Free Movie Tickets: ಸಿನಿಮಾ ಹಿಟ್​ ಆಗಲಿ ಅಂತ 2.5 ಲಕ್ಷ ಉಚಿತ ಟಿಕೆಟ್​ ಹಂಚಿ ಕೈ ಸುಟ್ಟುಕೊಂಡ ನಿರ್ಮಾಪಕ; ಯಾವ ಚಿತ್ರದ ಪರಿಸ್ಥಿತಿ ಇದು?

Free Movie Tickets: ಸಿನಿಮಾ ಹಿಟ್​ ಆಗಲಿ ಅಂತ 2.5 ಲಕ್ಷ ಉಚಿತ ಟಿಕೆಟ್​ ಹಂಚಿ ಕೈ ಸುಟ್ಟುಕೊಂಡ ನಿರ್ಮಾಪಕ; ಯಾವ ಚಿತ್ರದ ಪರಿಸ್ಥಿತಿ ಇದು?

 

Bollywood News: ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ಕಾರಣಕ್ಕೆ ‘ಒಂದು ಟಿಕೆಟ್​ ಕೊಂಡರೆ ಮತ್ತೊಂದು ಉಚಿತ’ ಎಂಬ ಆಫರ್​ ನೀಡಲಾಯಿತು. ಇದರಿಂದ ನಿರ್ಮಾಪಕರಿಗೆ 5.50 ಕೋಟಿ ರೂಪಾಯಿ ಹೊರೆಯಾಗಿದೆ ಎಂದು ಹೇಳಲಾಗುತ್ತಿದೆ.


ಚಿತ್ರಮಂದಿರಕ್ಕೆ ಜನರನ್ನು ಕರೆತರುವುದು ಅಷ್ಟು ಸುಲಭದ ಕೆಲಸ ಅಲ್ಲ. ಒಳ್ಳೆಯ ಸಿನಿಮಾ ಮಾಡಿದರೆ ಸಾಲದು. ಉತ್ತಮವಾಗಿ ಪ್ರಚಾರ ಕೂಡ ಮಾಡಬೇಕು. ಹಾಗಿದ್ದರೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ನಂಬಿಕೆ ಇಲ್ಲ. ಬಾಕ್ಸ್​ ಆಫೀಸ್​ನಲ್ಲಿ (​Box Office) ಗೆಲ್ಲಬೇಕು ಎಂದು ನಿರ್ಮಾಪಕರು ಹಲವಾರು ಸರ್ಕಸ್​ ಮಾಡುತ್ತಾರೆ. ಮಾರ್ಕೆಟಿಂಗ್​ ಸಲುವಾಗಿ ಬಗೆಬಗೆಯ ಗಿಮಿಕ್​ ಕೂಡ ಮಾಡಲಾಗುತ್ತದೆ. ಉಚಿತವಾಗಿ ಟಿಕೆಟ್​ (Free Tickets) ಕೊಡುವುದು ಕೂಡ ಒಂದು ಗಿಮಿಕ್​. ಸದ್ಯ ಬಾಲಿವುಡ್​ನ ಚಿತ್ರವೊಂದು ಇಂಥ ಪ್ರಯತ್ನ ಮಾಡಿಯೂ ಕೂಡ ಪ್ರೇಕ್ಷಕರನ್ನು ಸೆಳೆಯಲು ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಆಗಿಲ್ಲ. ಯಾವುದು ಆ ಸಿನಿಮಾ? ‘ಜರಾ ಹಟ್ಕೆ ಜರಾ ಬಚ್ಕೆ’! ಹೌದು, ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾಗೆ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಆಗುತ್ತಿಲ್ಲ. ನಾಲ್ಕು ದಿನಕ್ಕೆ ಈ ಚಿತ್ರ (Zara Hatke Zara Bachke) 26.73 ಕೋಟಿ ರೂಪಾಯಿ ಗಳಿಸಿದೆ. ಆದರೂ ಕೂಡ ನಿರ್ಮಾಪಕರು ಕೈ ಸುಟ್ಟುಕೊಂಡಂತೆ ಆಗಿದೆ.
ಸಾರಾ ಅಲಿ ಖಾನ್​ ಮತ್ತು ವಿಕ್ಕಿ ಕೌಶಲ್​ ಅವರು ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ದಿನೇಶ್​ ವಿಜನ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ಕಾರಣಕ್ಕೆ ‘ಒಂದು ಟಿಕೆಟ್​ ಕೊಂಡರೆ ಮತ್ತೊಂದು ಉಚಿತ’ ಎಂಬ ಆಫರ್​ ನೀಡಲಾಯಿತು. ವೀಕೆಂಡ್​ನಲ್ಲಿ ಈ ಆಫರ್​ ಇದ್ದಿದ್ದರಿಂದ ಒಂದಷ್ಟು ಜನರು ಚಿತ್ರಮಂದಿರಕ್ಕೆ ಬಂದರು ಎಂಬುದು ನಿಜ. ಈ ಆಫರ್​ನಲ್ಲಿ 2.5 ಲಕ್ಷ ಟಿಕೆಟ್​ಗಳನ್ನು ಉಚಿತವಾಗಿ ನೀಡಲಾಗಿದೆ. ಇದರಿಂದ ನಿರ್ಮಾಪಕರಿಗೆ 5.50 ಕೋಟಿ ರೂಪಾಯಿ ಹೊರೆಯಾಗಿದೆ ಎಂದು ಹೇಳಲಾಗುತ್ತಿದೆ


Post a Comment

Previous Post Next Post
CLOSE ADS
CLOSE ADS
×