ಎಲ್ಲಿ ನೋಡಿದರೂ ಉಚಿತ ಖಚಿತ ನಿಶ್ಚಿತ ಎನ್ನುವಂತಹ ಮಾತುಗಳು ಪ್ರತಿಧ್ವನಿಸುತ್ತಿವೆ. ಹೌದು ರಾಜ್ಯಾದ್ಯಂತ ವಿರೋಧ ಪಕ್ಷದವರು ಉಚಿತ ಯೋಜನೆಗಳನ್ನು ಎಷ್ಟೇ ವಿರೋಧಿಸಿದರು ಕೂಡ ಜನರು ಮಾತ್ರ ಕಾಂಗ್ರೆಸ್ ಪಕ್ಷದ (Congress Party) ಐದು ಪ್ರಮುಖ ಯೋಜನೆಗಳ ಲಾಭವನ್ನು ಪಡೆಯಲು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಹೇಳಿರುವಂತಹ ಇದೊಂದು ಯೋಜನೆ ಮಾತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದಕ್ಕೂ ಮುಂಚೆನೇ ಸಾಕಷ್ಟು ಜನಪ್ರಿಯವಾಗಿ ಸೌಂಡ್ ಮಾಡಿತ್ತು. ಇನ್ನು ಈಗಾಗಲೇ ಜುಲೈ 1 ರಿಂದ ಗ್ರಹ ಜ್ಯೋತಿ ಯೋಜನೆ (Gruha Lakshmi Yojana) ಜಾರಿಗೆ ಬರುತ್ತದೆ ಎಂಬುದಾಗಿ ಸರ್ಕಾರ ಅಧಿಕೃತವಾಗಿ ದಿನಾಂಕವನ್ನು ಕೂಡ ಘೋಷಿಸಿದೆ
ಇನ್ನು ಎಲ್ಲಕ್ಕಿಂತ ಪ್ರಮುಖವಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಹ ಜ್ಯೋತಿ ಯೋಜನೆಗೆ ರಿಜಿಸ್ಟರ್ ಮಾಡಿಕೊಂಡವರಿಗೆ ಮಾತ್ರ ಈ ಯೋಜನೆಯನ್ನು ನೀಡಲಾಗುವುದು ಎಂಬುದಾಗಿ ಕೂಡ ಸುತ್ತೋಲೆಗಳು ಹೊರಡಿವೆ. ಇನ್ನು ಇದೊಂದು ಕೆಲಸವನ್ನು ಮಾಡದೆ ಹೋದಲಿ ಖಂಡಿತವಾಗಿ ನಿಮಗೆ ಸಿಗುವಂತಹ ಗ್ರಹ ಜ್ಯೋತಿ ಉಚಿತ ವಿದ್ಯುತ್ ಯೋಜನೆ, ನಿಮ್ಮ ಕೈತಪ್ಪಿ ಹೋಗಬಹುದಾದ ಸಾಧ್ಯತೆ ಕೂಡ ಹೆಚ್ಚಿದೆ. ಹಾಗಿದ್ದರೆ ಆ ನಿಯಮ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಗೆಳೆಯರೇ, ಜೂನ್ 30ರ ವರೆಗಿನ ಯಾವುದೇ ವಿದ್ಯುತ್ ಬಿಲ್ ಬಾಕಿ ಇದ್ದರೆ ಅದನ್ನು ಅಲ್ಲಿಂದ ಮೂರು ತಿಂಗಳ ಒಳಗೆ ಪೂರ್ತಿಯಾಗಿ ಕಟ್ಟಬೇಕು ಇಲ್ಲವಾದಲ್ಲಿ ನಿಮಗೆ ಉಚಿತ ವಿದ್ಯುತ್ ಸಿಗುವುದಿಲ್ಲ. ಇದನ್ನು ಈಗಾಗಲೇ ಅಧಿಕೃತವಾಗಿ ವಿದ್ಯುತ್ ಇಲಾಖೆ ಕೂಡ ಸ್ಪಷ್ಟೀಕರಿಸಿದ್ದು ನಿಮ್ಮ ಎಲ್ಲಾ ಬಾಕಿ ವಿದ್ಯುತ್ ಬಿಲ್ (Electricity Bill) ಅನ್ನು ಈ ಕೂಡಲೇ ಕಟ್ಟಿ ಹಾಗೂ ಜುಲೈ ತಿಂಗಳದಿಂದ ನಿಮ್ಮ ಉಚಿತ ವಿದ್ಯುತ್ ಅನ್ನು ನೀವು ಆನಂದಿಸಬಹುದಾಗಿದೆ.