Woman Must Pay Luggage Charge In KSRTC Bus :
ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಮಹಿಳೆಯರು ತೆಗೆದುಕೊಂಡು ಹೋಗುವ ಲಗೇಜ್ ಕೂಡಾ ಉಚಿತ ಎಂದು ಬಸ್ ನಿರ್ವಾಹಕರೊಂದಿಗೆ ಹಲವೆಡೆ ವಾದ ವಿವಾದ ನಡೆಯುತ್ತಿವೆ. ಈ ಹಿನ್ನೆಲೆ ಬಸ್‌ನಲ್ಲಿ ಎಷ್ಟು ತೂಕದವರೆಗೂ ಉಚಿತ ಶುಲ್ಕ. ಆ ನಂತರ ಎಷ್ಟು ಶುಲ್ಕ ಪಾವತಿಸಬೇಕು, ಯಾವ ಲಗೇಜ್ ಕೊಂಡೋಯ್ಯ ಬಹುದು, ಸಾಕು ಪ್ರಾಣಿಗಳಿಗೆ ಟಿಕೆಟ್ ಎಷ್ಟು? ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.
ಒಬ್ಬ ಪ್ರಯಾಣಿಕ 30 ಕೆಜಿ ವರೆಗೂ ಲಗೇಜ್ ಉಚಿತ ಸಾಗಣೆ ಮಾಡಬಹುದು.
ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ ಎಂಬ ಕಾರಣಕ್ಕೆ ತಮ್ಮ ಲಗೇಜ್‌ಗೂ ಉಚಿತವಿಲ್ಲ.
ಮಹಿಳೆಯರು ತಮ್ಮ ಲಗೇಜ್ ಶುಲ್ಕ ಪಾವತಿಸು ಸಂಬಂಧ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಸಾಕಷ್ಟು ವಾದ ವಿವಾದಗಳು ನಡೆಸುತ್ತಿದ್ದಾರೆ.
ಬೆಂಗಳೂರು: ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ ಬಳಿಕ ಉಚಿತ ಲಗೇಜ್ ಸಾಗಣಿಗೂ ಹಲವು ಮಹಿಳಾ ಪ್ರಯಾಣಿಕರು ಪಟ್ಟು ಹಿಡಿದಿದ್ದಾರೆ. ಲಗೇಜ್ ಶುಲ್ಕ ಸಂಬಂಧ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿವೆ.
ಈ ಹಿನ್ನೆಲೆ ಕೆಎಸ್‌ಆರ್‌ಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದೆ. " ಒಬ್ಬ ಪ್ರಯಾಣಿಕ 30 ಕೆಜಿ ವರೆಗೂ ಲಗೇಜ್ ಉಚಿತ ಸಾಗಣೆ ಮಾಡಬಹುದು. ಅದಕ್ಕಿಂತ ಹೆಚ್ಚಿನ ತೂಕದ ಲಗೇಜ್ ಇದ್ದರೆ ಮೇಲಿನ ತೂಕಕ್ಕೆ ತಲಾ ಒಂದು ಕೆಜಿಗೆ ಇಂತಿಷ್ಟು ಎಂದು ಹಣ ಪಾವತಿಸಬೇಕಾಗುತ್ತದೆ " ಎಂದು ತಿಳಿಸಿದೆ.
ಮಹಿಳೆಯರು ಲಗೇಜ್ ದರ ಪಾವತಿಸಬೇಕು
ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ ಎಂಬ ಕಾರಣಕ್ಕೆ ತಮ್ಮ ಲಗೇಜ್‌ಗೂ ಉಚಿತವಿಲ್ಲ. 30 ಕೆ.ಜಿ ಮೇಲೆ ಲಗೇಜ್ ಕೊಂಡೊಯ್ಯುತ್ತಿದ್ದರೆ ಕಡ್ಡಾಯವಾಗಿ ಪ್ರತಿ ಕೆಜಿಗೆ ಇಂತಿಷ್ಟು ಎಂದು ದರವನ್ನು ಮಹಿಳಾ ಪ್ರಕಾಣಿಕರು ಪಾವತಿಸಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಲಗೇಜ್ ಸೀಟ್‌ಗಳ ಮೇಲೆ ಇಡುವಂತಿಲ್ಲ
" ಪ್ರಯಾಣಿಕರು ತಮ್ಮ ಲಗೇಜ್ ಅನ್ನು ಬಸ್‌ನ ಟಾಪ್ ಅಥವಾ ಲಗೇಜ್ ಡಿಕ್ಕಿಯಲ್ಲಿ ಹಾಕಬೇಕು. ತಮ್ಮ ಪಕ್ಕದ ಸೀಟ್, ಬಸ್ ಡ್ರೈವರ್ ಪಕ್ಕ ಅಥವಾ ಇಂಜಿನ್ ಪಕ್ಕ ಇಟ್ಟುಕೊಳ್ಳಬಾರದು. ಲಗೇಜ್‌ನಿಂದ ಸಹ ಪ್ರಯಾಣಿಕರಿಗೆ ಅಥವಾ ಡ್ರೈವರ್, ಕಂಡಕ್ಟರ್‌ಗಳಿಗೆ ಸಮಸ್ಯೆಯಾಗಬಾರದು " ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ವಾಣಿಜ್ಯ ವಸ್ತುಗಳಿಗೆ ಉಚಿತ ಅನ್ವಯವಾಗಲ್ಲ
ಉಚಿತ ಲಗೇಜ್ ಮಿತಿಯು ಪ್ರಯಾಣಿಕರ ವೈಯಕ್ತಿಕ ವಾಣಿಜ್ಯೇತರ ವಸ್ತುಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ವಸ್ತುಗಳಿಗೆ ಲಗೇಜ್ ಶುಲ್ಕ ಅನ್ವಯಿಸುತ್ತದೆ. ಬಸ್ಸಿನಲ್ಲಿ ಕೊಂಡೊಯ್ಯುತ್ತಿರುವ ಲಗೇಜ್‍ಗೆ ಮೊದಲ ಸ್ಥಳದಲ್ಲಿಯೇ ದರ ವಿಧಿಸದೇ ಲಗೇಜ್ ಚೀಟಿಯನ್ನು ಪಡೆಯದಿದ್ದಲ್ಲಿ, ನಿರ್ದಿಷ್ಟ ಲಗೇಜ್‍ನ ದರದ ಎರಡು ಪಟ್ಟು ದಂಡವನ್ನು ಪ್ರಯಾಣಿಕರಿಗೆ ವಿಧಿಸಲಾಗುತ್ತದೆ.
ಸಾಕು ಪ್ರಾಣಿಗಳಿಗೆ ಟಿಕೆಟ್ ಪಡೆಯಬೇಕು
ಸಾಕು ಪ್ರಾಣಿ / ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಲು ಅನುಮತಿಸಿದೆ. ಪ್ರತಿಷ್ಠಿತ ಸಾರಿಗೆಗಳಾದ ಕರ್ನಾಟಕ ವೈಭವ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್ ಮತ್ತು ಎಲ್ಲಾ ರೀತಿಯ ಹವಾನಿಯಂತ್ರಿತ ಸಾರಿಗೆಗಳಲ್ಲಿ ಸಾಕು ಪ್ರಾಣಿ/ ಪಕ್ಷಿಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ. ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಮಕ್ಕಳಿಗೆ ವಿಧಿಸುವಂತೆ ಅರ್ಧ ಟಿಕೆಟ್ ಶುಲ್ಕ ವಿಧಿಸಲಾಗುತ್ತದೆ.
ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಮಕ್ಕಳಿಗೆ ವಿಧಿಸುವಂತೆ ಅರ್ಧ ಟಿಕೆಟ್ ಶುಲ್ಕ ವಿಧಿಸಲಾಗುತ್ತದೆ.
ಲಗೇಜ್ ದರವೆಷ್ಟು?
ಬಸ್ ಚಲಿಸುವ ಪ್ರತಿ ಹಂತಕ್ಕೆ (ಸ್ಟೇಜ್) ಒಂದು ಯೂನಿಟ್‌ಗೆ 75 ಪೈಸೆ ದರವಿದೆ. ಕನಿಷ್ಠ 5 ರೂಪಾಯಿ ಲಗೇಜ್ ದರ ವಿಧಸಲಾಗುತ್ತದೆ. ಲಗೇಜ್ ಅನ್ನು ಯೂನಿಟ್‌ನಲ್ಲಿ (10 ಕೆಜಿ ಅಥವಾ ಲಗೇಜ್ ಮಾದರಿ ಆಧರಿಸಿ ಇಂತಿಷ್ಟು ಕೆಜಿಗೆ ಒಂದು ಯೂನಿಟ್) ಪರಿಗಣಿಸಿ ದರ ವಿಧಿಸಲಾಗುತ್ತದೆ.
ಪ್ರಯಾಣಿಕರ ಲಗೇಜ್ ಕುರಿತು ಕೆಎಸ್‌ಆರ್‌ಟಿಸಿ ನಿಯಮಗಳಿವು
ಪ್ರತಿ ಪ್ರಯಾಣಿಕರು 30 ಕೆ.ಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ. ಮಕ್ಕಳು 15 ಕೆ.ಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ.
ಅವಕಾಶಕ್ಕಿಂತ ಹೆಚ್ಚಿನ ತೂಕದ ಲಗೇಜ್ ಕೊಂಡೊಯ್ಯುವ ಪ್ರಯಾಣಿಕರಿಗೆ, ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವ ಲಗೇಜ್ ಹೊರತುಪಡಿಸಿ, ಉಳಿದ ಲಗೇಜ್‍ಗೆ ದರ ವಿಧಿಸಲಾಗುವುದು.
ಅವಕಾಶಕ್ಕಿಂತ ಹೆಚ್ಚಿನ ತೂಕದ ಲಗೇಜ್ ಕೊಂಡೊಯ್ಯುವ ಪ್ರಯಾಣಿಕರಿಗೆ, ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವ ಲಗೇಜ್ ಹೊರತುಪಡಿಸಿ, ಉಳಿದ ಲಗೇಜ್‍ಗೆ ದರ ವಿಧಿಸಲಾಗುವುದು.