ಭಾರತೀಯ ರೈಲ್ವೆಯುವ ಪ್ರಯಾಣಕರ ಅನುಕೂಲಕ್ಕೆ ತಕ್ಕಂತೆ ರೈಲುಗಳನ್ನು ಗಳನ್ನು ಒದಗಿಸುವುದಲ್ಲದೆ, ಉದ್ಯೋಗವಕಾಶಗಳನ್ನು ಸಹ ಕಲ್ಪಿಸುತ್ತದೆ. ಹಾಗೆಯೇ ಇದೀಗ ಇದರ ವಿಭಾಗವಾದ ದಕ್ಷಿಣ ರೈಲ್ವೆ ವಲಯವು ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗ ಪ್ರಕಟಣೆ ಹೊರಡಿಸಿದೆ. ಹಾಗಾದರೆ ಆ ಹುದ್ದೆಗಳು ಯಾವುವು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಆಯ್ಕೆಯಾದವರಿಗೆ ಮಾಸಿಕ ವೇತನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದಕ್ಷಿಣ ರೈಲ್ವೆ ವಲಯದ, ರೈಲ್ವೆ ನೇಮಕಾತಿ ಕೋಶವು ವಲಯದ ಎಲ್ಲ ವಿಭಾಗಳಲ್ಲಿ ಖಾಲಿ ಇರುವ ತರಬೇತುದಾರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 2,860 ಅಪ್ರೆಂಟಿಸ್ ಹುದ್ದೆಗಳಿವೆ. ಆಸಕ್ತರು 2024ರ ಫೆಬ್ರವರಿ 28 ಸಂಜೆ 05 ಗಂಟೆವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.
ಫ್ರೆಶರ್ ಕೆಟಗರಿ ಅಡಿಯಲ್ಲಿ ಕೊಯಂಬತ್ತೂರು, ಪೆರಂಬೂರು ಡಿವಿಷನ್‌ಗಳ ವರ್ಕ್‌ಶಾಪ್ ಹಾಗೂ ಹಾಸ್ಪಿಟಲ್‌ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾಜಿ- ಐಟಿಐ ಅಭ್ಯರ್ಥಿಗಳ ಕೆಟಗರಿ ಅಡಿಯಲ್ಲಿ ಸೇಲಂ, ಪಲಕ್ಕಾಡ್, ಪರೆಂಬೂರು, ಅರಕ್ಕೋನಂ, ಚೆನ್ನೈ ಡಿವಿಷನ್, ಅವಡಿ, ರೊಯಪುರಂ, ಪೊನ್ಮಲೈ, ಮಧುರೈ, ತಿರುಚನಾಪಲ್ಲಿ, ತಂಬರಂ, ಸೇರಿದಂತೆ ವಿವಿಧ ವರ್ಕ್‌ಶಾಪ್ ಹಾಗೂ ಡಿವಿಷನ್‌ಗಳಲ್ಲಿ ನೇಮಕ ಮಾಡಲಾಗುತ್ತದೆ. ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಶಿಯನ್, ಕಾರ್ಪೆಂಟರ್,. ಪೈಂಟರ್, ಮೆಕ್ಯಾನಿಸ್ಟ್, ಟರ್ನರ್, ಡೀಸೆಲ್ ಮೆಕ್ಯಾನಿಕ್, ಟಿಮ್ಮರ್ ಮುಂತಾದ ಹುದ್ದೆಗಳಿವೆ.
ಅರ್ಜಿ ಸಲ್ಲಿಸಲು ಬಯಸುವವರು ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10, 12ನೇ ತರಗತಿ/ತತ್ಸಮಾನ ವಿದ್ಯಾರ್ಹತೆ ಜೊತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿರಬೇಕಾಗುತ್ತದೆ. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು, ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದವರೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಕಾರ್ಪೆಂಟರ್, ಮಷಿನಿಸ್ಟ್, ಪೇಂಟರ್, ಫಿಟ್ಟರ್, ವೆಲ್ಡರ್, ರೇಡಿಯಾಲಜಿ, ಎಂಎಂವಿ, ಇಲೆಕ್ಟ್ರೀಷಿಯನ್, ಟರ್ನರ್, ಅಡ್ವಾನ್ಸ್‌ಡ್ ವೆಲ್ಡರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಪಾಸ್ಸಾ, ವೈಯರ್‌ಮನ್, ಕಾರ್ಪೆಂಟರ್ ಟ್ರೇಡ್‌ಗಳಲ್ಲಿ ಐಟಿಐ ವ್ಯಾಸಂಗ ಮಾಡಿರಬೇಕು.
ವಯೋಮಿತಿ ವಿವರ:
ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಮಾಜಿ ಯೋಧರು ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆಗೆ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ /ಮಾಜಿ ಯೋಧರು / ವಿಶೇಷ ಚೇತನರು / ಮಹಿಳೆಯರು / ತೃತೀಯ ಲಿಂಗಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳನ್ನು ಅವರು ಐಟಿಐ ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. 1ರಿಂದ 2 ವರ್ಷಗಳವರೆಗೆ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
* ವೆಬ್‌ಸೈಟ್ ವಿಳಾಸ: https://sr.indianrailways.gov.in/ ಆಗಿದೆ.
* Register ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ.
* ರಿಜಿಸ್ಟ್ರೇಷನ್ ನಂಬರ್, ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
* ಸರಿಯಾದ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
* ಅಗತ್ಯವಿದ್ದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* ಅಗತ್ಯವಿದ್ದವರು ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದಾಗಿದೆ.
* ಅಪ್ಲಿಕೇಷನ್ ಫಾರಂ ಸೆಂಡ್ ಮಾಡಿ.
* ಮಾಹಿತಿಗಾಗಿ ಅಪ್ಲಿಕೇಷನ್ ಫಾರಂನ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
.jpeg)