Rashmika Mandanna: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಬ್ರೇಕಪ್ ಕಾರಣ! ಶ್ರೀವಲ್ಲಿ ತಾಯಿಯ ನೋವಿನ ಮಾತು

Rashmika Mandanna: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಬ್ರೇಕಪ್ ಕಾರಣ! ಶ್ರೀವಲ್ಲಿ ತಾಯಿಯ ನೋವಿನ ಮಾತು

 ರಕ್ಷಿತಾ ಶೆಟ್ಟಿ ಜೊತೆ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದುಬೀಳಲು ಕಾರಣ ಏನು ಅನ್ನೋದು ಇನ್ನೂ ಬಹಿರಂಗಗೊಂಡಿಲ್ಲ. ಇದೀಗ ರಶ್ಮಿಕಾ ತಾಯಿ ಇಬ್ಬರ ಬ್ರೇಕಪ್​ಗೆ ಕಾರಣ ತಿಳಿಸಿದ್ದಾರೆ.



ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ (Rashmika Mandanna) ಕೇವಲ ಸಿನಿಮಾ ವಿಚಾರಗಳಿಗೆ ಮಾತ್ರವಲ್ಲ ವೈಯಕ್ತಿಕ ವಿಚಾರಗಳಲ್ಲೂ ಸುದ್ದಿಯಾಗ್ತಾರೆ. ರಶ್ಮಿಕಾ ಮಂದಣ್ಣ ಲವ್​, ಡೇಟಿಂಗ್,​ ಬ್ರೇಕಪ್ ವಿಚಾರದಲ್ಲಿ ಆಗಾಗ ಸದ್ದು ಮಾಡ್ತಾನೆ ಇರ್ತಾರೆ. ಸ್ಯಾಂಡಲ್​ವುಡ್​ ನಟ ರಕ್ಷಿತಾ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದುಬಿದ್ದ ವಿಚಾರ ಭಾರೀ ಚರ್ಚೆ ಆಗಿತ್ತು. ಬ್ರೇಕಪ್ (Breakup)​ ಬಳಿಕ ಇಬ್ಬರು ಮುಖಾಮುಖಿಯಾಗಿಲ್ಲ.

 ಅಷ್ಟೇ ಅಲ್ಲ ನಿಶ್ಚಿತಾರ್ಥ (Engagement) ಕ್ಯಾನ್ಸಲ್ ಆಗಲು ಕಾರಣ ಕೂಡ ತಿಳಿಸಿಲ್ಲ. ಈಗಲೂ ಅಭಿಮಾನಿಗಳು ಇಬ್ಬರ ಬ್ರೇಕಪ್​ಗೆ ಕಾರಣ ಹುಡುಕುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ತಾಯಿ (Rashmika Mandanna Mother) ರಶ್ಮಿಕಾ -ರಕ್ಷಿತ್ ನಿಶ್ಚಿತಾರ್ಥ ಮುರಿದುಬಿದ್ದ ಬಗ್ಗೆ ಮಾತಾಡಿದ್ದು, ಬ್ರೇಕಪ್​ಗೆ ಕಾರಣ ತಿಳಿಸಿದ್ದಾರೆ. 

2017ರಲ್ಲಿ ರಶ್ಮಿಕಾ- ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ



ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ, ಮೊದಲ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಅಭಿನಯಿಸಿ ಸೂಪರ್ ಹಿಟ್​ ಪಡೆದರು. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಮನೆಯವರ ಒಪ್ಪಿಗೆ ಮೇರೆಗೆ 2017ರಲ್ಲಿ ರಶ್ಮಿಕಾ- ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಕೂಡ ಮಾಡಿಕೊಂಡ್ರು. ಒಂದು ವರ್ಷಗಳ ಕಾಲ ಡೇಟಿಂಗ್ ಕೂಡ ಮಾಡಿದ್ದಾರೆ.

2018 ರಲ್ಲಿ ಮುರಿದು ಬಿತ್ತು ನಿಶ್ಚಿತಾರ್ಥ

ಕನ್ನಡದಲ್ಲಿ ಕೆಲ ಸಿನಿಮಾ ಮಾಡಿದ ಬಳಿಕ ರಶ್ಮಿಕಾ ಮಂದಣ್ಣ ಟಾಲಿವುಡ್​ಗೆ ಹಾರಿದ್ರು. ಬಳಿಕ ಕಾರಣಾಂತರದಿಂದ ರಕ್ಷಿತ್​ ಹಾಗೂ ರಶ್ಮಿಕಾ ಬ್ರೇಕಪ್ ವಿಚಾರವನ್ನು ಹಂಚಿಕೊಂಡಿದ್ರು. ಸೆಪ್ಟೆಂಬರ್ 2018 ರಲ್ಲಿ ಇಬ್ಬರ ಬ್ರೇಕಪ್ ವಿಚಾರ ಹೊರಬಂದಿತು. ಇಬ್ಬರೂ ಯಾವ ಕಾರಣಕ್ಕೆ ಬ್ರೇಕಪ್ ಮಾಡಿಕೊಡ್ವಿ ಅನ್ನೋದನ್ನು ಈವರೆಗೂ ಎಲ್ಲೂ ಬಾಯ್ಬಿಟ್ಟಿಲ್ಲ. ಅಭಿಮಾನಿಗಳು ಕೂಡ ಇದಕ್ಕೆ ಕಾರಣ ಹುಡುಕುತ್ತಲೇ ಇದ್ದಾರೆ.

ಹೊಂದಾಣಿಕೆ ಸಮಸ್ಯೆಯಿಂದ ದೂರ ಆಗಿದ್ದಾರೆ

ಹೊಂದಾಣಿಕೆ ಸಮಸ್ಯೆಯಿಂದ ಅವರು ಬೇರ್ಪಟ್ಟಿದ್ದಾರೆ ಎಂದು ನಟಿ ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥದ ಬಳಿಕ ಆಘಾತದಿಂದ ನಮ್ಮ ಕುಟುಂಬ ತತ್ತರಿಸಿ ಹೋಗಿತ್ತು ಎಂದು ಸುಮನ್ ಹೇಳಿದ್ದಾರೆ. 2018 ರಲ್ಲಿ ಇಂಡಿಯಾ ಟುಡೆ ಮತ್ತು ಡಿಎನ್‌ಎ ಇಂಡಿಯಾ ನೀಡಿದ ಸಂದರ್ಶನದಲ್ಲಿ ಸುಮನ್ ನಿಶ್ಚಿತಾರ್ಥ ಮುರಿದುಬಿದ್ದ ಕಾರಣ ತಿಳಿಸಿದ್ದಾರೆ.



ನಮ್ಮ ಕುಟುಂಬ ನೋವಿನಲ್ಲಿದೆ- ಸುಮನ್​

ನಿಶ್ಚಿತಾರ್ಥ ಮುರಿದುಬಿದ್ದ ನೋವಿನಲ್ಲಿ ನಮ್ಮ ಕುಟುಂಬವಿದೆ. ಈ ಶಾಕ್​ನಿಂದ ನಾವೆಲ್ಲರೂ ಚೇತರಿಸಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಜೀವನ ಇದೆ. ಯಾರೂ ಇನ್ನೊಬ್ಬರನ್ನು ನೋಯಿಸಲು ಇಷ್ಟಪಡುವುದಿಲ್ಲ ಮತ್ತು ಎಲ್ಲರೂ ಸಂತೋಷವಾಗಿರಬೇಕು ಎಂದು ರಶ್ಮಿಕಾ ಮಂದಣ್ಣ ತಾಯಿ ಸುಮನ್ ಹೇಳಿದ್ದಾರೆ.

2018 ರಲ್ಲಿ ಡೆಕ್ಕನ್ ಕ್ರಾನಿಕಲ್​ಗೆ ನೀಡಿದ ಸಂದರ್ಶನದಲ್ಲಿ ನಟಿ ರಶ್ಮಿಕಾ ಕೂಡ ರಕ್ಷಿತ್ ಜೊತೆಗಿನ ಬ್ರೇಕಪ್ ಬಗ್ಗೆ ಮಾತಾಡಿದ್ರು. ನಾನು ನನ್ನ ಪೋಷಕರು, ಕುಟುಂಬದ ಹಿರಿಯರು ಮತ್ತು ಸ್ನೇಹಿತರ ಜೊತೆ ಸಮಾಲೋಚಿಸಿದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಇದು ಕಠಿಣ ನಿರ್ಧಾರವಾಗಿತ್ತು. ಆದ್ರೆ ಅನಿವಾರ್ಯವಾಗಿತ್ತು ಎಂದು ರಶ್ಮಿಕಾ ಹೇಳಿದ್ದಾರೆ.

ಇದೀಗ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಬಾಲಿವುಡ್​ನಲ್ಲಿ ಹಿಟ್ ಸಿನಿಮಾ ನೀಡಿದ್ದು, ನಟಿಗೆ ಡಿಮ್ಯಾಂಡ್ ಹೆಚ್ಚಿದೆ. ಜೊತೆಗೆ ವಿಜಯ್​ ದೇವರಕೊಂಡ ಜೊತೆ ಡೇಟಿಂಗ್​ ಮಾಡ್ತಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ

Post a Comment

Previous Post Next Post
CLOSE ADS
CLOSE ADS
×