ಬಿಸಿಲ ತಾಪಮಾನಕ್ಕೆ ತತ್ತರಿಸಿದ ಕೋಳಿಗಳು; ಮೊಟ್ಟೆ ದರ ದುಬಾರಿ ರೀ.

ಬಿಸಿಲ ತಾಪಮಾನಕ್ಕೆ ತತ್ತರಿಸಿದ ಕೋಳಿಗಳು; ಮೊಟ್ಟೆ ದರ ದುಬಾರಿ ರೀ.

 Egg Prices Increase : 



ರಾಜ್ಯದಲ್ಲಿ ಬೇಸಿಗೆ ಕಾಲ ಮುಗಿಯುತ್ತಾ ಬಂದರೂ ಬಿಸಿಲ ಝಳ ಮಾತ್ರ ಇನ್ನು ತಗ್ಗಿಲ್ಲ. ಈ ಉಷ್ಣ ವಾತಾವರಣವು ಕೋಳಿ ಸಾಕಾಣಿಕೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಕೋಳಿ ಮೊಟ್ಟೆಯ ಬೆಲೆ ಏರಿಕೆಯಾಗಿದೆ. ರಾಜ್ಯದಲ್ಲಿ ನಿತ್ಯ 1.6 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತಿದ್ದು, ಉತ್ಪಾದನೆ ಶೇ 15 ರಷ್ಟು ಕುಂಟಿತವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಬಿಸಿಲ ತಾಪಮಾನಕ್ಕೆ ತತ್ತರಿಸಿದ ಕೋಳಿಗಳು ಮೊಟ್ಟೆ ಉತ್ಪಾದನೆ ಕುಂಠಿತ.

ಮೊಟ್ಟೆ ಸಗಟು ದರ 5.65 ರೂ., ಚಿಲ್ಲರೆ ದರ 6.50 ರೂ. ಹಾಪ್‌ಕಾಮ್ಸ್‌ನಲ್ಲಿಒಂದಕ್ಕೆ 6.50 ರೂ.

ರಾಜ್ಯದಲ್ಲಿ ನಿತ್ಯ 1.6 ಕೋಟಿ ಮೊಟ್ಟೆಗಳು ಉತ್ಪಾದನೆ, ಸದ್ಯ ಬಿಸಿಲ ತಾಪಕ್ಕೆ ಶೇ. 15 ರಷ್ಟು ಉತ್ಪಾದನೆ ಕುಸಿತ.

ಅಧಿಕ ತಾಪಮಾನದಿಂದಾಗಿ ಈ ಬಾರಿ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಯತೊಡಗಿವೆ. ಜತೆಗೆ ಶೆಡ್‌ನೊಳಗೆ ಬಿಸಿ ಗಾಳಿ ಬೀಸುವುದರಿಂದ ಕೋಳಿಗಳಿಗೆ ರೋಗ ಬಾಧೆಗಳು ಹೆಚ್ಚು. ಇದು ಮೊಟ್ಟೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿದ್ದು, ಮೊಟ್ಟೆ ದರದಲ್ಲಿಏರಿಕೆಯಾಗಿದೆ. ಇದರಿಂದ ಮೊಟ್ಟೆ ಪ್ರಿಯರಿಗೆ ಭಾರಿ ಹೊಡೆತ ಬಿದ್ದಿದೆ

ಬೇಸಿಗೆಯಲ್ಲಿ ಕೋಳಿಗಳು ಆಹಾರ ತಿನ್ನುವುದು ಕಡಿಮೆ. ಈ ಕಾಲದಲ್ಲಿ ಕೋಳಿಗಳು ಹೆಚ್ಚಾಗಿ ನೀರು ಕುಡಿಯುತ್ತವೆ. ಇದರಿಂದ ಕೋಳಿಗಳಲ್ಲಿ ಪುಷ್ಪಿ ಕಡಿಮೆಯಾಗಿ ಮೊಟ್ಟೆ ಇಡುವುದು ಕಡಿಮೆಯಾಗಿದೆ. ಇದರ ಜತೆಗೆ ಇತ್ತೀಚೆಗೆ ಸಾರಿಗೆ ವೆಚ್ಚವೂ ದುಬಾರಿಯಾಗಿದೆ. ಇದರಿಂದ ಮೊಟ್ಟೆ ದರವು 50ರಿಂದ 60 ಪೈಸೆ ಏರಿಕೆಯಾಗಿದೆ.

ಸಾರಿಗೆ ವೆಚ್ಚ ಎಷ್ಟು ಹೆಚ್ಚಳ

''ತಮಿಳುನಾಡಿನ ನಾಮಕ್ಕಲ್‌ನಿಂದಲೂ ನಾವು ಮೊಟ್ಟೆಗಳನ್ನು ತರಿಸುತ್ತೇವೆ. ಒಂದು ಮೊಟ್ಟೆ ಸಾಗಿಸಲು 16-17 ಪೈಸೆ ವೆಚ್ಚ ತಗಲುತ್ತಿತ್ತು. ಈಗ ಅದು 20-21 ಪೈಸೆಗೆ ಏರಿಕೆಯಾಗಿದೆ. ಜತೆಗೆ ಶೇ.15ರಷ್ಟು ಉತ್ಪಾದನಾ ಪ್ರಮಾಣ ಕುಸಿದಿದೆ. ಹೀಗಾಗಿ, ಕೋಳಿ ಮೊಟ್ಟೆ ದರ ಪ್ರತಿ ಎರಡರಿಂದ ಮೂರು ದಿನಕ್ಕೊಮ್ಮೆ ಪ್ರತಿ ಮೊಟ್ಟೆಗೆ 2-3 ಪೈಸೆ ಹೆಚ್ಚುತ್ತಾ ಬಂದಿದ್ದು, ಈಗ ಸಗಟು ದರದಲ್ಲಿ 5.65 ರೂ. ಇದೆ. ಚಿಲ್ಲರೆ ಮಾರಾಟಗಾರರು ಒಂದು ಮೊಟ್ಟೆಯನ್ನು 6.50 ರೂ.ನಂತೆ ಮಾರುತ್ತಿದ್ದಾರೆ,'' ಎಂದು ನ್ಯಾಷನಲ್‌ ಎಗ್‌ ಕೋ ಆರ್ಡಿನೇಷನ್‌ ಕಮಿಟಿಯ ಬೆಂಗಳೂರು ವಲಯದ ಅಧ್ಯಕ್ಷ ಬಿ.ಆರ್‌. ಸಾಯಿನಾಥ್‌ ತಿಳಿಸಿದ್ದಾರೆ.

ಕೋಳಿ ಸಾಕಾಣೆ ದುಬಾರಿ

ಕೋಳಿಗಳ ಆಹಾರವಾದ ಜೋಳ, ಸೋಯಾ, ಕಡ್ಲೆಕಾಯಿ ಕೇಕ್‌, ಸೂರ್ಯಕಾಂತಿ ಇಂಡಿ, ಅಕ್ಕಿತೌಡು ಬೆಲೆ ದುಬಾರಿಯಾಗಿದೆ. ಕೂಲಿ ಕಾರ್ಮಿಕರ ಕೊರತೆಯೂ ಎದುರಾಗಿದೆ. ವಿದ್ಯುತ್‌, ನಿರ್ವಹಣೆ ವೆಚ್ಚವೂ ದುಬಾರಿಯಾಗಿದೆ. ಮೊಟ್ಟೆ ಏರಿಕೆಯ ದರ ಸಾಕಾಣಿಕೆದಾರರಿಗೇನೂ ಲಾಭದಾಯಕವಲ್ಲ. ಅಷ್ಟೇ ಖರ್ಚುಗಳಿವೆ ಎನ್ನುತ್ತಾರೆ ಸಾಕಣೆದಾರರು.


1.60 ಕೋಟಿ ರಾಜ್ಯದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಮೊಟ್ಟೆಗಳ ಸಂಖ್ಯೆ

ರಾಜ್ಯದಲ್ಲಿನಿತ್ಯ ಸುಮಾರು 1.60 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತಿದೆ. ಇದರಲ್ಲಿಶೇ.50ರಷ್ಟು ಬಳಕೆ ಮಾಡುತ್ತಿರುವ ನಗರ ಬೆಂಗಳೂರು. ರಾಜ್ಯಕ್ಕೆ ನಾಮಕ್ಕಲ್‌, ಹೊಸಪೇಟೆ, ಹೈದರಾಬಾದ್‌ಗಳಿಂದಲೂ ಬರುತ್ತಿವೆ. ಹಾಗೆಯೇ ಮೈಸೂರು ಭಾಗದಲ್ಲಿಉತ್ಪಾದನೆಯಾಗುವ ಸ್ವಲ್ಪ ಪ್ರಮಾಣದ ಮೊಟ್ಟೆ ಕೇರಳಕ್ಕೂ ರವಾನೆಯಾಗುತ್ತದೆ. ಈ ಬಾರಿ ವಾತಾವರಣದ ಏರುಪೇರಿನಿಂದಾಗಿ ಮೊಟ್ಟೆ ಉತ್ಪಾದನೆಯಲ್ಲಿಶೇ.15ರಷ್ಟು ಕುಂಠಿತಗೊಂಡಿದ್ದು, ದರಗಳಲ್ಲಿಏರಿಕೆಯಾಗಿದೆ ಎಂದು ನ್ಯಾಷನಲ್‌ ಎಗ್‌ ಕೋ ಆರ್ಡಿನೇಷನ್‌ ಕಮಿಟಿ ಬೆಂಗಳೂರು ವಲಯದ ಅಧ್ಯಕ್ಷ ಬಿ.ಆರ್‌. ಸಾಯಿನಾಥ್‌ ಮಾಹಿತಿ ನೀಡಿದ್ದಾರೆ.

ಮೊಟ್ಟೆ ದರ ಏರಿಕೆಗೆ ಪ್ರಮುಖ ಕಾರಣ?


ಅಧಿಕ ತಾಪಮಾನದಿಂದ ಕೋಳಿಗಳಿಗೆ ರೋಗಬಾಧೆ ಹೆಚ್ಚಿದ್ದು, ಮೊಟ್ಟೆ ಉತ್ಪಾದನೆ ಇಳಿಕೆ

ತರಕಾರಿಗಳ ದರ ಏರಿಕೆಯಾಗಿರುವುದರಿಂದ ಕೆಲವರು ಮೊಟ್ಟೆ ಖರೀದಿಸುತ್ತಾರೆ.

ಮದುವೆ ಸಮಾರಂಭಗಳ ಹಿನ್ನೆಲೆಯಲ್ಲಿಬೀಗರೂಟದ ಕಾರ್ಯಕ್ರಮಗಳೂ ಜೋರಾಗಿ ನಡೆಯುತ್ತಿವೆ.

ಜಾತ್ರೆ, ಊರ ಹಬ್ಬಗಳ ಹಿನ್ನೆಲೆಯಲ್ಲಿ ಮಾಂಸದೂಟ ಕೂಡ ಹೆಚ್ಚಾಗಿ ನಡೆಯುತ್ತಿದ್ದು, ಮೊಟ್ಟೆಗಳಿಗೂ ಬೇಡಿಕೆ ಸೃಷ್ಟಿ

ಸಾವಿರ ಮೊಟ್ಟೆಗಳನ್ನು ವಾಹನದಲ್ಲಿತರುವಾಗ ಕನಿಷ್ಠ 20-30 ಮೊಟ್ಟೆಗಳು ಡ್ಯಾಮೇಜ್‌ ಆಗುತ್ತವೆ. ಜತೆಗೆ ಸಾರಿಗೆ ವೆಚ್ಚ ದುಬಾರಿ.

Post a Comment

Previous Post Next Post

Top Post Ad

CLOSE ADS
CLOSE ADS
×