ಏರ್‌ಮೆನ್ ಉದ್ಯೋಗಗಳು: ಅರ್ಜಿ ಆಹ್ವಾನ

ಜುಲೈ 03 ರಿಂದ ಜುಲೈ 12, 2024 ರವರೆಗೆ ನಡೆಯಲಿರುವ ವಾಯುಪಡೆಯ ಏರ್‌ಮೆನ್‌ ನೇಮಕಾತಿ ರ್ಯಾಲಿಗೆ ಅರ್ಹ ಮತ್ತು ಆಸಕ್ತ ಭಾರತೀಯ ಪ್ರಜೆಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಪಾಸ್ ಮಾಡಿರಬೇಕು.



ನೀವು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್‌ ಮಾಡಿದ್ದೀರಾ? ಹಾಗಿದ್ರೆ ನಿಮಗಿದೋ ಭರ್ಜರಿ ಗುಡ್‌ ನ್ಯೂಸ್‌ ಇಲ್ಲಿದೆ. ಭಾರತೀಯ ವಾಯುಪಡೆಯು ಗ್ರೂಪ್‌ Y ಏರ್‌ಮೆನ್‌ ಹುದ್ದೆಗಳ ಭರ್ತಿಗೆ ಅಧಿಸೂಚಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಅರ್ಹರು. ಈಗ ಅರ್ಜಿ ಸಲ್ಲಿಸಿದವರಿಗೆ ಜುಲೈ 03 ರಿಂದ ಜುಲೈ 12, 2024 ರವರೆಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಆಸಕ್ತರು ಹುದ್ದೆಗಳ ಕುರಿತು ಇನ್ನಷ್ಟು ಮಾಹಿತಿಗಳನ್ನು ಕೆಳಗಿನಂತೆ ಓದಿ ತಿಳಿದು ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ : 

ಭಾರತೀಯ ವಾಯುಪಡೆ

ಹುದ್ದೆ ಹೆಸರು : 

ಏರ್‌ಮನ್ ಗ್ರೂಪ್‌ ವೈ (ನಾನ್‌ ಟೆಕ್ನಿಕಲ್) ಮೆಡಿಕಲ್ ಅಸಿಸ್ಟಂಟ್‌ ಟ್ರೇಡ್‌ ಹುದ್ದೆಗಳು.

ಹುದ್ದೆಗಳ ಸಂಖ್ಯೆ : 

ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಆಯ್ಕೆಯ ವಿಧಾನಗಳು : 

ಫಿಸಿಕಲ್ ಫಿಟ್‌ನೆಸ್, ಲಿಖಿತ ಪರೀಕ್ಷೆ, ಅಡಾಪ್ಟೆಬಿಲಿಟಿ ಟೆಸ್ಟ್‌, ವೈದ್ಯಕೀಯ ಪರೀಕ್ಷೆ.

ಅರ್ಜಿ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು

  • ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 22-05-2024
  • ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 05-06-2024 ರ ರಾತ್ರಿ 23-00 ಗಂಟೆವರೆಗೆ.

ಅಪ್ಲಿಕೇಶನ್‌ ಸಲ್ಲಿಸುವುದು ಹೇಗೆ?

  • ವಾಯುಪಡೆಯ ಅಧಿಕೃತ ವೆಬ್‌ಸೈಟ್‌ ವಿಳಾಸ http://www.airmenselection.cdac.in ಗೆ ಭೇಟಿ ನೀಡಿ.
  • ಮೇ 22 ರಂದು 'Airmen' ಹುದ್ದೆಗಳ ಅರ್ಜಿಗೆ ಆನ್‌ಲೈನ್‌ ಲಿಂಕ್‌ ಬಿಡುಗಡೆ ಆಗಿರುತ್ತದೆ.
  • ಸದರಿ ಲಿಂಕ್‌ ಕ್ಲಿಕ್ ಮಾಡಿ. ಮೊದಲಿಗೆ ರಿಜಿಸ್ಟ್ರೇಷನ್‌ ಪಡೆಯಬೇಕು.
  • ನಂತರ ಸವಿವರ ಮಾಹಿತಿ ನೀಡಿ, ಕೇಳಲಾದ ದಾಖಲೆಗಳ ಸಾಫ್ಟ್‌ ಕಾಪಿ ಅಪ್‌ಲೋಡ್‌ ಮಾಡಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

  • ಹುದ್ದೆಯ ಹೆಸರು:- ಗ್ರೂಪ್ ವೈ ಏರ್‌ಮೆನ್‌ ಹುದ್ದೆಗಳು
  • ವಿವರ:- ಭಾರತೀಯ ವಾಯುಪಡೆ ಅಧಿಸೂಚನೆ.
  • ಪ್ರಕಟಣೆ ದಿನಾಂಕ:- 2024-05-08
  • ಕೊನೆ ದಿನಾಂಕ:- 2024-06-05
  • ಉದ್ಯೋಗ ವಿಧ:- ಪೂರ್ಣಾವಧಿ
  • ಉದ್ಯೋಗ ಕ್ಷೇತ್ರ:- ರಕ್ಷಣಾ ಇಲಾಖೆ ಉದ್ಯೋಗಗಳು

Post a Comment

Previous Post Next Post
CLOSE ADS
CLOSE ADS
×