ರೈತರಿಗೆ ಸಿಹಿ ಸುದ್ದಿ ಮುಂಗಾರು 14 ಬೆಳೆಗಳ ಬೆಂಬಲ ಬೆಲೆಯ ದರ ಹೆಚ್ಚಳ:ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳವಾಗಿದೆ ?

ರೈತರಿಗೆ ಸಿಹಿ ಸುದ್ದಿ ಮುಂಗಾರು 14 ಬೆಳೆಗಳ ಬೆಂಬಲ ಬೆಲೆಯ ದರ ಹೆಚ್ಚಳ:ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳವಾಗಿದೆ ?

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಸರ್ಕಾರವು ರೈತರಿಗೆ ಒಟ್ಟು 14 ಮುಂಗಾರು ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ರೈತರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ ಯಾವ ಯಾವ ಬೆಳೆಗೆ ಎಷ್ಟು ದರವನ್ನು ಹೆಚ್ಚಿಸಿದ್ದಾರೆ ಎಂದು ಈ ಲೇಖನಿಯಲ್ಲಿ ನೋಡೋಣ ಬನ್ನಿ.



ದೆಹಲಿ:ಮುಂಗಾರು ಹಂಗಾಮಿನ ಕೃಷಿ ಫಸಲುಗಳಿಗೆ, ಮುಖ್ಯವಾಗಿ ಆಹಾರ ಧಾನ್ಯಗಳಿಗೆ ಕೇಂದ್ರ ಸರಕಾರ ಅದಾಗಲೇ ‘ಲಾಭದಾಯಕ ಶಾಸನ ಬ ಬೆಲೆ’ (MSP) ಬೆಂಬಲ ಬೆಲೆ ನಿಗದಿಪಡಿಸಿದೆ. 

ಪ್ರತಿ ಆಹಾರ ಧಾನ್ಯದ ಉತ್ಪಾದನಾ ವೆಚ್ಚ ಆಧರಿಸಿ ಎಂ.ಎಸ್‌.ಪಿಯಲ್ಲಿ ಗಣನೀಯ ಹೆಚ್ಚಳ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅಂಗೀಕರಿಸಿದೆ.ಮುಂಗಾರು ಬೆಳೆಗಳ ಬೆಂಬಲ ಬೆಲೆಯ ದರವನ್ನು ಪರಿಷ್ಕರಿಸಿದ್ದು ಸರ್ಕಾರವು ರೈತರಿಗೆ ಒಟ್ಟು 14 ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡುವ ಮೂಲಕ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ.


 ಭತ್ತ,ರಾಗಿ, ದ್ವಿದಳ ಧಾನಗಳು, ಎಣ್ಣೆ ಕಾಳುಗಳಿಗೆ ಮಾರುಕಟ್ಟೆಯಲ್ಲಿ ದೊರಕಲಿ: ಬೇಕಾದ ಕನಿಷ್ಟ ಬೆಂಬಲ ಬೆಲೆಯಲ್ಲಿ ಕ್ವಿಂಟಲ್‌ಗೆ ಕನಿಷ್ಠ 128 – ಗರಿಷ್ಠ805 ರೂಪಾಯಿ. ಹೆಚ್ಚಳ ಮಾಡಲಾಗಿದೆ. ಕನಿಷ್ಠ ಎಂದರೆ ಮುಸುಕಿನ ಜೋಳ ಕ್ವಿಂಟಲ್‌ಗೆ 128 ರು., ಗರಿಷ್ಟ ಎಂದರೆ ಎಳ್ಳು(ಕಿ)ಗೆ 805 ರು. ಹೆಚ್ಚಳವಾಗಿದೆ. 

ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳವಾಗಿದೆ ?


(2022-23ರ ಬೆಲೆಗೆ ಹೋಲಿಸಿ ಹೆಚ್ಚಳ ಕ್ವಿಂಟಲ್‌ಗೆ)


 ಕನಿಷ್ಠ ಬೆಂಬಲ ಬೆಲೆ ಪರಿಷ್ಕರಣೆ ಹಳೇ ದರ ಹಾಗೂ ಹೊಸ ದರ 


 ಕನಿಷ್ಠ ಬೆಂಬಲ ಬೆಲೆ ಪರಿಷ್ಕರಣೆ (2022-23ರ ಬೆಲೆಗೆ ಹೋಲಿಸಿ ಹೆಚ್ಚಳ ಕ್ವಿಂಟಲ್‌ಗೆ)

 ಬೆಳೆಗಳು ಹಳೇ ದರ ಹೊಸ ದರ


ಭತ್ತ –ಸಾಮಾನ್ಯ 2040 2183

ಭತ್ತ-ದರ್ಜೆ ಎ 2060 2203

ಜೋಳ-ಹೈಬ್ರಿಡ್ 2970 3180

ಜೋಳ- ಮಾಲ್ದಂಡಿ 2990 3225

ರಾಗಿ 3578 3846

ಸಜ್ಜಿ 2350 2500

ಮೆಕ್ಕೆಜೋಳ 1962 2090

ತೊಗರಿ ಬೇಳೆ 6600 7000

ಹೆಸರು ಬೇಳೆ 7755 8558 

ಉದ್ದು 6600 6950

ನೆಲೆಗಡಲೆ 5850 6377  

ಸೂರ್ಯಕಾಂತಿ ಬಿಜ 6400 6760

ಸೋಯಾಬೀನ್ (ಹಳದಿ) 4300 4600

ಸಾಸಿವೆ 7830 8635

ಕಪ್ಪು ಎಳ್ಳು 7287 7734

ಹತ್ತಿ (ಮಧ್ಯಮ ಎಳೆ) 6080 6620 

ಹತ್ತಿ (ಉದ್ದನೆಯ ಎಳೆ) 6380 7020




Post a Comment

Previous Post Next Post
CLOSE ADS
CLOSE ADS
×