ಐಟಿಬಿಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಧಿಸೂಚನೆ: 10th ಪಾಸ್ ಅರ್ಹತೆ

ಐಟಿಬಿಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಧಿಸೂಚನೆ: 10th ಪಾಸ್ ಅರ್ಹತೆ

 Indo Tibetan Border Police Recruitment: ಐಟಿಬಿಪಿ'ಯಲ್ಲಿ ಅಗತ್ಯ ಇರುವ ಕಾನ್ಸ್‌ಟೇಬಲ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗಧಿತ ಕೊನೆ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಈ ಹುದ್ದೆಗಳು ಗ್ರೂಪ್ ಸಿ ನಾನ್‌ ಗೆಜೆಟೆಡ್ ಹುದ್ದೆಗಳಾಗಿವೆ.



ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ನಲ್ಲಿ ಅಗತ್ಯ ಕಾನ್ಸ್‌ಟೇಬಲ್‌ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಇದೀಗ ಶಾರ್ಟ್‌ ನೋಟಿಸ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿಯನ್ನು ಜೂನ್ 26 ರಿಂದ ಜುಲೈ 27 ರವರೆಗೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಗ್ರೂಪ್‌ ಸಿ ನಾನ್‌-ಗೆಜೆಟೆಡ್ (ನಾನ್‌ ಮಿನಿಸ್ಟ್ರೇರಿಯಲ್) ಹುದ್ದೆಗಳು ಇವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಿ.

ಹುದ್ದೆ ಹೆಸರು :

 ಕಾನ್ಸ್‌ಟೇಬಲ್ (ಡ್ರೈವರ್)

ಹುದ್ದೆಗಳ ಸಂಖ್ಯೆ :

 458 (UR-195, SC-74, ST-37, OBC-110, EWS-42)

ವಿದ್ಯಾರ್ಹತೆ :

 ಮೆಟ್ರಿಕ್ಯೂಲೇಷನ್‌ ಅಥವಾ 10ನೇ ತರಗತಿ ಪಾಸ್ ಮಾಡಿರಬೇಕು.

ವಯಸ್ಸಿನ ಅರ್ಹತೆ : 

ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.

ಆಯ್ಕೆ ಪ್ರಕ್ರಿಯೆಗಳು : ದೈಹಿಕ ಸಾಮರ್ಥ್ಯ ಪರೀಕ್ಷೆ / ಸಹಿಷ್ಣುತಾ ಪರೀಕ್ಷೆ / ಲಿಖಿತ ಪರೀಕ್ಷೆ / ಮೂಲ ದಾಖಲೆಗಳ ಪರಿಶೀಲನೆ / ಪ್ರಾಯೋಗಿಕ ಪರೀಕ್ಷೆ / ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ರಿಜಿಸ್ಟ್ರೇಷನ್‌ ಸಲ್ಲಿಸಲು ಆರಂಭಿಕ ದಿನಾಂಕ : 27-06-2023

ಆನ್‌ಲೈನ್‌ ರಿಜಿಸ್ಟ್ರೇಷನ್‌ ಸಲ್ಲಿಸಲು ಕೊನೆ ದಿನಾಂಕ : 26-07-2023 ರ 11:59 ಗಂಟೆವರೆಗೆ.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಹಾಗೂ ನೇಮಕಾತಿ ಡೀಟೇಲ್ಡ್‌ ಅಧಿಸೂಚನೆಯನ್ನು ಓದಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.

ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಅಧಿಕೃತ ವೆಬ್‌ಸೈಟ್‌ ವಿಳಾಸ: www.recruitment.itbpolice.nic.in


ಅರ್ಜಿ ಶುಲ್ಕ ರೂ.100.

ಐಟಿಬಿಪಿ ಕಾನ್ಸ್‌ಟೇಬಲ್‌ ಲಿಖಿತ ಪರೀಕ್ಷೆಯ ಪಠ್ಯಕ್ರಮ ಎಸ್ಎಸ್‌ಎಲ್‌ಸಿ ಹಂತದ ಪಠ್ಯಕ್ರಮದ ಜತೆಗೆ ಪ್ರಚಲಿತ ವಿದ್ಯಮಾನಗಳನ್ನು ಹೊಂದಿರುತ್ತದೆ.

ವೇತನ ಶ್ರೇಣಿ ರೂ.21,700-69100 (7ನೇ ವೇತನ ಆಯೋಗದ ಪ್ರಕಾರ ಲೆವೆಲ್‌ 3 ಪೇ ಮೆಟ್ರಿಕ್ಸ್‌ ಸಂಭಾವನೆ)

ಉದ್ಯೋಗ ವಿವರ

ಹುದ್ದೆಯ ಹೆಸರು ಕಾನ್ಸ್‌ಟೇಬಲ್‌ ನೇಮಕ

ವಿವರ ಇಂಡೊ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ ಅಧಿಸೂಚನೆ.

ಪ್ರಕಟಣೆ ದಿನಾಂಕ 2023-06-13

ಕೊನೆ ದಿನಾಂಕ 2023-07-26

ಉದ್ಯೋಗ ವಿಧ Full Time

ಉದ್ಯೋಗ ಕ್ಷೇತ್ರ ಸರ್ಕಾರಿ ಉದ್ಯೋಗ

ವೇತನ ವಿವರ INR 21700 to 69100 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ --

ವಿದ್ಯಾರ್ಹತೆ 10th Pass

ಕಾರ್ಯಾನುಭವ 0 Year

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು ಇಂಡೊ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌

ವೆಬ್‌ಸೈಟ್‌ ವಿಳಾಸ https://www.itbpolice.nic.in

ಉದ್ಯೋಗ ಸ್ಥಳ

ವಿಳಾಸ ನವದೆಹಲಿ

ಸ್ಥಳ ನವದೆಹಲಿ

ಪ್ರದೇಶ ನವದೆಹಲಿ

ಅಂಚೆ ಸಂಖ್ಯೆ 110001

ದೇಶ IND


Post a Comment

Previous Post Next Post
CLOSE ADS
CLOSE ADS
×