Hero Splendor: ಇನ್ಮೇಲೆ Hero Splendor Bike ನೀಡಲಿದೆ 240Km ಮೈಲೇಜ್! ಇಲ್ಲಿದೆ ಸಿಹಿಸುದ್ದಿ

Hero Splendor: ಇನ್ಮೇಲೆ Hero Splendor Bike ನೀಡಲಿದೆ 240Km ಮೈಲೇಜ್! ಇಲ್ಲಿದೆ ಸಿಹಿಸುದ್ದಿ

 ಈಗಾಗಲೇ ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಭಾರತದಲ್ಲಿ ಪೆಟ್ರೋಲ್ ಬೆಲೆ ದಿನೇ ದಿನೇ ಯಾವ ರೀತಿಯಲ್ಲಿ ಏರಿಕೆ ಕಾಣುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ಕೂಡ ಈ ಸಮಸ್ಯೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇದೆ.



 ಇದೇ ಕಾರಣಕ್ಕಾಗಿ ಪ್ರತಿಯೊಂದು ದ್ವಿಚಕ್ರ ವಾಹನ ಸಂಸ್ಥೆಗಳು ಕೂಡ ಎಲೆಕ್ಟ್ರಿಕಲ್ ಬೈಕು ಅಥವಾ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ತರುವಂತಹ ಪ್ರಯತ್ನ ಮಾಡುತ್ತಿದ್ದು ಈಗ ಅದಕ್ಕೆ Hero Motocorp ಸಂಸ್ಥೆ ಕೂಡ ಸೇರಿದ್ದು ತನ ಹೀರೋ ಸ್ಪ್ಲೆಂಡರ್ ಬೈಕಿನ ಎಲೆಕ್ಟ್ರಿಕಲ್ ರೂಪಾಂತರವನ್ನು ಮಾರುಕಟ್ಟೆಗೆ ತರುವಂತಹ ಪ್ರಯತ್ನವನ್ನು ಮಾಡುತ್ತಿದ್ದು ಇದಕ್ಕೆ Vida ಎನ್ನುವಂತಹ ಹೆಸರನ್ನು ಕೂಡ ಇಟ್ಟಿದೆ.

ಈಗಾಗಲೇ ದೇಶದಲ್ಲಿ ಎಲೆಕ್ಟ್ರಿಕಲ್ ಬೈಕುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದ್ವಿಚಕ್ರವಾಹನಗಳ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಂತಹ TVS ಹಾಗೂ Royal Enfield ಗಳಂತಹ ಸಂಸ್ಥೆಗಳು ಕೂಡ ತಮ್ಮ ವಾಹನವನ್ನು ಮಾರುಕಟ್ಟೆಗೆ ಇಳಿಸಿದ್ದು ಇದೇ ಕಾರಣಕ್ಕಾಗಿ ಹೀರೋ ಹೋಂಡಾ ಕೂಡ ತನ್ನ ದ್ವಿಚಕ್ರ ವಾಹನಗಳ ಎಲೆಕ್ಟ್ರಿಕಲ್ ರೂಪಾಂತರವನ್ನು ಮಾರುಕಟ್ಟೆಗೆ ಇಳಿಸಬೇಕಾದಂತಹ ಪರಿಸ್ಥಿತಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ಒಂದೊಂದೇ ಎಲೆಕ್ಟ್ರಿಕಲ್ ರೂಪಾಂತರದ ಬೈಕುಗಳನ್ನು ಮಾರುಕಟ್ಟೆಗೆ ಇಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಇದು ಯಾವಾಗ ನಡೆಯುತ್ತದೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ

ಈಗಾಗಲೇ ನಿಮ್ಮೆಲ್ಲರಿಗೂ ಗೊತ್ತೇ ಇದೆ ಹೀರೋ ಹೋಂಡಾ ಸಂಸ್ಥೆಯ Hero Splendor ಅತ್ಯಂತ ಹೆಚ್ಚು ಮಾರಾಟ ಆಗುವಂತಹ ದ್ವಿಚಕ್ರ ವಾಹ ಆಗಿದ್ದು ವಿಚಕ್ರ ವಾಹನಗಳ ಅಭಿಪ್ರಾಯ ಪ್ರಕಾರ ಒಂದು ವೇಳೆ Hero Honda Splendor ವಿದ್ಯುತ್ ರೂಪಾಂತರದಲ್ಲಿ ಮಾರುಕಟ್ಟೆಯಲ್ಲಿ ಇಳಿಸಿದರೆ ಖಂಡಿತವಾಗಿ ಇದು ಬೇರೆ ಎಲ್ಲಾ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳಿಗೆ ಕಾಂಪಿಟೇಶನ್ ನಲ್ಲಿ ಮಾಸ್ಟರ್ ಶ್ರೋಕ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಎಲ್ಲರೂ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮಾಧ್ಯಮ ಮೂಲಗಳ ಪ್ರಕಾರ ಹೀರೋ ಹೋಂಡಾ ಸ್ಪ್ಲೆಂಡರ್ ಎಲೆಕ್ಟ್ರಿಕಲ್ ರೂಪಾಂತರದಲ್ಲಿ ಮಾರುಕಟ್ಟೆಗೆ ಇಳಿದರೆ ಖಂಡಿತವಾಗಿ ಅದರ ಬೆಲೆ 45,000 ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭ ಆಗಬಹುದು ಎಂಬುದಾಗಿ ಮಾತುಕತೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ಈ ಬೈಕ್ ಎಲೆಕ್ಟ್ರಿಕಲ್ ರೂಪಾಂತರದಲ್ಲಿ ಮಾರುಕಟ್ಟೆಗೆ ಕಾಲಿಡುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಕನಿಷ್ಠಪಕ್ಷ 240 ಕಿಲೋ ಮೀಟರ್ ರೇಂಜ್ ಅನ್ನು ಈ ಬೈಕ್ ನೀಡಬಹುದು ಎಂಬುದಾಗಿ ಕೂಡ ಅಂದಾಜಿಸಲಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ

Post a Comment

Previous Post Next Post
CLOSE ADS
CLOSE ADS
×