ಫ್ರೀ ಕೃಷಿ ಯಂತ್ರ, ಉಚಿತ ಟ್ರಾಕ್ಟರ್! ರಾಜ್ಯದ ಎಲ್ಲಾ ರೈತರಿಗೆ 3 ಹೊಸ ಭರ್ಜರಿ ಗಿಫ್ಟ್.!

ಫ್ರೀ ಕೃಷಿ ಯಂತ್ರ, ಉಚಿತ ಟ್ರಾಕ್ಟರ್! ರಾಜ್ಯದ ಎಲ್ಲಾ ರೈತರಿಗೆ 3 ಹೊಸ ಭರ್ಜರಿ ಗಿಫ್ಟ್.!

For farmers : ನಮಸ್ಕಾರ ಸ್ನೇಹಿತರೇ, ರಾಜ್ಯ ಹಾಗು ಕೇಂದ್ರ ಸರ್ಕಾರದಿಂದ ಎಲ್ಲ ರೈತರಿಗೆ ಭರ್ಜರಿ ಸಿಹಿಸುದ್ಧಿಯನ್ನ ನೀಡಲಾಗಿದ್ದು,



 ಎಲ್ಲಾ ರೈತರಿಗೆ ಇದೀಗ ಉಚಿತವಾಗಿ ಟಾರ್ಪಲಿನ್ ವಿತರಣೆ ಸೇರಿದಂತೆ ಕೃಷಿ ಉಪಕರಣಗಳನ್ನ ಖರೀದಿಸಲು ಸರ್ಕಾರದಿಂದ ಸಬ್ಸಿಡಿ ಸಹಾಯಧನ ಸೇರಿದಂತೆ, ಟ್ರಾಕ್ಟರ್ ಕೂಡ ಖರೀದಿಸಲು ಸರಕಾರದಿಂದ ಹಣ ಸಹಾಯಧನ ಸಬ್ಸಿಡಿಯನ್ನ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಎಲ್ಲಿ ಅರ್ಜಿ ಸಲ್ಲಿಸಬೇಕು? ರೈತರಿಗಾಗಿ ಬಂದ ಸಿಹಿಸುದ್ಧಿ ಏನು ಅನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ರೈತರಿಗೆ ಉಚಿತ ಟಾರ್ಪಲಿನ್ ವಿತರಣೆ

ಹೌದು, ರೈತರಿಗೆ ಬೆಳೆಗಳ ರಾಶಿ ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗು ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ, ಆಹಾರ ಧಾನ್ಯಗಳ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಲೆಂದು ಕೃಷಿ ಇಲಾಖೆಯಿಂದ ಇದೀಗ ಟಾರ್ಪಲಿನ್ ವಿತರಿಸಲಾಗುತ್ತಿದ್ದು, ಅದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಟಾರ್ಪಲಿನ್ ಉಚಿತವಾಗಿ ಅರ್ಜಿ ಸಲ್ಲಿಸಿದ ರೈತರಿಗೆ ನೀಡಲಾಗುತ್ತದೆ.

ರೈತರಿಗಾಗಿ ಕೃಷಿ ಯಂತ್ರೋಪಕರಣಗಳು

ಹೌದು, ಟ್ರಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, mb ನೇಗಿಲು, ಭತ್ತ ನಾಟಿ ಯಂತ್ರ ಸೇರಿದಂತೆ ವಿವಿಧ ಬಗೆಯ ಯಂತ್ರಗಳನ್ನ ಖರೀದಿಸಲು ಸರಕಾರದಿಂದ ಇದೀಗ ಸಬ್ಸಿಡಿ ಸಹಾಯಧನವನ್ನ ವಿತರಣೆ ಮಾಡಲಾಗುತ್ತಿದೆ. ಹಾಗು ಕರ್ನಾಟಕ ರಾಜ್ಯ ಸರಕಾರದಿಂದ ರೈತರಿಗೆ ಇದೀಗ ಜಮೀನಿಗೆ ಬೇಕಾದ ಸ್ಪ್ರಿಂಕ್ಲರ್ ಹಾಗು ಪೈಪ್ ಲೈನ್ ಗಳಿಗೆ ಶೇಕಡಾ 80% ರಷ್ಟು ಸಬ್ಸಿಡಿ ಸಹಾಯಧನ ಕೂಡ ಒದಗಿಸಿಕೊಡಲಾಗುತ್ತಿದ್ದು, 

ಈ ಎಲ್ಲಾ ಯೋಜನೆಗಳ ಲಾಭವನ್ನ ನೀವು ನಿಮ್ಮ ವಲಯದ ರೈತ ಸಂಪರ್ಕ ಕೇಂದ್ರ ಹಾಗು ಕೃಷಿ ಇಲಾಖೆಗೆ ಭೇಟಿ ಕೊಟ್ಟು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಎಲ್ಲಾ ಕಡೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗುವಂತೆ ಮಾಡಿ.

Post a Comment

Previous Post Next Post
CLOSE ADS
CLOSE ADS
×